- ಜಮ್ಮುಕಾಶ್ಮೀರದ ಲಡಾಖ್ನ ಬಿಜೆಪಿ ಸಂಸದನಿಂದ ಯೋಗ
- ಜಮ್ಯಾಂಗ್ ಸೆರಿಂಗ್ ನಂಗ್ಯಾಲ್ ಅವರಿಂದ ಯೋಗ ಅಭ್ಯಾಸ
ಅಂತಾರಾಷ್ಟ್ರೀಯ ಯೋಗ ದಿನ: ದೇಶದ ನಾಯಕರು, ಸೆಲೆಬ್ರಿಟಿಗಳಿಂದ ಮನೆಯಲ್ಲೇ ಯೋಗಾಸನ - international yoga day
13:49 June 21
ಲಡಾಖ್ನ ಸಂಸದನಿಂದ ಯೋಗ
13:02 June 21
ನೀರಿನ ಮೇಲೆ ಯೋಗ
- ಇಂದು ಅಂತಾರಾಷ್ಟ್ರೀಯ ಯೋಗ ದಿನ ಹಿನ್ನೆಲೆ
- ತಮಿಳುನಾಡಿನಲ್ಲಿ ಸಾರ್ವಜನಿಕರಿಂದ ನೀರಿನ ಮೇಲೆ ಯೋಗ
- ಪಾಕ್ ಜಲಸಂಧಿಯ ನೀರಿನ ಮೇಲೆ ಯೋಗಾಸನ ಪ್ರದರ್ಶನ
- ತಮಿಳುನಾಡಿನ ರಾಮೇಶ್ವರಂನಲ್ಲಿರುವ ಪಾಕ್ ಜಲಸಂಧಿ
12:59 June 21
ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ ಯೋಗಭ್ಯಾಸ
- ಹುತಾತ್ಮ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಿ ಯೋಗ ದಿನ ಆಚರಣೆ
- ವಿಜಯಪುರ ಸೈಕ್ಲಿಂಗ್ ಗ್ರೂಪ್ನವರಿಂದ ಯೋಗ ದಿನ ಆಚರಣೆ
- ಕೊರೊನಾ ನಿಯಂತ್ರಣಕ್ಕಾಗಿ ಮುಂಜಾಗ್ರತಾ ಕ್ರಮಗಳ ಅಳವಡಿಕೆ
- ಸೂರ್ಯ ನಮಸ್ಕಾರ, ಕಪಾಲಬಾತಿ ಮುಂತಾದ ಆಸನಗಳ ಪ್ರದರ್ಶನ
12:51 June 21
ಮಾಜಿ ಸಚಿವರಿಂದ ಯೋಗಭ್ಯಾಸ
- ವಿಜಯಪುರದಲ್ಲಿ ಮಾಜಿ ಸಚಿವರಿಂದ ಯೋಗ ದಿನಾಚರಣೆ
- ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ ಅವರಿಂದ ಯೋಗ ದಿನ ಆಚರಣೆ
- ತಮ್ಮ ನಿವಾಸದ ಬಳಿಯ ಗಾರ್ಡನ್ನಲ್ಲಿ ಯೋಗಾಭ್ಯಾಸ
- ವಿವಿಧ ಯೋಗಾಸನಗಳನ್ನು ಪ್ರದರ್ಶಿಸಿದ ಮಾಜಿ ಸಚಿವ
12:44 June 21
'ಯೋಗ ಮಾಡುವುದು ಅವಶ್ಯಕ'
- ತಮ್ಮ ನಿವಾಸದಲ್ಲಿ ಯೋಗಭ್ಯಾಸ ಮಾಡಿದ ಸುರಪುರ ಶಾಸಕ
- ನರಸಿಂಹ ನಾಯಕ ರಾಜುಗೌಡ ಅವರಿಂದ ಯೋಗಾಭ್ಯಾಸ
- ಎಲ್ಲರೂ ನಿತ್ಯ ಯೋಗ ಮಾಡುವುದು ಅತ್ಯಂತ ಅವಶ್ಯಕ
- ಸುರಪುರ ಶಾಸಕ ನರಸಿಂಹ ನಾಯಕ ರಾಜುಗೌಡ ಅಭಿಪ್ರಾಯ
12:39 June 21
'ಯೋಗಾಭ್ಯಾಸ ರೂಢಿಸಿಕೊಳ್ಳಿ'
- ಹುಬ್ಬಳ್ಳಿಯ ತಮ್ಮ ನಿವಾಸದಲ್ಲಿ ಸಚಿವ ಜಗದೀಶ್ ಶೆಟ್ಟರ್ ಯೋಗಾಭ್ಯಾಸ
- ಯೋಗದ ವಿವಿಧ ಆಸನಗಳನ್ನು ಮಾಡಿದ ಸಚಿವ ಜಗದೀಶ್ ಶೆಟ್ಟರ್
- ಆರೋಗ್ಯಯುತ ಜೀವನಕ್ಕಾಗಿ ಎಲ್ಲರೂ ಯೋಗಾಭ್ಯಾಸ ರೂಢಿಸಿಕೊಳ್ಳಿ
- ಯೋಗದಿನದ ಅಂಗವಾಗಿ ಸಾರ್ವಜನಿಕರಿಗೆ ಸಚಿವ ಜಗದೀಶ್ ಶೆಟ್ಟರ್ ಕರೆ
12:00 June 21
''ಭಾರತದ ಅತಿ ದೊಡ್ಡ ಕೊಡುಗೆ''
- ಇಂದು ಅಂತಾರಾಷ್ಟ್ರಿಯ ಯೋಗ ದಿನ ಹಿನ್ನೆಲೆ
- ಭಾರತವನ್ನು ಹೊಗಳಿದ ರಷ್ಯಾದ ರಾಯಭಾರಿ
- ನಿಕೋಲಯ್ ಕುದಶೇವ್ ಅವರಿಂದ ಬಣ್ಣನೆ
- ಯೋಗ ಭಾರತದ ಅತಿ ದೊಡ್ಡ ಕೊಡುಗೆ
- ಇದು ದೇಹಾರೋಗ್ಯ, ಮಾನಸಿಕ ಆರೋಗ್ಯಕ್ಕೆ ಸಹಕಾರಿ
- ಭಾರತದಲ್ಲಿರುವ ರಷ್ಯಾದ ರಾಯಭಾರಿ ಅಭಿಪ್ರಾಯ
11:51 June 21
ಮಾಜಿ ಸಿಎಂ ಸಿದ್ದರಾಮಯ್ಯ ಯೋಗ
- ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಿದ ಮಾಜಿ ಸಿಎಂ ಸಿದ್ದರಾಮಯ್ಯ
- ಯೋಗಾಭ್ಯಾಸದಲ್ಲಿ ತೊಡಗಿರುವ ಫೋಟೋ ಟ್ವಿಟರ್ನಲ್ಲಿ ಹಂಚಿಕೆ
- ಆರೋಗ್ಯಕರ ಜೀವನ, ಉತ್ತಮ ಮನಸ್ಸಿಗಾಗಿ ಯೋಗ ಪ್ರಾರಂಭಿಸಿ
- ಬೆಂಗಳೂರಿನಲ್ಲಿ ಮಾಜಿ ಸಿಎಂ, ವಿಪಕ್ಷ ನಾಯಕ ಸಿದ್ದರಾಮಯ್ಯ ಕರೆ
11:47 June 21
'ನೆಮ್ಮದಿಗೆ ಯೋಗ ಸಹಕಾರಿ'
- ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ
- ತಮ್ಮ ಕಿರಿಯ ಮಗನ ಜೊತೆ ಸಚಿವ ಸಿ.ಟಿ.ರವಿ ಯೋಗ
- ಯೋಗ ಮಾಡುವ ಮನುಷ್ಯ ನಿರೋಗಿಯಾಗಿರುತ್ತಾನೆ
- ಮನಸ್ಸಿನ ನೆಮ್ಮದಿಗೆ, ಆರೋಗ್ಯಕ್ಕೆ ಯೋಗ ಸಹಕಾರಿ
- ಚಿಕ್ಕಮಗಳೂರಿನಲ್ಲಿ ಸಚಿವ ಸಿ.ಟಿ.ರವಿ ಅಭಿಪ್ರಾಯ
11:43 June 21
ರಾಷ್ಟ್ರಪತಿ ಯೋಗ
ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿನ್ನೆಲೆ
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಂದ ಯೋಗ
11:38 June 21
ಹಂಪಿಯಲ್ಲಿ ಯೋಗಾಭ್ಯಾಸ
- ಹಂಪಿಯ ರಥ ಬೀದಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
- ಪ್ರಾಣಾಯಾಮ ಮತ್ತು ಸೂರ್ಯ ನಮಸ್ಕಾರ ಮಾಡಿದ ವಿದ್ಯಾರ್ಥಿಗಳು
- 50ಕ್ಕೂ ಹೆಚ್ಚು ವಿದ್ಯಾರ್ಥಿಗಳೊಂದಿಗೆ ಯೋಗಾಭ್ಯಾಸ ಮಾಡಿದ ಶಿಕ್ಷಕರು
11:36 June 21
ಮಾಜಿ ಪ್ರಧಾನಿ ಯೋಗಾಭ್ಯಾಸ
- ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಂದ ಯೋಗಾಭ್ಯಾಸ
- ಬೆಂಗಳೂರಿನ ತಮ್ಮ ನಿವಾಸದಲ್ಲಿ ಹೆಚ್ಡಿಡಿ ಯೋಗಾಭ್ಯಾಸ
- ಅರ್ಧ ಗಂಟೆಗೂ ಹೆಚ್ಚು ಕಾಲ ಮಾಜಿ ಪ್ರಧಾನಿ ಯೋಗ
11:32 June 21
ಶಶಿಕಲಾ ಜೊಲ್ಲೆ ಯೋಗಭ್ಯಾಸ
- ಕುಟುಂಬದೊಂದಿಗೆ ಸಚಿವೆ ಶಶಿಕಲಾ ಜೊಲ್ಲೆ ಯೋಗ ದಿನ ಆಚರಣೆ
- ಭಾರತೀಯ ಪರಂಪರೆಯಲ್ಲಿ ಯೋಗ ದೊಡ್ಡ ಕೊಡುಗೆಯಾಗಿದೆ
- ನೆಮ್ಮದಿ, ಶಾಂತಿ, ಆರೋಗ್ಯ ಸಿಗಬೇಕೆಂದರೆ ಯೋಗ ಅತಿ ಮುಖ್ಯ
- ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಅಭಿಪ್ರಾಯ
11:23 June 21
ಅಂತಾರಾಷ್ಟ್ರೀಯ ಯೋಗಪಟುವಿನಿಂದ ಯೋಗಾಭ್ಯಾಸ
- ಹುಬ್ಬಳ್ಳಿಯಲ್ಲಿ ಯೋಗಪಟು ಶ್ರೀಧರ್ ಹೊಸಮನಿ ಯೋಗಾಭ್ಯಾಸ
- ಸಾಮಾಜಿಕ ಅಂತರದ ಮಹತ್ವ ತಿಳಿಸಲು ಮನೆಯಲ್ಲಿಯೇ ಯೋಗ
- ಯೋಗ ಮಾಡುವುದರಿಂದ ಮನಸ್ಸು, ದೇಹದ ನಿಯಂತ್ರಣ ಸಾಧ್ಯ
- ಯೋಗದಿಂದ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು
- ಅಂತಾರಾಷ್ಟ್ರೀಯ ಯೋಗಪಟು ಡಾ.ಶ್ರೀಧರ ಹೊಸಮನಿ ಅಭಿಪ್ರಾಯ
11:08 June 21
ಯೋಗಾಸನ ಹಾಕಿದ ಸಚಿವರು
- ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಯೋಗ
- ಕೃಷಿ ಸಚಿವ ಬಿ.ಸಿ.ಪಾಟೀಲ್ ಶಿವಮೊಗ್ಗದ ತಮ್ಮ ಗ್ರಾಮದಲ್ಲಿ ಯೋಗ
- ಹಲವು ಯೋಗಾಸನ ಹಾಕುವ ಮೂಲಕ ಆಶ್ಚರ್ಯ ಮೂಡಿಸಿದ ಸಚಿವರು
- ಯೋಗ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ನೆಮ್ಮದಿ ನೀಡುತ್ತದೆ
- ಯೋಗ ದಿನದಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅಭಿಪ್ರಾಯ
11:02 June 21
''ಮನೆಯಿಂದಲೇ ಯೋಗ''
- ಮೈಸೂರಿನಲ್ಲಿ ಕೊರೊನಾ ಭೀತಿ ಹಿನ್ನೆಲೆಯಲ್ಲಿ ''ಮನೆಯಿಂದಲೇ ಯೋಗ''
- ''ಮನೆಯಿಂದಲೇ ಯೋಗ'' ಕಾರ್ಯಕ್ರಮಕ್ಕೆ ಸ್ಪಂದಿಸಿದ ಜನತೆ
- ಯೋಗಾಭ್ಯಾಸದ ಫೋಟೋ ಹಾಕಿ ಸರ್ಟಿಫಿಕೇಟ್ ಪಡೆಯುವ ವ್ಯವಸ್ಥೆ
- ಸಾಂಸ್ಕೃತಿಕ ನಗರಿಯಲ್ಲಿ ಒಂದು ಲಕ್ಷ ಜನ ಮನೆಯಿಂದಲೇ ಯೋಗ
- ಮೈಸೂರು ಅರಮನೆ ಮುಂಭಾಗದಲ್ಲೂ ಸಹ ಯೋಗಭ್ಯಾಸ
10:58 June 21
ಸಚಿವ ಕೆ.ಎಸ್.ಈಶ್ವರಪ್ಪ ಯೋಗ
- ಕುಟುಂಬದೊಂದಿಗೆ ಯೋಗ ಮಾಡಿದ ಸಚಿವ ಕೆ.ಎಸ್.ಈಶ್ವರಪ್ಪ
- ತಮ್ಮ ಮನೆಯಲ್ಲಿಯೇ ಯೋಗ ದಿನಾಚರಣೆ ಮಾಡಿದ ಈಶ್ವರಪ್ಪ
- ಭಾರತೀಯ ಸಂಸ್ಕೃತಿಯ ಪ್ರತೀಕವಾದ ಯೋಗ ವಿಶ್ವವನ್ನೇ ಒಗ್ಗೂಡಿಸಿದೆ
- ಶಿವಮೊಗ್ಗದಲ್ಲಿ ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯ
10:52 June 21
''ಯೋಗಕ್ಕೆ ವಿಶಿಷ್ಠ ಶಕ್ತಿಯಿದೆ''
- ಶಾಂತಿ, ಶಕ್ತಿಯನ್ನು ಪ್ರಕಟಿಸುವ ವಿಶಿಷ್ಠ ಶಕ್ತಿಯನ್ನು ಯೋಗ ಹೊಂದಿದೆ
- ಇದು ದೇಹವನ್ನು ಮಾತ್ರವಲ್ಲ, ಚೈತನ್ಯವನ್ನೂ ಗುಣಪಡಿಸುತ್ತದೆ
- ಯೋಗವನ್ನು ಜೀವನದ ಅವಿಭಾಜ್ಯ ಅಂಗವನ್ನಾಗಿ ಮಾಡೋಣ
- ಟ್ವಿಟರ್ನಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಕರೆ
10:44 June 21
ಕಲಬುರಗಿಯಲ್ಲಿ ಯೋಗ
- ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆ
- ಕಲಬುರಗಿಯಲ್ಲಿ ಸಾರ್ವಜನಿಕರಿಂದ ಯೋಗ
10:38 June 21
ಜೆ.ಪಿ.ನಡ್ಡಾ ಯೋಗ
- ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಯೋಗ
- ತಮ್ಮ ನಿವಾಸದಲ್ಲಿ ಯೋಗ ದಿನ ಆಚರಿಸಿದ ಜೆ.ಪಿ.ನಡ್ಡಾ
- ಟ್ವಿಟರ್ನಲ್ಲಿ ಬಿಜೆಪಿಯಿಂದ ಟ್ವೀಟ್
10:23 June 21
ಲಡಾಖ್ನಲ್ಲಿ ಐಟಿಬಿಪಿಯಿಂದ ಯೋಗ ದಿನ
- ಲಡಾಖ್ನಲ್ಲಿ ಐಟಿಬಿಪಿಯಿಂದ ಯೋಗ ದಿನ
- ಬೌದ್ಧ ಭಿಕ್ಷುಗಳೊಂದಿಗೆ ಸೇರಿ ಯೋಗ ನಡೆಸಿದ ಐಟಿಬಿಪಿ