ಕರ್ನಾಟಕ

karnataka

ETV Bharat / bharat

ಚಂದ್ರನತ್ತ ಭಾರತದ ಐತಿಹಾಸಿಕ ಜರ್ನಿ ಆರಂಭ... ಸಂತೋಷದಲ್ಲಿ ಸುದ್ದಿಗೋಷ್ಠಿ ನಡೆಸಿದ ಇಸ್ರೋ ಅಧ್ಯಕ್ಷ - ಸತೀಶ್​ ಧವನ್​ ಬಾಹ್ಯಾಕಾಶ

ಇಸ್ರೋ ಮಹತ್ವಾಕಾಂಕ್ಷಿ ಚಂದ್ರಯಾನ-2 ಉಡಾವಣೆ ಯಶಸ್ವಿಗೊಂಡಿದ್ದು, ಇದೇ ಖುಷಿಯಲ್ಲಿ ಇಸ್ರೋ ಅಧ್ಯಕ್ಷ ಕೆ ಶಿವನ್​ ಸುದ್ದಿಗೋಷ್ಠಿ ನಡೆಸಿ ತಮ್ಮ ಮುಂದಿನ ಯೋಜನೆ ಬಗ್ಗೆ ತಿಳಿಸಿದರು.

ಇಸ್ರೋ ಅಧ್ಯಕ್ಷ

By

Published : Jul 22, 2019, 4:00 PM IST

Updated : Jul 22, 2019, 4:18 PM IST

ಬೆಂಗಳೂರು:ಚಂದ್ರಯಾನ-2 ಉಡ್ಡಯನ ಯಶಸ್ವಿಯಾಗಿದ್ದು, ಆಂಧ್ರಪ್ರದೇಶದ ಶ್ರೀಹರಿಕೋಟದಲ್ಲಿನ ಸತೀಶ್​ ಧವನ್​ ಬಾಹ್ಯಾಕಾಶ ಕೇಂದ್ರದಿಂದ ರಾಕೆಟ್​ ಉಡಾವಣೆಗೊಂಡಿದೆ. ಇದೇ ವಿಷಯವಾಗಿ ಇಸ್ರೋ ಅಧ್ಯಕ್ಷ ಕೆ ಶಿವನ್​ ಸಂತಸ ವ್ಯಕ್ತಪಡಿಸಿದ್ದಾರೆ.

ಇಸ್ರೋ ಅಧ್ಯಕ್ಷ ಸುದ್ದಿಗೋಷ್ಠಿ

GSLVMkIII-M1 ಯಶಸ್ವಿಯಾಗಿ ಉಡಾವಣೆಗೊಂಡಿದ್ದು, ಇದರಿಂದ ಚಂದ್ರನತ್ತ ಭಾರತದ ಐತಿಹಾಸಿಕ ಜರ್ನಿ ಆರಂಭಗೊಂಡಿದೆ ಎಂದರು. ಇದರ ಜತೆಗೆ ಇದೇ ವರ್ಷ ಇನ್ನಷ್ಟು ಗುರಿಯನ್ನಿಟ್ಟುಕೊಂಡಿದ್ದು, ಅದನ್ನ ಯಶಸ್ವಿಯಾಗಿ ನಡೆಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

ನಮ್ಮ ತಂಡದ ಸತತ ಪ್ರಯತ್ನದಿಂದ ಈ ಸಾಧನೆ ಯಶಸ್ವಿಯಾಗಿದ್ದು, ಅವರಿಗೆಲ್ಲರಿಗೂ ನಾನು ಧನ್ಯವಾದ ಹೇಳುವೆ ಎಂದಿದ್ದಾರೆ. ಇಸ್ರೋ ಸಾಧನೆಗೆ ವಿಶ್ವವೇ ನಿಬ್ಬೆರರಾಗಿದ್ದು, ನಮ್ಮ ಕೆಲಸ ಇನ್ನೂ ಮುಗಿದಿಲ್ಲ ಎಂದು ತಿಳಿಸಿದರು.

Last Updated : Jul 22, 2019, 4:18 PM IST

ABOUT THE AUTHOR

...view details