ಕರ್ನಾಟಕ

karnataka

ETV Bharat / bharat

ಕೈಕೊಟ್ಟ ಕಿಡ್ನಿ, ರಕ್ತದೊತ್ತಡ ಏರುಪೇರು... ಲಾಲು ಪ್ರಸಾದ್​​ ಯಾದವ್​​ ಆರೋಗ್ಯ ಸ್ಥಿತಿ ಗಂಭೀರ - ಬಹುಕೋಟಿ ಮೇವು ಹಗರಣ

ಮಧುಮೇಹ ಹಾಗೂ ರಕ್ತದೊತ್ತಡದಲ್ಲಿ ಹೆಚ್ಚಿನ ಏರುಪೇರಾಗುತ್ತಿದ್ದು, ಜೊತೆಗೆ ಕಿಡ್ನಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ವೈದ್ಯರು ಲಾಲು ಆರೋಗ್ಯದ ಬಗ್ಗೆ ತಿಳಿಸಿದ್ದಾರೆ.

ಲಾಲು ಪ್ರಸಾದ್ ಯಾದವ್

By

Published : Sep 1, 2019, 9:52 AM IST

ರಾಂಚಿ:ಬಹುಕೋಟಿಮೇವು ಹಗರಣದಲ್ಲಿ ಜೈಲುಪಾಲಾಗಿರುವ ಆರ್​ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಆರೋಗ್ಯ ಸಂಪೂರ್ಣ ಹದಗೆಟ್ಟಿದೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

ಮಧುಮೇಹ ಹಾಗೂ ರಕ್ತದೊತ್ತಡದಲ್ಲಿ ಹೆಚ್ಚಿನ ಏರುಪೇರಾಗುತ್ತಿದ್ದು, ಜೊತೆಗೆ ಕಿಡ್ನಿ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ವೈದ್ಯರು ಲಾಲು ಆರೋಗ್ಯದ ಬಗ್ಗೆ ತಿಳಿಸಿದ್ದಾರೆ.

71 ವರ್ಷದ ಲಾಲು ಪ್ರಸಾದ್ ಯಾದವ್, ಪ್ರಸ್ತುತ ಆರೋಗ್ಯ ಸಮಸ್ಯೆಯ ಹಿನ್ನೆಲೆಯಲ್ಲಿ ರಾಜೇಂದ್ರ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್​(ರಿಮ್ಸ್)ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಾಲು ಪ್ರಸಾದ್ ಯಾದವ್ ಆರೋಗ್ಯ ಸ್ಥಿರವಾಗಿಲ್ಲ ಎಂದು ಲಾಲು ಅವರನ್ನು ನೋಡಿಕೊಳ್ಳುತ್ತಿರುವ ಡಾ. ಉಮೇಶ್ ಚಂದ್ರ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details