ನವದೆಹಲಿ:ದೇಶದಲ್ಲಿ ಹೇರಿಕೆ ಮಾಡಲಾಗಿರುವ ಲಾಕ್ಡೌನ್ 3.0 ಮೇ.17ರಂದು ಮುಕ್ತಾಯಗೊಳ್ಳಲಿದೆ. ಇದಾದ ಬಳಿಕ ದೆಹಲಿಯಲ್ಲಿ ಯಾವ ರೀತಿಯ ನಿಯಮ ಜಾರಿಯಲ್ಲಿರಬೇಕು ಎಂಬುದರ ಮನವಿ ನೀಡುವಂತೆ ಕೋರಿದ್ದ ಕೇಜ್ರಿವಾಲ್ ಕಚೇರಿಗೆ 5 ಲಕ್ಷ ಸಲಹೆ ಬಂದಿದ್ದಾಗಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಸಲಹೆ ನೀಡುವಂತೆ ದೆಹಲಿ ಜನರಲ್ಲಿ ಅವರು ಮನವಿ ಮಾಡಿದ್ದರು. ಇದೀಗ ಅದರ ಬಗ್ಗೆ ಮಾಹಿತಿ ನೀಡಿರುವ ಕೇಜ್ರಿವಾಲ್ ಅತಿ ಹೆಚ್ಚು ಜನರು ಬಸ್ ಹಾಗೂ ಮೆಟ್ರೋ ಆರಂಭ ಮಾಡುವಂತೆ ಮನವಿ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ಶಾಲಾ-ಕಾಲೇಜ್ ಬಂದ್ ಮಾಡುವಂತೆ ಜನರು ಸಲಹೆ ನೀಡಿದ್ದಾರೆ. ಎಲ್ಲ ಶಾಪ್ ಓಪನ್ ಮಾಡುವಂತೆ ಮಾರುಕಟ್ಟೆ ಅಸೋಷಿಯೇಷನ್ ಮನವಿ ಮಾಡಿದ್ದು ಇಂದು ಸಂಜೆ ಗವರ್ನರ್ ಜತೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಇನ್ನು ಕಟ್ಟಿಂಗ್ ಶಾಪ್, ಸಲೂನ್, ಸಿನಿಮಾ ಹಾಲ್,ಶಿಕ್ಷಣ ತರಬೇತಿ ಕೇಂದ್ರ, ಹೋಟೆಲ್ ಓಪನ್ ಮಾಡದಂತೆ ದೆಹಲಿ ಜನರು ಮನವಿ ಮಾಡಿಕೊಂಡಿದ್ದಾಗಿ ತಿಳಿಸಿದ್ದಾರೆ. ಹೀಗಾಗಿ ಈ ಎಲ್ಲ ವಿಚಾರಗಳ ಕುರಿತು ನಾವು ಗವರ್ನರ್ ಜತೆ ಮಾತನಾಡಿ ಕೇಂದ್ರಕ್ಕೆ ಮನವಿ ಸಲ್ಲಿಕೆ ಮಾಡುತ್ತೇವೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.