ಕರ್ನಾಟಕ

karnataka

ETV Bharat / bharat

'ಅವೆಂಜರ್ಸ್‌ ಎಂಡ್‌ಗೇಮ್‌' ಬಜೆಟ್‌ಗಿಂತ ಅರ್ಧದಷ್ಟು ಕಮ್ಮಿ ಚಂದ್ರಯಾನ-2! ಸೋಮವಾರ ನಭಕ್ಕೆ

ಜೂನ್​ 15 ಮುಂಜಾನೆ 2.51ಕ್ಕೆ ಸರಿಯಾಗಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಉಡಾವಣೆಗೊಳ್ಳಲಿದ್ದು, ಕೊನೆಯ ಹಂತದ ಕಾರ್ಯಗಳು ನಡೆಯುತ್ತಿವೆ.

ಚಂದ್ರಯಾನ-2

By

Published : Jul 12, 2019, 9:31 PM IST

ನವದೆಹಲಿ:ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ದ ಮಹತ್ವಾಕಾಂಕ್ಷಿ ಯೋಜನೆಯಾದ ಚಂದ್ರಯಾನ-2 ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ.

ಜೂನ್​ 15 ಮುಂಜಾನೆ 2.51ಕ್ಕೆ ಸರಿಯಾಗಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಚಂದ್ರಯಾನ-2 ಹೊತ್ತ ರಾಕೆಟ್‌ ನಭಕ್ಕೆ ಹಾರಲಿದೆ.

ಚಂದ್ರನ ಮೇಲೆ ನೌಕೆಯನ್ನು ಇಳಿಸಿ ಸಂಪೂರ್ಣ ಅಧ್ಯಯನ ನಡೆಸುವ ನಿಟ್ಟಿನಲ್ಲಿ ಇಸ್ರೋ ಚಂದ್ರಯಾನ-2ರ ಯೋಜನೆ ರೂಪಿಸಿದೆ. ಜೂನ್ 15ರಂದು ಆಗಸದತ್ತ ಚಿಮ್ಮಲಿರುವ ಜಿಎಸ್​​ಎಲ್​​ವಿ ಎಂಕೆ-3 ರಾಕೆಟ್ ಸೆಪ್ಟೆಂಬರ್ 6ರಂದು ಚಂದ್ರನ ಅಂಗಳದಲ್ಲಿ ಇಳಿಯಲಿದೆ.

ಸುಮಾರು 978 ಕೋಟಿ ರೂ ವೆಚ್ಚದ ಚಂದ್ರಯಾನ-2 ಬಹುತೇಕ ಹಾಲಿವುಡ್​ ಸಿನಿಮಾದ ಬಜೆಟ್​ಗಿಂತಲೂ ಕಮ್ಮಿ ಎನ್ನುವುದು ವಿಶೇಷ. ಕೆಲ ತಿಂಗಳ ಹಿಂದೆ ತೆರೆಗಪ್ಪಳಿಸಿ ದೊಡ್ಡ ಯಶಸ್ಸು ಸಾಧಿಸಿದ್ದ ಹಾಲಿವುಡ್​​ ಅವೇಂಜರ್ಸ್​: ಎಂಡ್​ಗೇಮ್ ಚಿತ್ರದ ಬಜೆಟ್​​ಗಿಂತ ಅರ್ಧದಷ್ಟು ಕಡಿಮೆ ಖರ್ಚಿನಲ್ಲಿ ಚಂದ್ರಯಾನ-2 ಪೂರ್ಣವಾಗಿದೆ.

ABOUT THE AUTHOR

...view details