ಮುಂಬೈ: ಶಿವಸೇನೆ ನಾಯಕರೊಂದಿಗಿನ ಗಲಾಟೆ ಉಲ್ಬಣಗೊಳ್ಳುತ್ತಿದ್ದಂತೆಯೇ ಮಗಳಿಗೆ ವೈ-ಪ್ಲಸ್ ಭದ್ರತೆ ಒದಗಿಸಿದ್ದಕ್ಕಾಗಿ ನಟಿ ಕಂಗನಾ ರನೌತ್ ತಾಯಿ ಆಶಾ ರನೌತ್ ಬಿಜೆಪಿಗೆ ಧನ್ಯವಾದ ತಿಳಿಸಿದ್ದಾರೆ.
ರಾಷ್ಟ್ರೀಯ ಮಾಧ್ಯಮವೊಂದಕ್ಕೆ ನೀಡಿದ ವಿಡಿಯೋ ಸಂದರ್ಶನದಲ್ಲಿ, "ಇಡೀ ದೇಶದ ಆಶೀರ್ವಾದವು ಕಂಗನಾ ಮೇಲಿದೆ. ನನ್ನ ಮಗಳು ಯಾವಾಗಲೂ ಸತ್ಯದ ಪರವಾಗಿ ನಿಲ್ಲುತ್ತಾಳೆ ಎಂಬ ಹೆಮ್ಮೆ ಇದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಾವು ಕಾಂಗ್ರೆಸ್ ಮೂಲದವರು. ನನ್ನ ಅಜ್ಜ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ಆದರೆ ಇನ್ನು ಮುಂದೆ ಬಿಜೆಪಿ ಪಕ್ಷಕ್ಕೆ ಬೆಂಬಲಿಸುತ್ತೇವೆ" ಎಂದಿದ್ದಾರೆ.