ಕರ್ನಾಟಕ

karnataka

ETV Bharat / bharat

ಭಾರತ-ಪಾಕ್ ಉದ್ವಿಗ್ನತೆಯಿಂದ ಬಿಜೆಪಿಗೆ ಸೋಲು:  ಇದು ಕೇಜ್ರಿ  ಸಮೀಕ್ಷೆ - ಆಮ್ ಆದ್ಮಿ ಸಮೀಕ್ಷೆ

ಭಾರತ-ಪಾಕ್ ಉದ್ವಿಗ್ನತೆಯಿಂದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲು ಅನುಭವಿಸಿದೆ ಎಂದು ದೆಹಲಿ  ಸಿಎಂ ಅರವಿಂದ್​ ಕೇಜ್ರಿವಾಲ್ ಹೇಳಿದ್ದಾರೆ

ಚುನಾವಣೆಯಲ್ಲಿ ಬಿಜೆಪಿಗೆ ಸೋಲು ಎಂದ ಅರವಿಂದ್​ ಕೇಜ್ರಿವಾಲ್

By

Published : Mar 13, 2019, 9:35 AM IST

ನವದೆಹಲಿ: ಸದಾ ಬಿಜೆಪಿ ಮೇಲೆ ಮುಗಿಬೀಳುವ ದೆಹಲಿ ಸಿಎಂ ಅರವಿಂದ್​ ಕೇಜ್ರಿವಾಲ್​, ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ.

ತಮ್ಮ ಪಕ್ಷ ಆಮ್ ಆದ್ಮಿ ಹೊಸ ಸಮೀಕ್ಷೆಯೊಂದನ್ನು ಮಾಡಿದ್ದು, ಅದರಲ್ಲಿ ಪುಲ್ವಾಮ ದಾಳಿ ಹಾಗೂ ಆನಂತರ ಉಂಟಾದ ಭಾರತ-ಪಾಕಿಸ್ತಾನದ ಉದ್ವಿಗ್ನತೆಯಿಂದಾಗಿ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಸೋಲಲಿದೆ ಎಂದು ಶೇ 56 ಜನರು ಅಭಿಪ್ರಾಯಪಟ್ಟಿದ್ದಾರೆ ಎಂದಿದೆ.

ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದ ಕೇಜ್ರಿವಾಲ್​, ಪುಲ್ವಾಮ ದಾಳಿ ನಂತರ ಭಾರತ-ಪಾಕ್​ ಸಂಕಷ್ಟ ಜನರ ಮೇಲೆ ಋಣಾತ್ಮಕ​ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ. ಆನಂತರ ಟ್ವಿಟ್ಟರ್​ನಲ್ಲಿಯೂ ಹೀಗೇ ಟೀಕಿಸಿದ್ದಾರೆ.

ಟ್ವಿಟ್ಟಿಗನೋರ್ವ, ಭಾರತ-ಪಾಕ್ ಉದ್ವಿಗ್ನತೆಯಿಂದ ಬಿಜೆಪಿಗೆ ಲಾಭವೋ? ನಷ್ಟವೋ? ಎಂಬ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ.

ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ಶಾಸಕ ವಿಜಯೇಂದ್ರ ಗುಪ್ತ, ಯೋಧರ ಧೀರ ಕ್ರಮವನ್ನು ರಾಜಕೀಯ ಲಾಭ, ನಷ್ಟಕ್ಕೆ ತಳುಕು ಹಾಕಿರುವ ಕೇಜ್ರಿವಾಲ್​ರಿಗೆ ನಾಚಿಕೆಯಾಗಬೇಕು ಎಂದಿದ್ದಾರೆ. ಸುಳ್ಳು ಸಮೀಕ್ಷೆ ಮೂಲಕ ಜನರ ಹಾದಿ ತಪ್ಪಿಸುತ್ತಿದೆ ಎಂದೂ ಕುಟುಕಿದೆ.

ABOUT THE AUTHOR

...view details