ಮುಂಬೈ:ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ಮಹಾರಾಷ್ಟ್ರ ಸರ್ಕಾರ ಸರ್ಪಂಚ್ ಆಯ್ಕೆಗೆ ನೇರ ಮತದಾನ ಮಾಡುವಂತೆ ವಿಧೇಯಕ ಮಂಡನೆಗೆ ನಿರ್ಧರಿಸಿದೆ, ಇದರ ಅಡಿಯಲ್ಲಿ ಜನರು ನೇರವಾಗಿ ತಮ್ಮ ಗ್ರಾಮದ ಸರ್ಪಂಚ್ (ಗ್ರಾಮ ಪಂಚಾಯತ್ ಅಧ್ಯಕ್ಷ) ರನ್ನು ಆಯ್ಕೆ ಮಾಡಬಹುದು.
ಈ ಕುರಿತು ಸುಗ್ರೀವಾಜ್ಞೆಯ ಘೋಷಣೆಗೆ ಸಹಿ ಹಾಕಲು ರಾಜ್ಯಪಾಲ ಬಿ.ಎಸ್. ಕೊಶ್ಯರಿ ನಿರಾಕರಿಸಿದ್ದರು. ಹೀಗಾಗಿ ಫೆಬ್ರವರಿ 24ರಿಂದ ಪ್ರಾರಂಭವಾಗುವ ಬಜೆಟ್ ಅಧಿವೇಶನದಲ್ಲಿ ಹೊಸ ವಿಧೇಯಕ ಮಂಡಿಸಿ ಸದನದ ಅಂಗೀಕಾರ ಪಡೆಯುವಂತೆ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದರು.