ಕರ್ನಾಟಕ

karnataka

By

Published : Jul 26, 2019, 5:34 AM IST

ETV Bharat / bharat

ಇರಾನ್​​​​ ಬಂಧನದಲ್ಲಿದ್ದ 9 ಭಾರತೀಯರಿಗೆ ಮುಕ್ತಿ: ಉಳಿದವರ ಗತಿ?

ಇತ್ತೀಚೆಗೆ ಬ್ರಿಟನ್​ನ ತೈಲ ಟ್ಯಾಂಕರ್​ ಸ್ಟೆನಾ ಇಂಪೀರೋ ಹಾಗೂ ಎಂಟಿ ರಿಯಾಹ್ ಹಡಗುಗಳನ್ನು ವಶಕ್ಕೆ ಪಡೆದ ಇರಾನ್​ ಅಧಿಕಾರಿಗಳು 21 ಮಂದಿ ಭಾರತೀಯರನ್ನು ಬಂಧಿಸಿದ್ದರು. ಭಾರತೀಯ ಸಿಬ್ಬಂದಿ ಪೈಕಿ 9 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.

Iran

ನವದೆಹಲಿ: ಬ್ರಿಟನ್​​ನ ತೈಲ ಟ್ಯಾಂಕರ್​​ಅನ್ನು ಇರಾನ್ ವಶಕ್ಕೆ ಪಡೆದ ಕಾರಣ ಅಲ್ಲಿಯೇ ಬಂಧನಕ್ಕೊಳಗಾಗಿದ್ದ ಭಾರತೀಯ ಸಿಬ್ಬಂದಿ ಪೈಕಿ 9 ಮಂದಿಯನ್ನು ಬಿಡುಗಡೆ ಮಾಡಲಾಗಿದೆ.

ಇತ್ತೀಚೆಗೆ ಬ್ರಿಟನ್​ನ ತೈಲ ಟ್ಯಾಂಕರ್​ ಸ್ಟೆನಾ ಇಂಪೀರೋ ಹಾಗೂ ಎಂಟಿ ರಿಯಾಹ್ ಹಡಗುಗಳನ್ನು ವಶಕ್ಕೆ ಪಡೆದ ಇರಾನ್​​ ಅಧಿಕಾರಿಗಳು 21 ಮಂದಿ ಭಾರತೀಯರನ್ನು ಬಂಧಿಸಿದ್ದರು. ಈ ಹಡಗುಗಳು ಅಂತಾರಾಷ್ಟ್ರೀಯ ಕಡಲ ನಿಯಮಗಳನ್ನು ಉಲ್ಲಂಘನೆ ಮಾಡಿವೆ ಎಂಬುದು ಇರಾನ್​ನ ರೆವಲ್ಯೂಷನರಿ ಗಾರ್ಡ್​ನ ಆರೋಪವಾಗಿತ್ತು.

ಸದ್ಯ ಎಂಟಿ ರಿಯಾಹ್​ನಲ್ಲಿದ್ದ 12 ಭಾರತೀಯರಲ್ಲಿ 9 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಭಾರತೀಯ ಸಿಬ್ಬಂದಿ ರಕ್ಷಣೆಗೆ ಅಲ್ಲಿನ ರಾಯಭಾರಿಗಳು ಯತ್ನಿಸುತ್ತಿದ್ದಾರೆ.

ಇನ್ನು ಸ್ಪಾನಿಷ್​ನ ಬಂದರು ಬಳಿ ಗ್ರೇಸ್​ 1 ಶಿಪ್​ ಸೀಜ್ ಮಾಡುವ ವೇಳೆ ಬ್ರಿಟಿಷ್​ ನೌಕಾಪಡೆ ಹಾಗೂ ಗಿಬ್ರಾಲ್ತಾರ್​ ಪೊಲೀಸರಿಂದ ಬಂಧನಕ್ಕೊಳಗಾಗಿದ್ದ 24 ಭಾರತೀಯ ಸಿಬ್ಬಂದಿಯನ್ನು ಭಾರತೀಯ ಅಧಿಕಾರಿಗಳು ಸಂಪರ್ಕಿಸಿದ್ದಾಗಿ ವಿದೇಶಾಂಗ ಇಲಾಖೆ ಹೇಳಿದೆ.

For All Latest Updates

TAGGED:

ABOUT THE AUTHOR

...view details