ನವದೆಹಲಿ: ಇರ್ಫಾನ್ ರಂಜಾನ್ ಶೇಖ್, 2017ರಲ್ಲಿ ಈತ ಕೇವಲ 14 ವರ್ಷದ ಬಾಲಕ. ಅಂದು ಆತ ತೋರಿದ ಶೌರ್ಯ , ಸಾಹಸದಿಂದ ಇಂದು ಶೌರ್ಯ ಚಕ್ರ ಪುರಸ್ಕಾರ ಅರಸಿ ಬಂದಿದೆ. ರಾಷ್ಟ್ರಪತಿಗಳಿಂದ ಶ್ರೇಷ್ಠ ಪುರಸ್ಕಾರ ಸ್ವೀಕರಿಸುವಾಗ ಅವರಲ್ಲಿ ಹೆಮ್ಮೆ ಪ್ರಕಾಶಿಸುತ್ತಿತ್ತು.
ಅಂದು ಆಗಿದ್ದೇನು?
ನವದೆಹಲಿ: ಇರ್ಫಾನ್ ರಂಜಾನ್ ಶೇಖ್, 2017ರಲ್ಲಿ ಈತ ಕೇವಲ 14 ವರ್ಷದ ಬಾಲಕ. ಅಂದು ಆತ ತೋರಿದ ಶೌರ್ಯ , ಸಾಹಸದಿಂದ ಇಂದು ಶೌರ್ಯ ಚಕ್ರ ಪುರಸ್ಕಾರ ಅರಸಿ ಬಂದಿದೆ. ರಾಷ್ಟ್ರಪತಿಗಳಿಂದ ಶ್ರೇಷ್ಠ ಪುರಸ್ಕಾರ ಸ್ವೀಕರಿಸುವಾಗ ಅವರಲ್ಲಿ ಹೆಮ್ಮೆ ಪ್ರಕಾಶಿಸುತ್ತಿತ್ತು.
ಅಂದು ಆಗಿದ್ದೇನು?
2017 ಅಕ್ಟೋಬರ್ ತಿಂಗಳ ಒಂದು ದಿನ ಜಮ್ಮು ಮತ್ತು ಕಾಶ್ಮೀರದಲ್ಲಿನ ಇರ್ಫಾನ್ ಮನೆಯ ಮುಂದೆ ದೊಡ್ಡದಾದ ಶಬ್ದ ಕೇಳಿಸಿತ್ತು. ಏನದು ಎಂದು ನೋಡಲು ಮನೆಗೆ ಬಾಗಿಲು ತೆರೆದ ಇರ್ಫಾನ್ ಎದುರು ಮೂವರು ಸಶಸ್ತ್ರಧಾರಿ ಉಗ್ರರು ರಕ್ಕಸರಂತೆ ನಿಂತಿದ್ದರು. ಅವರ ಬಳಿಯಿದ್ದ ಭಾರಿ ಪ್ರಮಾಣದ ರೈಫಲ್ಗಳು, ಗ್ರನೇಡ್ಗಳನ್ನು ಆ ವಯಸ್ಸಿನಲ್ಲಿ ಬೇರೆ ಯಾರಾದರೂ ಕಂಡಿದ್ದರೆ ಅಲ್ಲೆ ಪ್ರಜ್ಞೆ ತಪ್ಪುತ್ತಿದ್ದರು. ಆದರೆ ಇರ್ಫಾನ್ ಯಾವುದನ್ನೂ ಲೆಕ್ಕಿಸದೇ ಧೈರ್ಯದಿಂದ ಉಗ್ರರ ಮೇಲೆ ಎರಗಿದ್ದರು.
ರಾಜಕೀಯ ಹೋರಾಟಗಾರರಾಗಿದ್ದ ಇರ್ಫಾನ್ ತಂದೆ ಮೊಹಮ್ಮದ್ ರಂಜಾನ್ ಶೇಖ್ರನ್ನು ಕೊಲ್ಲಲೆಂದೇ ಅಂದು ರಾತ್ರಿ ಉಗ್ರರು ಮನೆಗೆ ನುಗ್ಗಿದ್ದರು. ತಂದೆಗೆ ಅಪಾಯವಾಗಬಾರದೆಂದು ಇರ್ಫಾನ್ ಉಗ್ರರನ್ನು ಬಾಗಿಲ ಬಳಿಯೇ ತಡೆದು , ಓಡಿಸಲು ಶಕ್ತಿ ಮೀರಿ ಪ್ರಯತ್ನ ಮಾಡಿದ್ದರು. ಉಗ್ರರು ನಿರಂತರವಾಗಿ ಗುಂಡಿನ ದಾಳಿಗೆ ಮುಂದಾದಾಗ ಇರ್ಫಾನ್ ತಂದೆ ರಂಜಾನ್ ಸಹ ಉಗ್ರರ ಮೇಲೆರಗಿ ಹೋರಾಡಿದ್ದರು. ಆದರೆ ಹೊಡೆದಾಟದಲ್ಲಿ ರಂಜಾನ್ ಗಂಭೀರವಾಗಿ ಗಾಯಗೊಂಡಿದ್ದರು. ಇರ್ಫಾನ್ ನಡೆಸಿದ ದಾಳಿಗೆ ಓರ್ವ ಉಗ್ರ ಕೂಡ ಗಾಯಗೊಂಡಿದ್ದ.
ಇದಾದ ನಂತರ ಇರ್ಫಾನ್ ಸ್ಥಳೀಯರಿಗೆ ಹೀರೋ ಆಗಿದ್ದಾರೆ. ಅವರ ಧೈರ್ಯ, ಸಾಹಸದ ಕತೆ ಎಲ್ಲೆಡೆ ಹರಡಿತು. ಇಂದು ಗಣ್ಯಾತಿಗಣ್ಯರ ಸಮ್ಮುಖದಲ್ಲಿ, ರಾಷ್ಟ್ರಪತಿಗಳಿಂದ ಶೌರ್ಯ ಚಕ್ರ ಸ್ವೀಕರಿಸಿ, ಯುವಕರಿಗೆ ಮಾದರಿ ಎನಿಸಿದರು.