ಕರ್ನಾಟಕ

karnataka

By

Published : Jan 31, 2020, 9:13 AM IST

ETV Bharat / bharat

ಜಾಮಿಯಾ ಫೈರಿಂಗ್: ಗಾಯಾಳು ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚ ಭರಿಸಲಿದೆ ವಿವಿ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮಿಯಾ ವಿವಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ನಡೆದ ಫೈರಿಂಗ್​ನಲ್ಲಿ ಗಾಯಗೊಂಡಿರುವ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಿಂದ ಭರಿಸುವುದಾಗಿ ಉಪಕುಲಪತಿ ನಜ್ಮಾ ಅಖ್ತರ್​ ತಿಳಿಸಿದ್ದಾರೆ.

Jamia firing
ಜಾಮಿಯಾ ಫೈರಿಂಗ್

ನವದೆಹಲಿ:ಜಾಮಿಯಾ ನಗರದಲ್ಲಿ ಗುರುವಾರ ನಡೆದ ಫೈರಿಂಗ್​ನಲ್ಲಿ ಗಾಯಗೊಂಡಿರುವ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದಿಂದ ಭರಿಸುವುದಾಗಿ ಉಪಕುಲಪತಿ ನಜ್ಮಾ ಅಖ್ತರ್​ ತಿಳಿಸಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಜಾಮಿಯಾ ವಿವಿ ವಿದ್ಯಾರ್ಥಿಗಳು ನಡೆಸುತ್ತಿದ್ದ ಪ್ರತಿಭಟನೆ ವೇಳೆ ಇದ್ದಕ್ಕಿಂದ್ದಂತೆ ಕೈಯಲ್ಲಿ ಗನ್​ ಹಿಡಿದುಕೊಂಡು ಬಂದಿದ್ದ ರಾಮಭಕ್ತ​ ಗೋಪಾಲ್ ಎಂಬ ಯುವಕ 'ತಗೋ ಸ್ವಾತಂತ್ರ್ಯ' ("Yeh lo aazadi") ಎಂದು ಘೋಷಣೆ ಕೂಗುತ್ತಾ ಪ್ರತಿಭಟನಾನಿರತರ ಮೇಲೆ ಫೈರಿಂಗ್ ನಡೆಸಿದ್ದ. ಘಟನೆಯಲ್ಲಿ ಶಾದಾಬ್ ಫಾರೂಕ್ ಎಂಬ ಸಮೂಹ ಸಂವಹನ ವಿದ್ಯಾರ್ಥಿಯೋರ್ವ ಗಾಯಗೊಂಡಿದ್ದು, ಆತನನ್ನು ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಗುರುವಾರ ರಾತ್ರಿ ಉಪಕುಲಪತಿ ಆಸ್ಪತ್ರೆಗೆ ಭೇಟಿ ನೀಡಿದ್ದು, ಇದೊಂದು ಹೀನಾಯ ಕೃತ್ಯವಾಗಿದ್ದು, ಇದನ್ನು ನಾವು ಖಂಡಿಸುತ್ತೇವೆ. ಅಲ್ಲದೇ ಈ ವೇಳೆ ಮೌನವಾಗಿದ್ದ ಪೊಲೀಸರ ಕ್ರಮವನ್ನೂ ಖಂಡಿಸುತ್ತೇವೆ. ಇದು ದೆಹಲಿ ಪೊಲೀಸರ ಮೇಲೆ ನಮಗಿದ್ದ ನಂಬಿಕೆಯನ್ನೂ ಹುಸಿ ಮಾಡಿದೆ. ಇನ್ನು ಗಾಯಗೊಂಡಿರುವ ವಿದ್ಯಾರ್ಥಿಯ ಚಿಕಿತ್ಸಾ ವೆಚ್ಚವನ್ನು ವಿವಿ ಭರಿಸಲಿದೆ ಎಂದು ಹೇಳಿದ್ದಾರೆ.

ABOUT THE AUTHOR

...view details