ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ಸುಷ್ಮಾ ಸ್ವರಾಜ್ ಅವರು ಸಮಾಜದ ಕೊನೆಯ ವ್ಯಕ್ತಿಯನ್ನೂ ತಲುಪುವ ಸರಳ ವ್ಯಕ್ತಿತ್ವ ಹೊಂದಿದ್ದರು.
ಫ್ಯಾನ್ಸಿಡ್ರೆಸ್ ಸ್ಪರ್ಧೆಯಲ್ಲಿ ತಮ್ಮಂತೆ ಡ್ರೆಸ್ ಮಾಡಿಕೊಂಡಿದ್ದ ಹುಡುಗಿಗೆ ಸುಷ್ಮಾ ಏನು ಹೇಳಿದ್ರು? - ಸುಷ್ಮಾ ಸ್ವರಾಜ್
ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುತ್ತಿದ್ದ ಸುಷ್ಮಾ ಸ್ವರಾಜ್ ಅವರು ಸಮಾಜದ ಕೊನೆಯ ವ್ಯಕ್ತಿಯನ್ನೂ ತಲುಪುವ ಸರಳ ವ್ಯಕ್ತಿತ್ವ ಹೊಂದಿದ್ದರು.
ವಿದೇಶಾಂಗ ಸಚಿವೆಯಾಗಿದ್ದಾಗ ಟ್ವಿಟರ್ ಮೂಲಕ ಹರಿದುಬಂದ ದೂರುಗಳನ್ನೂ ಅಧಿಕೃತ ಎಂದು ಪರಿಗಣಿಸಿ ಪರದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ ಭಾರತೀಯರಿಗೆ ನೆರವಿನ ಹಸ್ತ ಚಾಚಿದರು. 2016ರಲ್ಲಿ ರಾಜೇಶ್ ಶರ್ಮಾ ಎಂಬುವವರು ತಮ್ಮ ಮಗಳನ್ನು ಸುಷ್ಮಾ ಸ್ವರಾಜ್ ಅವರಂತೆ ಡ್ರೆಸ್ ಮಾಡಿ ಛದ್ಮವೇಷ ಸ್ಪರ್ಧೆಗೆ ಕಳುಹಿಸಿದ್ದರು. ಮಗಳ ಫೋಟೊ ತೆಗೆದು ಟ್ವಿಟರ್ನಲ್ಲಿ ಪೋಸ್ಟ್ ಮಾಡಿದ್ದರು. ಇದನ್ನು ಸುಷ್ಮಾ ಅವರಿಗೂ ಟ್ಯಾಗ್ ಮಾಡಲಾಗಿತ್ತು.
ಶರ್ಮಾ ಅವರ ಟ್ವೀಟ್ ಗಮನಿಸಿದ ಸುಷ್ಮಾ ಅವರು ಓಹ್ ಬಹಳ ಚೆನ್ನಾಗಿದೆ. ಈಕೆ ಜಾಕೆಟ್ ನನಗೆ ಇಷ್ಟವಾಯಿತು ಎಂದು ಪ್ರತಿಕ್ರಿಯೆ ನೀಡಿದ್ದರು.