ಕರ್ನಾಟಕ

karnataka

ETV Bharat / bharat

ಬಸ್​ ಅಪಘಾತದಲ್ಲಿ 20 ಮಂದಿ ದುರ್ಮರಣ: ಕೇರಳ ಸಾರಿಗೆಯಿಂದ 2 ಲಕ್ಷ ಪರಿಹಾರ ಘೋಷಣೆ ! - ಕೇರಳ ರಾಜ್ಯ ಸಾರಿಗೆ ಬಸ್

ಬೆಂಗಳೂರಿನಿಂದ ಕೇರಳದ ಎರ್ನಾಕುಲಂಗೆ ಹೊರಟಿದ್ದ ಕೇರಳ ರಾಜ್ಯ ಸಾರಿಗೆ ಬಸ್​ ತಿರ್ಪೂರ್​ ಜಿಲ್ಲೆಯ ಅವಿನಾಶಿ ಪಟ್ಟಣದ ಬಳಿ ಟ್ರಕ್​ಗೆ ಗುದ್ದಿದ ಪರಿಣಾಮ 20 ಮಂದಿ ಸಾವಿಗೀಡಾಗಿದ್ದ ಘಟನೆ ನಡೆದಿತ್ತು.

Tirupur bus mishap
Tirupur bus mishap

By

Published : Feb 20, 2020, 7:10 PM IST

ತಿರ್ಪೂರ್​​(ತಮಿಳುನಾಡು): ಕೇರಳ ರಾಜ್ಯ ಸಾರಿಗೆ ಬಸ್​​ ಹಾಗೂ ಕಂಟೇನರ್​​ ಲಾರಿ ನಡುವೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಐವರು ಮಹಿಳೆಯರು ಸೇರಿದಂತೆ ಸುಮಾರು 20 ಮಂದಿ ಪ್ರಯಾಣಿಕರು ಸಾವನ್ನಪ್ಪಿದ್ದ ಘಟನೆ ನಡೆದಿದ್ದು, ಇದೀಗ ಅಲ್ಲಿನ ಸಾರಿಗೆ ಸಂಸ್ಥೆ ಪರಿಹಾರ ಘೋಷಣೆ ಮಾಡಿದೆ.

ಬೆಂಗಳೂರಿನಿಂದ ಕೇರಳಕ್ಕೆ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್​ ಅಪಘಾತ: 20 ಮಂದಿ ಸಾವು

ಘಟನೆಯಲ್ಲಿ ಸಾವನ್ನಪ್ಪಿರುವ ಕುಟುಂಬಗಳಿಗೆ ತಲಾ 10 ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದ್ದು, ತಕ್ಷಣಕ್ಕೆ 2 ಲಕ್ಷ ರೂ ನೀಡುವುದಾಗಿ ಕೇರಳ ರಸ್ತೆ ಸಾರಿಗೆ ಸಂಸ್ಥೆ ಘೋಷಣೆ ಮಾಡಿದೆ. ಉಳಿದಂತೆ ಇನ್ಸೂರೆನ್ಸ್​​​ ರೂಪದಲ್ಲಿ 30 ಲಕ್ಷ ರೂಗಳನ್ನ ಕುಟುಂಬಗಳಿಗೆ ನೀಡಲಾಗುವುದು ಎಂದು ತಿಳಿಸಿದೆ.

ಇಂದು ಬೆಳಗಿನ ಜಾವ 3.15ರ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ಬಸ್ ನಲ್ಲಿ ಒಟ್ಟು 48 ಮಂದಿ ಪ್ರಯಾಣಿಕರಿದ್ದರು. ಚಾಲಕ, ನಿರ್ವಾಹಕ ಸೇರಿ ಒಟ್ಟು 20 ಮಂದಿ ಮೃತಪಟ್ಟಿದ್ದು, ಉಳಿದ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನೆಲ್ಲ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿಸಲಾಗುತ್ತಿದೆ.

ABOUT THE AUTHOR

...view details