ನವದೆಹಲಿ:ಅಧಿವೇಶನ ಆರಂಭವಾದ ಬೆನ್ನಲ್ಲೇ ಆಡಳಿತ ಪಕ್ಷದ ವಿರುದ್ಧ ಪ್ರತಿಪಕ್ಷಗಳು ಹೋರಾಟಕ್ಕಿಳಿದಿವೆ. ಇದೀಗ ಎಡಪಕ್ಷದ ಸಂಸದರು ಸಂಸತ್ ಭವನದ ಹೊರ ಭಾಗದಲ್ಲಿ ರೈತ ವಿರೋಧಿ ನೀತಿಗಳನ್ನು ಕೈಬಿಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ.
ಇಲ್ಲಿನ ಗಾಂಧಿ ಪ್ರತಿಮೆಯ ಎದುರು ಪ್ರತಿಭಟಿಸಿದ ಎಡ ಪಕ್ಷಗಳ ಸಂಸದರು, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ನೀತಿಗಳನ್ನು ತಕ್ಷಣ ಕೈಬಿಡಬೇಕು ಎಂದು ಆಗ್ರಹಿಸಿದ್ದಾರೆ.
ರೈತರ ಉತ್ಪನ್ನಗಳ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದಂತೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ರೈತರು ಮತ್ತು ವ್ಯಾಪಾರಿಗಳು ಆಯ್ಕೆಯ ಖರೀದಿ ಮತ್ತು ಮಾರಾಟದ ಸ್ವಾತಂತ್ರ್ಯವನ್ನು ಹೊಂದಲಿದ್ದಾರೆ. ಇದಕ್ಕಾಗಿ ರೈತರ ಉತ್ಪಾದನಾ, ವ್ಯಾಪಾರ ಮತ್ತು ವಾಣಿಜ್ಯ ಮಸೂದೆ 2020ಅನ್ನು ಜಾರಿ ತರಲಾಗಿತ್ತು. ಈ ಮಸೂದೆ ಜಾರಿಗೆ ಬಂದ ಒಂದು ದಿನದ ಬಳಿಕ ಈ ನೀತಿಯ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.