ಕರ್ನಾಟಕ

karnataka

By

Published : Dec 16, 2020, 11:19 AM IST

ETV Bharat / bharat

ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ: ಆಡಳಿತಾರೂಢ ಎಲ್‌ಡಿಎಫ್‌-ವಿರೋಧ ಪಕ್ಷಗಳ ಪೈಪೋಟಿ

ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂರು ಹಂತಗಳಲ್ಲಿ ನಡೆದಿದೆ. ಒಟ್ಟು 941 ಗ್ರಾಮ ಪಂಚಾಯತ್ ಸ್ಥಾನಗಳು, 152 ಬ್ಲಾಕ್ ಪಂಚಾಯತ್‌ ಸ್ಥಾನಗಳು, 14 ಜಿಲ್ಲಾ ಪಂಚಾಯತ್‌, 86 ಮುನ್ಸಿಪಾಲಿಟಿಗಳು ಹಾಗು ಆರು ಕಾರ್ಪೋರೇಶನ್‌ಗಳಿಗೆ ಮತದಾನ ನಡೆದಿತ್ತು. ಮೊದಲ ಹಂತದಲ್ಲಿ ಶೇ 72.67 ಮತದಾನವಾದರೆ, ಎರಡನೇ ಹಂತದಲ್ಲಿ ಶೇ 76.38, ಮೂರನೇ ಮತ್ತು ಅಂತಿಮ ಹಂತದಲ್ಲಿ ಶೇ 78.64 ರಷ್ಟು ಪೋಲಿಂಗ್‌ ಆಗಿತ್ತು.

Kerala civic polls: Counting of votes begins at 244 centres
ಕೇರಳ ಸ್ಥಳೀಯ ಸಂಸ್ಥೆಗಳ ಚುನಾವಣೆ

ತಿರುವನಂತಪುರಂ (ಕೇರಳ):ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ನಡೆದ ಮತದಾನದ ಮತ ಎಣಿಕೆ ಇಂದು ಬೆಳಿಗ್ಗೆ 8 ಗಂಟೆಯಿಂದ ಪ್ರಾರಂಭವಾಗಿದೆ. ರಾಜ್ಯದ 244 ಕೇಂದ್ರಗಳಲ್ಲಿ ಎಣಿಕಾ ಕಾರ್ಯ ನಡೆಯತ್ತಿದೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ.

ವಿಶೇಷ ಮತದಾನದ ಮತಗಳೂ ಸೇರಿದಂತೆ ಅಂಚೆ ಮತಗಳನ್ನು ಮೊದಲು ಮತ್ತು ಇವಿಎಂ ಮತಗಳನ್ನು ನಂತರ ಎಣಿಸಲಾಗುವುದು ಎಂದು ರಾಜ್ಯ ಚುನಾವಣಾ ಆಯುಕ್ತ ವಿ.ಭಾಸ್ಕರನ್ ತಿಳಿಸಿದ್ದಾರೆ. ಇವಿಎಂ ಮತಗಳ ಎಣಿಕೆ ಶುರುವಾದ ನಂತರ ಲೇೆಟೆಸ್ಟ್‌ ಟ್ರೆಂಡ್‌ ತಿಳಿಯುತ್ತವೆ. ಮಧ್ಯಾಹ್ನ ಒಂದು ಗಂಟೆಯ ಸುಮಾರಿಗೆ ಅಂತಿಮ ಫಲಿತಾಂಶ ನಿರೀಕ್ಷಿಸಲಾಗಿದೆ.

ಇದೀಗ ಬಂದಿರುವ ಮಾಹಿತಿಯ ಪ್ರಕಾರ, 941 ಸ್ಥಾನಗಳಿಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಸದ್ಯ ಆಡಳಿತಾರೂಢ ಎಲ್‌ಡಿಎಫ್ ಮುನ್ನಡೆ ಕಾಯ್ದುಕೊಂಡರೂ‌ ವಿರೋಧ ಪಕ್ಷಗಳು ಪೈಪೋಟಿ ನೀಡುತ್ತಿವೆ.

ಮತ ಎಣಿಕಾ ಕೇಂದ್ರಗಳಲ್ಲಿ ಭದ್ರತೆ:

ಮತ ಎಣಿಕೆ ಕೇಂದ್ರಗಳ ಪ್ರದೇಶದಲ್ಲಿ ನಾಲ್ಕು ಅಥವಾ ಹೆಚ್ಚಿನ ಜನರು ಗುಂಪುಗೂಡುವುದನ್ನು ನಿಷೇಧಿಸಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಮತ ಎಣಿಕೆ ಕೇಂದ್ರಗಳ ಸುತ್ತ ಸಿಆರ್‌ಪಿಸಿ 144 ಸೆಕ್ಷನ್​ ಜಾರಿ ಮಾಡಲಾಗಿದೆ.

ABOUT THE AUTHOR

...view details