ಕಾಸರಗೋಡು (ಕೇರಳ):16 ವರ್ಷದ ಸಹೋದರಿ ಆನ್ ಮೇರಿಯ ಹತ್ಯೆ ಮತ್ತು ಆತನ ಪೋಷಕರಾದ ಬೆನ್ನಿ ಒಲಿಕಲ್ ಮತ್ತು ಬೆಸ್ಸಿಯನ್ನು ಕೊಲೆ ಮಾಡಲು ಯತ್ನಿಸಿದ್ದಕ್ಕಾಗಿ ಅಲ್ಬಿನ್ ಬೆನ್ನಿ (22) ಎಂಬ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬೆನ್ನಿ ಇಲಿ ವಿಷವನ್ನು ಖರೀದಿಸಿದ ಅಂಗಡಿಯಿಂದ ಪೊಲೀಸ್ ತಂಡವು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಐಸ್ ಕ್ರೀಮ್ ತಯಾರಿಸಲು ಬೇಕಾದ ಪದಾರ್ಥಗಳನ್ನು ಖರೀದಿಸಿದ ಪಟ್ಟಣದ ಬೇಕರಿಯಿಂದಲೂ ಪುರಾವೆ ಕಲೆ ಹಾಕಿದೆ.
ಒಂದು ವಾರದ ಹಿಂದೆ ಅಲ್ಬಿನ್ ತನ್ನ ತಂದೆ ಬೆನ್ನಿ ಅವರಿಗೆ ಉಡುಗೊರೆಯಾಗಿ ನೀಡಿದ್ದ ಮೊಬೈಲ್ ಫೋನ್ ಅನ್ನು ಬಳಸಿದ್ದಾನೆ ಎಂದು ಪೊಲೀಸ್ ತನಿಖೆ ವೇಳೆ ತಿಳಿದು ಬಂದಿದೆ. ಈ ಮಧ್ಯೆ ಅಲ್ಬಿನ್ ಅನೇಕ ವಿವಾಹಿತ ಮಹಿಳೆಯರು ಹಾಗೂ ಯುವತಿಯರೊಂದಿಗೆ ಸೋಷಿಯಲ್ ಮೀಡಿಯಾ ಪ್ಲಾಟ್ ಫಾರ್ಮ್‌ಗಳ ಮೂಲಕ ಸ್ನೇಹ ಬೆಳೆಸಿದ್ದ ಎಂದು ಗೊತ್ತಾಗಿದೆ.
ಕುಟುಂಬ ಸದಸ್ಯರನ್ನು ಕೊಂದು ಆಸ್ತಿಯನ್ನು ವಶಪಡಿಸಿಕೊಳ್ಳುವ ಹುನ್ನಾರ ನಡೆಸಿದ್ದ ಬೆನ್ನಿ, ತನ್ನ ತಂದೆಯ ಮೊಬೈಲ್ನಿಂದ ಅಪರಾಧಿಯು ವಿಷದ ಕುರಿತು ಅಂತರ್ಜಾಲದಲ್ಲಿ ಮಾಹಿತಿ ಕಲೆಹಾಕಿದ್ದಾನೆ. ಇಲಿ ಪಾಷಾಣದ ಶಕ್ತಿ ಮತ್ತು ಅದರೊಂದಿಗೆ ಆಹಾರವನ್ನು ಹಾಕುವಾಗ ಬಳಸಬೇಕಾದ ಡೋಸೇಜ್ ಬಗ್ಗೆ ತಿಳಿದುಕೊಂಡಿದ್ದಾನೆ. ಅದರಂತೆಯೇ ಐಸ್ ಕ್ರೀಮ್ನಲ್ಲಿ ವಿಷ ಬೆರಿಸಿದ್ದಾನೆ. ಇದನ್ನು ತಿಂದ ಈತನ ಸಹೋದರಿ ಮೃತಪಟ್ಟಿದ್ದಾಳೆ.
ಅಲ್ಬಿನ್ ತನ್ನ ಇಡೀ ಕುಟುಂಬಕ್ಕೆ ವಿಷ ನೀಡಿದ ನಂತರ ಈ ಘಟನೆಯನ್ನು ಸಾಮೂಹಿಕ ಆತ್ಮಹತ್ಯೆಯನ್ನಾಗಿ ಮಾಡಲು ಪ್ರಯತ್ನಿಸಿದ. ಪೊಲೀಸರು ಆತನ ಮೊಬೈಲ್ ಫೋನ್ ಪರಿಶೀಲಿಸಿದಾಗ ಅಲ್ಬಿನ್ ಅವರ ಕೊನೆಯ ನಿಮಿಷದ ಪ್ರಯತ್ನ ವಿಫಲವಾಗಿದೆ.