ಕರ್ನಾಟಕ

karnataka

By

Published : Sep 18, 2020, 8:39 PM IST

ETV Bharat / bharat

ಕಣಿವೆ ರಾಜ್ಯದ ಬಡ ಮಕ್ಕಳನ್ನು ಕ್ರೀಡೆಗೆ ತರಲು ರೈನಾ ಆಸಕ್ತಿ: ಲೆ.ಗವರ್ನರ್ ಜೊತೆ ಚರ್ಚಿಸಿದ ಕ್ರಿಕೆಟಿಗ

ಮೂಲತಃ ಶ್ರೀನಗರದವರಾದ ಸುರೇಶ್​ ರೈನಾ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಬಡ ಮಕ್ಕಳನ್ನು ಕೀಡೆಯಲ್ಲಿ ಮೇಲಕ್ಕೆ ಒಯ್ಯುವ ಕುರಿತು ಯೋಜನೆ ರೂಪಿಸುತ್ತಿದ್ದಾರೆ.

ಎಲ್-ಜಿ, ಡಿಜಿಪಿಯನ್ನು ಭೇಟಿ ಮಾಡಿದ ಸುರೇಶ್​ ರೈನಾ
ಎಲ್-ಜಿ, ಡಿಜಿಪಿಯನ್ನು ಭೇಟಿ ಮಾಡಿದ ಸುರೇಶ್​ ರೈನಾ

ಶ್ರೀನಗರ:ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ ಒಂದು ತಿಂಗಳ ನಂತರ, ಕ್ರಿಕೆಟಿಗ ಸುರೇಶ್ ರೈನಾ ಅವರು ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಮತ್ತು ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರನ್ನು ಭೇಟಿ ಮಾಡಿದ್ದಾರೆ.

ಮೂಲತಃ ಶ್ರೀನಗರದವರಾದ ಸುರೇಶ್​ ರೈನಾ ಆಗಸ್ಟ್ 26 ರಂದು ಜಮ್ಮು ಮತ್ತು ಕಾಶ್ಮೀರದ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಹಾಗೂ ಅನಂತ್‌ನಾಗ್​ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಅವರಿಗೆ ಪತ್ರ ಬರೆದಿದ್ದರು.

ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಭೇಟಿ ಮಾಡಿದ ರೈನಾ

"ನಾನು ಈ ಪತ್ರವನ್ನು ಕ್ರಿಕೆಟ್ ಪ್ರಾರಂಭಿಸುವ ಮತ್ತು ಇದನ್ನು ಉತ್ತೇಜಿಸುವ ಭರವಸೆಯೊಂದಿಗೆ ಬರೆಯುತ್ತಿದ್ದೇನೆ. ಇದರಿಂದಾಗಿ ಜಮ್ಮು ಮತ್ತು ಕಾಶ್ಮೀರದ ಬಡ ಮಕ್ಕಳಿಗೆ ಕ್ರಿಕೆಟ್ ವೃತ್ತಿಜೀವನವನ್ನು ರೂಪಿಸಲು ಅವಕಾಶ ಒದಗಿಸಿದಂತೆ ಆಗುತ್ತದೆ" ಎಂದು ರೈನಾ ಪತ್ರದಲ್ಲಿ ತಿಳಿಸಿದ್ದಾರೆ.

"ಗೌರವಾನ್ವಿತ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ಬೆಂಬಲ ದೊರೆತಿರುವುದು ನನಗೆ ಅಪಾರ ಸಂತೋಷವನ್ನುಂಟು ಮಾಡಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕ್ರೀಡೆಗೆ ವೇದಿಕೆ ರಚಿಸುವ ನಿಟ್ಟಿನಲ್ಲಿ ಕೆಲಸ ಮಾಡುವ ಕುರಿತು ಅವರೊಂದಿಗೆ ಇಂದು ಸಭೆ ನಡೆಸಲಾಗಿದೆ " ಎಂದು ಟ್ವೀಟರ್​ನಲ್ಲಿ ರೈನಾ ಹೇಳಿದ್ದಾರೆ.

ಡಿಜಿಪಿಯನ್ನು ಭೇಟಿ ಮಾಡಿದ ಸುರೇಶ್​ ರೈನಾ

ಎಲ್-ಜಿ ಸಿನ್ಹಾ ಅವರನ್ನು ಭೇಟಿಯಾದ ಕೂಡಲೇ ರೈನಾ, ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ದಿಲ್ಬಾಗ್ ಸಿಂಗ್ ಅವರನ್ನು ಭೇಟಿಯಾದರು.

ABOUT THE AUTHOR

...view details