ಕರ್ನಾಟಕ

karnataka

ETV Bharat / bharat

ಗುಜರಾತ್​​ನಿಂದ ರಾಜ್ಯಸಭಾ ಚುನಾವಣೆಗೆ ಕಣಕ್ಕಿಳಿದ ಕನ್ನಡಿಗ! - ಗಾಂಧಿನಗರ

ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿರುವ ಕನ್ನಡಿಗ ದೀಪಕ್​ ಗಂಗಾರಾಮ್​ ಕಟಕಂಡು ಗುಜರಾತ್​ನಿಂದ ರಾಜ್ಯಸಭಾ ಸ್ಥಾನಕ್ಕಾಗಿ ಆಯ್ಕೆ ಬಯಸಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.

ಕಣಕ್ಕಿಳಿದ ಕನ್ನಡಿಗ

By

Published : Jun 26, 2019, 7:43 PM IST

ನವದೆಹಲಿ:ಅಮಿತ್​ ಶಾ ಹಾಗೂ ಸ್ಮೃತಿ ಇರಾನಿ ಅವರ ರಾಜೀನಾಮೆಯಿಂದ ತೆರವಾದ ಎರಡು ರಾಜ್ಯಸಭಾ ಸ್ಥಾನಗಳಿಗೆ ಇದೀಗ ಚುನಾವಣೆ ಘೋಷಣೆಯಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಿಂದ ವಿದೇಶಾಂಗ ಸಚಿವ ಸುಬ್ರಮಣ್ಯಂ ಜೈಶಂಕರ್​ ನಿನ್ನೆಯೇ ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸ ಲ್ಲಿಕೆ

ಉಳಿದ ಇನ್ನೊಂದು ಸ್ಥಾನಕ್ಕೆ ಇಂದು ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾಗಿರುವ ಕನ್ನಡಿಗ ದೀಪಕ್​ ಗಂಗಾರಾಮ್​ ಕಟಕಂಡು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಗುಜರಾತ್​ ವಿಧಾನಸಭೆಯಲ್ಲಿ ಬಿಜೆಪಿ ಬಹುಮತ ಹೊಂದಿರುವುದರಿಂದ ಇವರಿಬ್ಬರ ಆಯ್ಕೆ ಖಚಿತವಾಗಿದೆ.

ಕನ್ನಡಿಗ ದೀಪಕ್​ ಗಂಗಾರಾಮ್​ ಕಟಕಂಡು

ಎರಡನೇ ಬಾರಿ ಪೂರ್ಣ ಬಹುಮತದೊಂದಿಗೆ ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿದ್ದು, ಯಾವುದೇ ಮನೆಯ ಸದಸ್ಯತ್ವ ಹೊಂದಿರದ ಈ ಹಿಂದಿನ ಐಎಫ್​ಎಸ್​ ಅಧಿಕಾರಿ ಜೈಶಂಕರ್​ ಅವರನ್ನ ಕೇಂದ್ರ ವಿದೇಶಾಂಗ ಸಚಿವರನ್ನಾಗಿ ಮೋದಿ ಅಚ್ಚರಿಯ ರೀತಿಯಲ್ಲಿ ಆಯ್ಕೆ ಮಾಡಿದ್ದರು. ಈ ಸಂಬಂಧ ಸಚಿವರಾಗಿ ಪ್ರಮಾಣ ಸ್ವೀಕರಿಸಿದ ಆರು ತಿಂಗಳೊಳಗಾಗಿ ಯಾವುದಾದರೊಂದು ಮನೆಯ( ಲೋಕಸಭೆ ಇಲ್ಲವೇ ರಾಜ್ಯಸಭೆ) ಸದಸ್ಯತ್ವ ಪಡೆಯಬೇಕಾದ ಅನಿವಾರ್ಯತೆ ಜೈಶಂಕರ್​ ಅವರಿಗೆ ಇತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಗುಜರಾತ್​ನಲ್ಲಿ ತೆರವಾಗಿದ್ದ ರಾಜ್ಯಸಭಾ ಸ್ಥಾನಗಳಿಗಾಗಿ ಜೈಶಂಕರ್​ ಅವರ ಹೆಸರು ನಿರ್ದೇಶನ ಮಾಡಿದೆ.

ಇನ್ನು ದೀಪಕ್​ ಗಂಗಾರಾಮ್​ ಕಟಕಂಡು ಮೂಲತ ಕರ್ನಾಟಕದ ವಿಜಯಪುರದವರಾಗಿದ್ದಾರೆ. ಇವರು ಕೂಡ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಪ್ರಧಾನಿ ಮೋದಿ ಹಾಗೂ ಅಮಿತ್​ ಶಾ ಸಾಮಾನ್ಯ ಕಾರ್ಯಕರ್ತರಿಗೂ ಅವಕಾಶ ನೀಡ್ತಾರೆ ಎನ್ನುವುದು ಈ ಮೂಲಕ ಮತ್ತೊಮ್ಮೆ ಸಾಬೀತಾಗಿದೆ.

ABOUT THE AUTHOR

...view details