ಕರ್ನಾಟಕ

karnataka

By

Published : Jun 12, 2020, 7:09 PM IST

ETV Bharat / bharat

ಕೋವಿಡ್​​ ನಿರ್ವಹಣೆಯಲ್ಲಿ ದೆಹಲಿ ಸರ್ಕಾರ ವಿಫಲ: ಕೇಜ್ರಿ ವಿರುದ್ಧ 'ಗಂಭೀರ'​ ವಾಗ್ದಾಳಿ

ಕೇಜ್ರಿವಾಲ್​ ನೇತೃತ್ವದ ಎಎಪಿ ಸರ್ಕಾರದ ವಿರುದ್ಧ ಬಿಜೆಪಿ ಸಂಸದ ಗೌತಮ್​ ಗಂಭೀರ್​ ವಾಗ್ದಾಳಿ ನಡೆಸಿದ್ದು, ಕೋವಿಡ್​ ನಿರ್ವಹಣೆ ಮಾಡುವಲ್ಲಿ ಅವರು ಸಂಪೂರ್ಣವಾಗಿ ವಿಫಲಗೊಂಡಿದ್ದಾರೆ ಎಂದಿದ್ದಾರೆ.

Gambhir balms Kejriwal
Gambhir balms Kejriwal

ನವದೆಹಲಿ: ಮಾಜಿ ಕ್ರಿಕೆಟಿಗ, ಸಂಸದ ಗೌತಮ್ ಗಂಭೀರ್​ ದೆಹಲಿ ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಹೊಣೆ ಹೊತ್ತುಕೊಳ್ಳುವ ಬದಲು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಕೆಲಸ ಮಾಡ್ತಿದ್ದಾರೆ ಎಂದಿದ್ದಾರೆ.

ದೆಹಲಿಯಲ್ಲಿ ಪ್ರತಿದಿನ ಕೋವಿಡ್​ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದ್ದು, ಇಷ್ಟು ದಿನ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ಕೇಜ್ರಿವಾಲ್​, ಇದೀಗ ಸುಪ್ರೀಂಕೋರ್ಟ್​ ಮೇಲೆ ಆರೋಪ ಮಾಡಿದ್ರೂ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಟ್ವೀಟ್​ ಮಾಡಿದ್ದಾರೆ.

ಈಗಾಗಲೇ ಕೇಂದ್ರ, ನೆರೆಹೊರೆಯ ರಾಜ್ಯ, ಆಸ್ಪತ್ರೆ, ಟೆಸ್ಟಿಂಗ್​ ಸೆಂಟರ್​​ಗಳ ಮೇಲೆ ಕೇಜ್ರಿವಾಲ್​ ವಾಗ್ದಾಳಿ ನಡೆಸಿದ್ದಾರೆ. ಆದರೆ ಕೋವಿಡ್​ ನಿರ್ವಹಣೆಯಲ್ಲಿ ಅವರು ಸಂಪೂರ್ಣವಾಗಿ ವಿಫಲವಾಗಿದ್ದು, ಜವಾಬ್ದಾರಿ ಮಾತ್ರ ಹೊತ್ತುಕೊಳ್ಳುತ್ತಿಲ್ಲ ಎಂದು ಟ್ವೀಟ್​ ಮಾಡಿ ಆಕ್ರೋಶ ಹೊರ ಹಾಕಿದ್ದಾರೆ.

ದೆಹಲಿಯ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್​ ಸೋಂಕಿತರಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದು ಸುಪ್ರೀಂಕೋರ್ಟ್​ ಈಗಾಗಲೇ ಕೇಜ್ರಿವಾಲ್​ ಸರ್ಕಾರಕ್ಕೆ ಛೀಮಾರಿ ಹಾಕಿದ್ದು, ಮೃತದೇಹಗಳನ್ನ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ ಎಂದಿದೆ. ಇದೇ ವಿಷಯವನ್ನಿಟ್ಟುಕೊಂಡು ದೆಹಲಿ ಸಿಎಂ ಸುಪ್ರೀಂ ಮೇಲೆ ವಾಗ್ದಾಳಿ ನಡೆಸಬಹುದು ಎಂದಿದ್ದಾರೆ.

ಜತೆಗೆ ಚೆನ್ನೈ ಹಾಗೂ ಮುಂಬೈನಲ್ಲಿ ಅತಿ ಹೆಚ್ಚು ಕೋವಿಡ್​ ಟೆಸ್ಟ್​ ನಡೆಯುತ್ತಿರಬೇಕಾದರೆ ದೆಹಲಿಯಲ್ಲಿ ಯಾಕೆ ಅದು ಸಾಧ್ಯವಿಲ್ಲ? ಕೇವಲ ತಾಂತ್ರಿಕ ದೋಷದಿಂದ ನೀವು ಇದನ್ನ ನಿರಾಕರಣೆ ಮಾಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್​ ವಾರ್ನ್​ ಮಾಡಿದೆ.

ABOUT THE AUTHOR

...view details