ನವದೆಹಲಿ:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಆರ್ಟಿಕಲ್ 370 ರದ್ದತಿ ಮೇಲೆ ಲೋಕಸಭೆಯಲ್ಲಿ ಪರ-ವಿರೋಧ ಚರ್ಚೆ ನಡೆಯುತ್ತಿದ್ದ ವೇಳೆ ಲಡಾಕ್ನ ಬಿಜೆಪಿ ಸಂಸದನ ಮಾತು ಆಡಳಿತ ಪಕ್ಷದ ಸದಸ್ಯರ ಮೆಚ್ಚುಗೆಗೆ ಕಾರಣವಾಗಿದ್ದು, ಖುದ್ದಾಗಿ ಪ್ರಧಾನಿ ಮೋದಿ ಕೂಡ ಮೇಜು ಕುಟ್ಟಿ ಪ್ರೋತ್ಸಾಹಿಸಿದ್ದಾರೆ.
ಜಮ್ಯಾಂಗ್ ಸೆರಿಂಗ್ ನಮ್ಗ್ಯಾಗ್ ಲಡಾಕ್ನ ಬಿಜೆಪಿ ಸಂಸದನಾಗಿರುವ ಜಮ್ಯಾಂಗ್ ಸೆರಿಂಗ್ ನಮ್ಗ್ಯಾಗ್, ಕೇಂದ್ರ ಸರ್ಕಾರದ ಕ್ರಮವನ್ನ ಸ್ವಾಗತಿಸಿದ್ದು, ಕಳೆದ 7 ದಶಕಗಳಿಂದ ಲಡಾಕ್ ಜನರು ಕೇಂದ್ರಾಡಳಿತ ಪ್ರದೇಶಕ್ಕೆ ಹೋರಾಟ ನಡೆಸುತ್ತಿದ್ದರು. ಇದೀಗ ಅದಕ್ಕೆ ಮುಕ್ತಿ ಸಿಕ್ಕಿದೆ.
ಇವತ್ತಿಗೂ ಕೂಡ ಲಡಾಕ್ ಅಭಿವೃದ್ಧಿಯಿಂದ ವಂಚಿತವಾಗಿದೆ ಎಂದರೆ ಅದಕ್ಕೆ ಆರ್ಟಿಕಲ್ 370 ಹಾಗೂ ಕಾಂಗ್ರೆಸ್ ಪಕ್ಷವೇ ನೇರ ಹೊಣೆ ಎಂದು ಅವರು ಹೇಳಿದರು. ಆರ್ಟಿಕಲ್ 370ಯಿಂದ ಜಮ್ಮು-ಕಾಶ್ಮೀರವನ್ನ ಕೇವಲ ಎರಡು ಕುಟುಂಬಗಳು ತನ್ನ ಹಿಡತದಲ್ಲಿಟ್ಟುಕೊಂಡಿದ್ದವು. ಇದೀಗ ಮುಫ್ತಿ ಹಾಗೂ ಅಬ್ದುಲ್ಲಾ ಮನೆತನಗಳಿಂದ ಮುಕ್ತಿ ಸಿಕ್ಕಿದೆ ಎಂದರು. ಕಾಶ್ಮೀರ ಕೇಂದ್ರಿತ ನಾಯಕರಿಂದ ಲಡಾಕ್ ತಾರತಮ್ಯಕ್ಕೊಳಗಾಗಿದ್ದು, 1948ರಿಂದಲೂ ಇದನ್ನ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಣೆ ಮಾಡುವಂತೆ ಬೇಡಿಕೆ ಇಡಲಾಗಿತ್ತು ಎಂದು ಅವರು ತಿಳಿಸಿದರು.
ಬಿಜೆಪಿ ಸಂಸದನಾಗಿರುವ ಜಮ್ಯಾಂಗ್ ಸೆರಿಂಗ್ ನಮ್ಗ್ಯಾಗ್ ಅವರು ಸದನದಲ್ಲಿ ಮಾತನಾಡಿರುವುದರಿಂದ ಪ್ರೇರಿತರಾಗಿರುವ ಪ್ರಧಾನಿ ನರೇಂದ್ರ ಮೋದಿ ಸದನದಲ್ಲೇ ಮೇಜು ಕುಟ್ಟಿ ಪ್ರೋತ್ಸಾಹಿಸಿರುವ ಜತೆಗೆ ತಮ್ಮ ಟ್ಟಿಟರ್ನಲ್ಲೂ ಅವರನ್ನ ಅಭಿನಂದಿಸಿ ಟ್ವೀಟ್ ಮಾಡಿದ್ದು, ಲಡಾಖ್‌ನಲ್ಲಿರುವ ಜನರ ಭಾವನೆಗಳನ್ನು ಅಚ್ಚುಕಟ್ಟಾಗಿ, ಸುಂದರ ಶಬ್ಧಗಳಿಂದ ಲೋಕಸಭೆಗೆ ತಿಳಿಸಿದ್ದಾರೆ. ನೀವು ಕೂಡ ಅವರ ಭಾಷಣ ಕೇಳಲೇ ಬೇಕು ಎಂದು ವೀಡಿಯೋವನ್ನು ಟ್ವಿಟರ್‌ನಲ್ಲಿ ಶೇರ್ ಮಾಡಿದ್ದಾರೆ.
ಇನ್ನು ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನ-ಮಾನ ಕಲ್ಪಿಸುವ ಆರ್ಟಿಕಲ್ 370 ವಿಧಿ ರದ್ದತಿ ಬಿಲ್ ಲೋಕಸಭೆಯಲ್ಲೂ ಪಾಸ್ ಆಗಿದ್ದು, ಜಮ್ಮು-ಕಾಶ್ಮೀರದಿಂದ ಲಡಾಕ್ ಬೇರ್ಪಟ್ಟಿದ್ದು, ಕೇಂದ್ರಾಡಳಿತ ಪ್ರದೇಶವಾಗಲಿದೆ. ಇತ್ತ ಜಮ್ಮು-ಕಾಶ್ಮೀರ ವಿಧಾನಸಭೆ ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಲಿವೆ.