ತಿರುವನಂತಪುರಂ:ಪ್ಲಾಸ್ಮಾ ಥೆರಪಿ ನಡೆಸಲು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಕೇರಳಕ್ಕೆ ಅನುಮತಿ ನೀಡಿರುವುರಿಂದ, ವೈದ್ಯಕೀಯ ವೃತ್ತಿಪರರ ತಂಡವು ಥೆರಪಿ ಮಾಡಲು ಸಜ್ಜಾಗಿದೆ.
ಈ ಬಗೆಗಿನ ಕಾರ್ಯಪಡೆ ಈಗಾಗಲೇ ಜಾರಿಯಲ್ಲಿದ್ದ ಕಾರಣ, ಕೇರಳ ಈ ಪ್ರಥಮ ಪ್ರಯತ್ನಕ್ಕೆ ಅನುಮತಿ ಪಡೆದ ದೇಶದ ಮೊದಲ ರಾಜ್ಯವಾಗಿದೆ.
ಮೊದಲು ಕೊರೊನಾ ನೆಗೆಟಿವ್ ವರದಿ ಬಂದ ಕೊರೊನಾ ಪಾಸಿಟಿವ್ ರೋಗಿಯ ಮೇಲೆ ರಕ್ತ ಪರೀಕ್ಷೆ ಮಾಡುವ ಮೂಲಕ ಈ ಪ್ರಯೋಗ ಮಾಡಲಾಗುತ್ತದೆ ಎಂದು ಕಾರ್ಯಪಡೆಯ ಸದಸ್ಯ ಅನೂಪ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಸೋಂಕಿತ ವ್ಯಕ್ತಿಯ ನೆಗೆಟಿವ್ ವರದಿ ಬಂದ ಬಳಿಕ ರೋಗಿಯು ಕೊರೊನಾದಿಂದ ಮುಕ್ತನಾಗಿದ್ದಾನೆ ಎಂಬುದನ್ನು ಮತ್ತಷ್ಟು ಸ್ಪಷ್ಟಪಡಿಸಲು ಇಂತಹ ಎರಡು ಪರೀಕ್ಷೆಗಳಿಗೆ ಒಳಗಾಗಬೇಕಾಗುತ್ತದೆ. ನಂತರ 14 ದಿನಗಳ ನಂತರ, ಆ್ಯಂಟಿಬಾಡಿ ಪರೀಕ್ಷಿಸಲು ರಕ್ತವನ್ನು ಪರೀಕ್ಷಿಸಲಾಗುತ್ತದೆ. ಇದು ಒಂದು ನಿರ್ದಿಷ್ಟ ಮಟ್ಟಕ್ಕಿಂತ ಹೆಚ್ಚಿದ್ದರೆ ಮತ್ತು ವ್ಯಕ್ತಿಯು 55 ಕೆಜಿಗಿಂತ ಹೆಚ್ಚು ತೂಕವಿದ್ದರೆ, 800 ಮಿ.ಲೀ ಪ್ಲಾಸ್ಮಾವನ್ನು ಬೇರ್ಪಡಿಸಿ, ಅದನ್ನು 4 ಭಾಗಗಳಾಗಿ ವಿಂಗಡಿಸಲಾಗುತ್ತದೆ. ಈ 200 ಎಂಎಲ್ ಪ್ಲಾಸ್ಮಾವನ್ನು ಗಂಭೀರ ಸ್ಥಿತಿಯಲ್ಲಿರುವ ರೋಗಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ ಎಂದು ಅನೂಪ್ ಕುಮಾರ್ ಹೇಳಿದ್ದಾರೆ. ಹೀಗೆ ಸಂಗ್ರಹಿಸಿದ ಪ್ಲಾಸ್ಮಾವನ್ನು ಹಲವು ವಾರಗಳವರೆಗೆ ಸಂಗ್ರಹಿಸಬಹುದಂತೆ.
ಸದ್ಯ ಕೇರಳದಲ್ಲಿ ಕೊರೊನಾ ಸೋಂಕಿಗೊಳಗಾಗಿ ಈಗ ಕೊರೊನಾದಿಂದ ಮುಕ್ತರಾಗಿರುವ ಸುಮಾರು 80 ಜನರಿದ್ದಾರೆ. ಇನ್ನು ರಾಜ್ಯ ರಾಜಧಾನಿ ತಿರುವನಂತಪುರಂನ ರಾಜೀವ್ ಗಾಂಧಿ ಜೈವಿಕ ತಂತ್ರಜ್ಞಾನ ಕೇಂದ್ರದಲ್ಲಿ ಆ್ಯಂಟಿಬಾಡಿ ರಕ್ತ ಪರೀಕ್ಷೆ ನಡೆಯಲಿದೆ.