ಹೈದರಾಬಾದ್: ಕೊರೊನಾ ಮಹಾಮಾರಿಯಿಂದಾಗಿ ಕಳೆದ ಆರು ತಿಂಗಳಿಂದ ಜಗತ್ತು ಲಾಕ್‌ಡೌನ್ ಹಂತದಲ್ಲಿದೆ. ನಿರ್ಬಂಧಗಳನ್ನು ಹಂತಹಂತವಾಗಿ ನಿಧಾನವಾಗಿ ತೆಗೆದುಹಾಕಲಾಗುತ್ತಿದೆ. ಕೆಲವು ದೇಶಗಳಲ್ಲಿ, ಶಾಲೆಗಳನ್ನು ಪುನಾರಂಭಿಸಲಾಗುತ್ತಿದೆ. ಶಾಲೆಗಳು ಮತ್ತೆ ತೆರೆದರೆ ಮಕ್ಕಳನ್ನು ಹೇಗೆ ಕಳುಹಿಸುವುದು ಎಂಬ ಬಗ್ಗೆ ಪೋಷಕರು ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಯಾವ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು? ಈ ಪರಿಸ್ಥಿತಿಗಳಲ್ಲಿ, ಮಕ್ಕಳು ಕೊರೊನಾ ವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆಗಳು ಯಾವುವು ಮತ್ತು ಅವು ಸುಲಭವಾಗಿ ಚೇತರಿಸಿಕೊಳ್ಳುತ್ತವೆ? ಅವರು ಎಷ್ಟರ ಮಟ್ಟಿಗೆ ವೈರಸ್ ಹರಡುತ್ತಾರೆ? ಈ ಬಗ್ಗೆ ವಿಜ್ಞಾನಿಗಳು ಏನು ಹೇಳುತ್ತಾರೆ? ಈ ವಿಷಯದ ಬಗ್ಗೆ ಯಾವುದೇ ಅಧ್ಯಯನಗಳು ಇದೆಯೇ? ಇತ್ಯಾದಿ, ಅವರ ಮನಸ್ಸಿನಲ್ಲಿರುವ ಪ್ರಶ್ನೆಗಳಾಗಿವೆ.
ಕೋವಿಡ್-19 ಪರಿಣಾಮವು ಹೆಚ್ಚಿರುವ ಚೀನಾ, ಇಟಲಿ, ಅಮೆರಿಕದಂತಹ ದೇಶಗಳಲ್ಲಿ, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ 2 ಕ್ಕಿಂತ ಕಡಿಮೆ ಮಕ್ಕಳು ಸೋಂಕಿಗೆ ಒಳಗಾಗಿದ್ದಾರೆ ಎಂದು ಬ್ರಿಟಿಷ್ ಸಂಶೋಧಕರು ಹೇಳುತ್ತಾರೆ.
ಕೆಲವು ಸಂಶೋಧಕರು ಮಕ್ಕಳಿಗೆ ವಯಸ್ಕರಿಗಿಂತ ಹೆಚ್ಚು ಸೋಂಕು ತಗುಲಿಲ್ಲ ಎಂದು ತಿಳಿಸಿದ್ದಾರೆ. ಇಲ್ಲಿಯವರೆಗೆ ಶಾಲೆಗಳು ಮುಚ್ಚಲ್ಪಟ್ಟಿವೆ ಮತ್ತು ಮಕ್ಕಳು ಮನೆಯಲ್ಲಿದ್ದಾರೆ. ಹಾಂಕಾಂಗ್ ಸಂಶೋಧಕರು, ಮಕ್ಕಳು ಲಕ್ಷಣ ರಹಿತರಾಗಿದ್ದರಿಂದ, ಅವರ ಮೇಲೆ ವ್ಯಾಪಕವಾದ ಪರೀಕ್ಷೆಗಳನ್ನು ನಡೆಸಲಾಗಿಲ್ಲ. ಸೋಂಕು ಹರಡುವಿಕೆ ತಡೆಗಟ್ಟಲು ಎಲ್ಲಾ ಕ್ರಮಗಳನ್ನು ಖಚಿತಪಡಿಸಿಕೊಂಡ ನಂತರವೇ ಶಾಲೆಗಳು ಮತ್ತೆ ತೆರೆಯಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.
ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟವಾದ ಲೇಖನವೊಂದರ ಪ್ರಕಾರ, ಮಾರ್ಚ್ನಲ್ಲಿ ಶೆನ್ಜೆನ್ (ಚೀನಾ) ದಲ್ಲಿ ನಡೆಸಿದ ಸಂಶೋಧನೆಯ ಪ್ರಕಾರ, ವಯಸ್ಕರೊಂದಿಗೆ ಸಾಂಕ್ರಾಮಿಕ ರೋಗಕ್ಕೆ ತುತ್ತಾದ 10 ವರ್ಷದೊಳಗಿನ ಮಕ್ಕಳು ಸಣ್ಣ ರೋಗಲಕ್ಷಣಗಳನ್ನು ತೋರಿಸುತ್ತಿದ್ದಾರೆ. ದಕ್ಷಿಣ ಕೊರಿಯಾ, ಇಟಲಿ ಮತ್ತು ಐಸ್ಲ್ಯಾಂಡ್ನಲ್ಲಿ, ಪರೀಕ್ಷೆಗಳನ್ನು ವ್ಯಾಪಕವಾಗಿ ನಡೆಸಲಾಗುತ್ತಿದೆ. ಮಕ್ಕಳಿಗೆ ವೈರಸ್ ಸೋಂಕು ಹೆಚ್ಚಿಲ್ಲ ಎಂದು ಹೇಳಲಾಗಿದೆ.
ವೈರಸ್ನ ಕಡಿಮೆ ವಾಹಕಗಳು!