ಕರ್ನಾಟಕ

karnataka

By

Published : Dec 19, 2020, 6:02 PM IST

ETV Bharat / bharat

ಚಿಹ್ನೆಗಾಗಿ ಹೈಕೋರ್ಟ್‌ ಮೆಟ್ಟಿಲೇರಿದ ಕಮಲ ಹಾಸನ್‌

ಮಕ್ಕಲ್ ನೀಧಿ ಮಯ್ಯಮ್ ರಾಜಕೀಯ ಪಕ್ಷದ ಮುಖ್ಯಸ್ಥ ಹಾಗೂ ನಟ ಕಮಲ್ ಹಾಸನ್ ಅವರು ಪಕ್ಷದ ಚಿಹ್ನೆಗಾಗಿ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Kamal Haasan's MNM knocks on HC door to retain 'torch' symbol
ಕಮಲ್ ಹಾಸನ್

ಚೆನ್ನೈ:ಮಕ್ಕಲ್ ನೀಧಿ ಮಯ್ಯಮ್​ (ಎಂಎನ್‌ಎಂ)ಪಕ್ಷಕ್ಕೆ ಬ್ಯಾಟರಿ ಟಾರ್ಚ್ ಚಿಹ್ನೆ ನೀಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಕಮಲ ಹಾಸನ್ ಮದ್ರಾಸ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದಾರೆ.

ಬ್ಯಾಟರಿ ಟಾರ್ಚ್ ಚಿಹ್ನೆಯನ್ನು ಎಂಜಿಆರ್ ಮಕ್ಕಲ್ ಕಚ್ಚಿ ಎಂಬ ಪಕ್ಷಕ್ಕೆ ಮಂಜೂರು ಮಾಡಲಾಗಿದೆ. ಹಾಗಾಗಿ ಎಂಎನ್‌ಎಂ ಈ ಬಗ್ಗೆ ಪರಿಶೀಲಿಸುವಂತೆಯೂ ಹಾಗೂ ಅದನ್ನು ಬಳಸದಂತೆ ತಡೆ ಕೋರಿ ರಿಟ್ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.

ಓದಿ:'ಅಧಿಕಾರಕ್ಕೆ ಬಂದರೆ ಮದ್ಯ ಮಾರಾಟ ಖಾಸಗೀಕರಣ ಮಾಡ್ತೀವಿ..!'

ಟಾರ್ಚ್ ಚಿಹ್ನೆಯಡಿಯಲ್ಲಿ 2019ರ ಲೋಕಸಭಾ ಚುನಾವಣೆಯಲ್ಲಿ ಎಂಎನ್‌ಎಂ ಸ್ಪರ್ಧಿಸಿದ್ದರೂ ಸಹ, ಅದೇ ಚಿಹ್ನೆಯನ್ನು ಎಂಜಿಆರ್ ಮಕ್ಕಲ್ ಕಚ್ಚಿ ಪಕ್ಷಕ್ಕೂ ನೀಡಲಾಗಿತ್ತು. ಈಗ ಅದನ್ನು ತಮಗೆ ನೀಡುವಂತೆ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕೆಂದು ಕಮಲ್ ಹಾಸನ್ ಕಾನೂನು ಮೊರೆ ಹೋಗಿದ್ದಾರೆ.

2021ರ ತಮಿಳುನಾಡು ವಿಧಾನಸಭಾ ಚುನಾವಣೆಗೆ 'ಬ್ಯಾಟರಿ ಟಾರ್ಚ್' ಅನ್ನು ಅದರ ಸಂಕೇತವಾಗಿ ನೀಡುವ ಎಂಎನ್‌ಎಂ ಮನವಿಯನ್ನು ಮತದಾನ ಸಮಿತಿ ಇತ್ತೀಚೆಗೆ ತಿರಸ್ಕರಿಸಿತ್ತು.

ABOUT THE AUTHOR

...view details