ಕರ್ನಾಟಕ

karnataka

By

Published : May 12, 2020, 12:39 PM IST

ETV Bharat / bharat

ಕೌಟುಂಬಿಕ ಹಿಂಸಾಚಾರ ಸಂತ್ರಸ್ತೆಯರಿಗೆ ಬಾಲಿವುಡ್​ ತಾರೆಯರ ಬೆಂಬಲ

ಬಾಲಿವುಡ್​ನ ಪ್ರಮುಖ ನಟಿಯರಾದ ಕರಿಷ್ಮಾ ಕಪೂರ್, ಸ್ವರ ಭಾಸ್ಕರ್, ದಿಯಾ ಮಿರ್ಜಾ ಮತ್ತು ಬಿಪಾಶಾ ಬಸು ಅವರು ಲಾಕ್‌ಡೌನ್ ಮೇ ಲಾಕ್‌ಅಪ್ ಮುಖಾಂತರ ಕೌಟುಂಬಿಕ ಹಿಂಸಾಚಾರದಿಂದ ನೊಂದ ಮಹಿಳೆಯರಿಗೆ ಬೆನ್ನೆಲುಬಾಗಿ ನಿಲ್ಲಲು ನಿರ್ಧರಿಸಿದ್ದಾರೆ.

lockdown-mein-lockup-karisma-swara-bipasha-support-domestic-violence-victims
ಗೃಹ ಹಿಂಸಾಚಾರ ಸಂತ್ರಸ್ತೆಯರಿಗೆ ಬಾಲಿವುಡ್​ ತಾರೆಯರ ಬೆಂಬಲ

ನವದೆಹಲಿ: ಕೌಟುಂಬಿಕ ಹಿಂಸಾಚಾರವನ್ನು ಎದುರಿಸುತ್ತಿರುವ ಮಹಿಳೆಯರ ಪರವಾಗಿ ಬಾಲಿವುಡ್​ ತಾರೆಯರು ಧ್ವನಿ ಎತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಸಂತ್ರಸ್ತರ ಹೆಸರಿನೊಂದಿಗೆ ತಮ್ಮ ಸೆಲ್ಫಿಗಳನ್ನು ಹಂಚಿಕೊಳ್ಳುವ ಮೂಲಕ ಲಾಕ್‌ಡೌನ್ ಮೇ ಲಾಕ್‌ಅಪ್ ಅಭಿಯಾನವನ್ನು​ ಬೆಂಬಲಿಸಿದ್ದಾರೆ.

ಕರಿಷ್ಮಾ ಕಪೂರ್ ತಮ್ಮ ಕಪ್ಪು ಮತ್ತು ಬಿಳುಪಿನ ಚಿತ್ರವನ್ನು ಕೌಟುಂಬಿಕ ಹಿಂಸಾಚಾರಕ್ಕೆ ಒಳಗಾದವರ ಹೆಸರಿನೊಂದಿಗೆ ಹಂಚಿಕೊಂಡಿದ್ದಾರೆ. ಇದರ ಜೊತೆಗೆ ಕೌಟುಂಬಿಕ ಹಿಂಸಾಚಾರದ ವಿರುದ್ಧ ಹೋರಾಡಲು ಹಣ ಸಂಗ್ರಹಿಸುವಂತೆ ತಮ್ಮ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.

ನೀವು @nesnehamumbai_official ಭೇಟಿ ನೀಡಿ ನೊಂದವರ ಪರ ಧ್ವನಿಯನ್ನು ಎತ್ತಬಹುದು. ಈ ಲಿಂಕ್​ ಅನ್ನು ಕ್ಲಿಕ್​ ಮಾಡಿ ಹೆಸರನ್ನು ಆರಿಸಿ, ನೀವು ಆಯ್ಕೆ ಮಾಡಿದ ಹೆಸರಿನೊಂದಿಗೆ ನಿಮ್ಮ ಚಿತ್ರವನ್ನು ಪೋಸ್ಟ್ ಮಾಡಿ ಮತ್ತು ಬಯೋದಲ್ಲಿನ ಲಿಂಕ್ ಹಂಚಿಕೊಳ್ಳಿ ಎಂದಿರುವ ಅವರು @sonamkapoor @natasha.poonawalla @tamannaahspeaks ರನ್ನು ನಾಮನಿರ್ದೇಶನ ಮಾಡಿದ್ದಾರೆ.

ಬಿಪಾಶಾ ಬಸು ಕೂಡ ತಮ್ಮ ಕಪ್ಪು ಮತ್ತು ಬಿಳಿ ಚಿತ್ರವನ್ನು ಸಂತ್ರಸ್ತೆಯ ಹೆಸರಿನೊಂದಿಗೆ ಹಂಚಿಕೊಂಡಿದ್ದಾರೆ. 'ನಾನು ಅಂಕಿತಾ' ನಾನು ಇಂದು ಅವಳ ಧ್ವನಿಯಾಗಿದ್ದೇನೆ ಮತ್ತು ಕಿರುಕುಳದ ಅನೇಕ ಧ್ವನಿಗಳು ಕೇಳದೆ ಹೋಗುತ್ತಿವೆ. ಯಾಕೆಂದರೆ, ಅವರು ಲಾಕ್‌ಡೌನ್‌ನಲ್ಲಿ ಬಂಧಿಸಲ್ಪಟ್ಟಿದ್ದಾರೆ ಎಂದಿದ್ದಾರೆ.

ಬಿಪಾಶಾ ಅವರು @diamirzaofficial @deannepanday and @malaikaaroraofficial ಅವರನ್ನು ನಾಮನಿರ್ದೇಶನ ಮಾಡಿದ್ದಾರೆ.

ಕೌಟುಂಬಿಕ ಹಿಂಸಾಚಾರ ಸಂತ್ರಸ್ತೆ ಜಯಶ್ರೀ ಅವರ ಹೆಸರನ್ನು ಆರಿಸಿಕೊಂಡ ಸ್ವರ ಭಾಸ್ಕರ್ ತಮ್ಮ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ ಮತ್ತು 'ನಾನು ಜಯಶ್ರೀ' ಎಂದು ಬರೆದಿದ್ದಾರೆ. ಇವರೂ ಕೂಡ ಸೋನಮ್ ಕಪೂರ್, ಕರೀನಾ ಕಪೂರ್, ಏಕ್ತಾ ಕಪೂರ್, ರಿಚಾ ಚಡ್ಡಾ, ಮಿನಿ ಮಾಥುರ್ ಮತ್ತು ಇತರ ಪ್ರಸಿದ್ಧ ಸ್ನೇಹಿತರನ್ನು ನಾಮನಿರ್ದೇಶನ ಮಾಡಿದ್ದಾರೆ.

ABOUT THE AUTHOR

...view details