ಕರ್ನಾಟಕ

karnataka

ETV Bharat / bharat

ಲಾಕ್ ಡೌನ್ ಅವಧಿಯಲ್ಲಿ 1.5 ಕೋಟಿ ಜನರೊಂದಿಗೆ ಸಂವಹನ ನಡೆಸಿದ ಕೇಂದ್ರ ಸಚಿವ ನಿತಿನ್ ಗಡ್ಕರಿ - ಕೇಂದ್ರ ಸಚಿವ ನಿತಿನ್ ಗಡ್ಕರಿ

ರಸ್ತೆ ಸಾರಿಗೆ ಮತ್ತು ಎಂಎಸ್‌ಎಂಇ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ ಕೇಂದ್ರ ಸಚಿವ ನಿತಿನ್ ಗಡ್ಕರಿ ಲಾಕ್ ಡೌನ್ ಅವಧಿಯಲ್ಲಿ ದೇಶದ 1.5 ಕೋಟಿ ಜನರೊಂದಿಗೆ ಸಂವಾದ ನಡೆಸಿದ್ದಾರೆ. ಈ ವೇಳೆ ಅವರು ಜನರ ಕಷ್ಟಗಳನ್ನು ಆಲಿಸಿ ಪರಿಹಾರ ಸೂಚಿಸಿದ್ದಾರೆ.

Lockdown: Gadkari reached out to 1.05 cr people,says his office
Lockdown: Gadkari reached out to 1.05 cr people,says his office

By

Published : Apr 27, 2020, 8:47 AM IST

ನಾಗ್ಪುರ (ಮಹಾರಾಷ್ಟ್ರ): ಲಾಕ್‌ ಡೌನ್ ಅವಧಿಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿವಿಧ ಹಂತಗಳಲ್ಲಿ ಸುಮಾರು 1.5 ಕೋಟಿ ಜನರೊಂದಿಗೆ ವಿಡಿಯೋ ಕಾನ್ಫರೆನ್ಸಿಂಗ್ ಮತ್ತು ಇತರ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಸಂವಾದ ನಡೆಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಈ ಬಗ್ಗೆ ಮಾಹಿತಿ ನೀಡಿದ ರಸ್ತೆ ಸಾರಿಗೆ ಮತ್ತು ಎಂಎಸ್‌ಎಂಇ ಸಚಿವಾಲಯ, ಜನರೊಂದಿಗೆ ಸಂವಾದ ನಡೆಸುವ ವೇಳೆ ಸಚಿವರು ಅವರಿಗೆ ಆರೋಗ್ಯ ಕಾಪಾಡಿಕೊಳ್ಳುವ ಬಗ್ಗೆ ನಿರ್ದೇನಗಳನ್ನು ನೀಡಿದ್ದಾರೆ ಮತ್ತು ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಸೂಚಿಸಿದ್ದಾರೆ ಎಂದಿದೆ.

ಸಚಿವರೊಂದಿಗೆ ಪ್ತತ್ಯಕ್ಷ ಮತ್ತು ಪರೋಕ್ಷವಾಗಿ ಚರ್ಚೆ ನಡೆಸಿದವರಲ್ಲಿ ಉದ್ಯಮಿಗಳು, ವಿದ್ಯಾರ್ಥಿಗಳು ಮತ್ತು ಪತ್ರಕರ್ತರು, ಎಫ್‌ಐಸಿಸಿಐ, ಎಸ್‌ಎಂಇ, ಪಿಎಚ್‌ಡಿ ಚೇಂಬರ್ ಆಫ್ ಕಾಮರ್ಸ್, ಎಐಪಿಎಂಎ, ಭಾರತೀಯ ಶಿಕ್ಷನ್ ಮಂಡಲ್, ಯುವ ಅಧ್ಯಕ್ಷರ ಸಂಘ, ಮಹಾರಾಷ್ಟ್ರ ಆರ್ಥಿಕ ಅಭಿವೃದ್ಧಿ ಮಂಡಳಿ, ಅಸ್ಸೋಮ್, ಸಿಇಒ ಕ್ಲಬ್ ಆಫ್ ಇಂಡಿಯಾ, ಭಾರತ್ ಚೇಂಬರ್ ಆಫ್ ಕಾಮರ್ಸ್, ಕ್ರೆಡೈ ಮುಂಬೈ ಒಳಗೊಂಡಿದೆ ಎಂದು ಸಚಿವಾಲಯ ತಿಳಿಸಿದೆ.

ABOUT THE AUTHOR

...view details