ಕರ್ನಾಟಕ

karnataka

By

Published : Apr 3, 2019, 2:16 PM IST

ETV Bharat / bharat

ದೇಶ ದ್ರೋಹದ ಕೇಸ್​.. ಕನ್ಹಯ್ಯಾ ಕುಮಾರ್ ವಿಚಾರಣೆಗೆ ತಿಂಗಳ ಸಮಯಾವಕಾಶ ಕೇಳಿದ ದೆಹಲಿ ಸರ್ಕಾರ

ಅಫ್ಜಲ್​​​ ಗುರು ಹಾಗೂ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಕನ್ಹಯ್ಯಾ ಕುಮಾರ್​ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಾಲಯ ಎಎಪಿ ಸರ್ಕಾರಕ್ಕೆ ನಿರ್ದಿಷ್ಟ ಸಮಯದೊಳಗೆ ಸರಿಯಾದ ಪ್ರತ್ಯುತ್ತರ ನೀಡುವಂತೆ ನಿರ್ದೇಶನ ನೀಡಿದೆ.

ಕನ್ಹಯ್ಯಾ ಕುಮಾರ್ (ಸಂಗ್ರಹ ಚಿತ್ರ)

ನವದೆಹಲಿ: ಪ್ರಗತಿಪರ ಹೋರಾಟಗಾರಕನ್ಹಯ್ಯಾ ಕುಮಾರ್ ಸೇರಿದಂತೆ ಇನ್ನಿತರರ ಮೇಲೆ ದಾಖಲಾಗಿರುವ ದೇಶ ದ್ರೋಹ ಪ್ರಕರಣ ಸಂಬಂಧಪಟ್ಟಂತೆ ವಿಚಾರಣೆ ನಡೆಸಲು ದೆಹಲಿ ಸರ್ಕಾರ ಒಂದು ತಿಂಗಳ ಸಮಯಾವಕಾಶ ಕೋರಿದೆ.

2016 ರಲ್ಲಿ ಜೆಎನ್​ಯು ಕ್ಯಾಂಪಸ್​​ನಲ್ಲಿ ಅಫ್ಜಲ್​​​ ಗುರು ಹಾಗೂ ಪಾಕಿಸ್ತಾನ ಪರ ಘೋಷಣೆ ಕೂಗಿದ್ದರು ಎಂಬ ಆರೋಪ ಕನ್ಹಯ್ಯಾ ಕುಮಾರ್​ ಸೇರಿ ಇನ್ನಿತರರ ಮೇಲೆ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದ್ದ ದೆಹಲಿ ಪೊಲೀಸರು ಇತ್ತೀಚೆಗೆ ದೆಹಲಿ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಕೆ ಮಾಡಿದ್ದರು.

ಈ ಬಗ್ಗೆ ಇಂದು ವಿಚಾರಣೆ ಕೈಗೆತ್ತಿಕೊಂಡ ಚೀಫ್​ ಮೆಟ್ರೋಪಾಲಿಟಿಯನ್​ ಮ್ಯಾಜಿಸ್ಟ್ರೇಟ್​ ದೀಪಕ್​ ಶೆರಾವತ್,​ ಎಎಪಿ ಸರ್ಕಾರಕ್ಕೆ ನಿರ್ದಿಷ್ಟ ಸಮಯದೊಳಗೆ ಸರಿಯಾದ ಪ್ರತ್ಯುತ್ತರ ನೀಡುವಂತೆ ನಿರ್ದೇಶನ ನೀಡಿದರು.

ದೆಹಲಿ ವಿಶೇಷ ತನಿಖಾ ದಳದ ಡಿಸಿಪಿ ವಿಚಾರಣೆಗೆ ಹಾಜರಾಗಿ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದರು. ವಿಚಾರಣೆಗೆ ಅನುಮತಿ ನೀಡುವಂತೆ ದೆಹಲಿ ಸರ್ಕಾರಕ್ಕೆ ಮನವಿ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.

ABOUT THE AUTHOR

...view details