ನವದೆಹಲಿ :1999ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯು ಇಡೀ ದೇಶದ ಗಮನ ಸೆಳೆದಿತ್ತು. ಕಾರಣ ಇಬ್ಬರು ಪ್ರಬಲ ಮಹಿಳಾ ರಾಜಕಾರಣಿಗಳ ರಾಜಕೀಯ ಕದನಕ್ಕೆ ಗಣಿನಾಡು ಸಾಕ್ಷಿಯಾಗಿತ್ತು. ಆ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅವರು ಬಳ್ಳಾರಿ ಹಾಗೂ ಅಮೇಠಿ ಎರಡೂ ಕಡೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸುಷ್ಮಾ ಸ್ವರಾಜ್ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಧುಮುಕಿದ್ದರು.
ಭಾರತೀಯ ಮಗಳು v/s ವಿದೇಶಿ ಸೊಸೆ... ಹೀಗಿತ್ತು 99ರ ಬಳ್ಳಾರಿ ಚುನಾವಣೆ ಬಿಸಿ - Barack Obama, President of the United States
1999ರ ಲೋಕಸಭಾ ಚುನಾವಣೆಯಲ್ಲಿ ಬಳ್ಳಾರಿಯು ಇಡೀ ದೇಶದ ಗಮನ ಸೆಳೆದಿತ್ತು. ಕಾರಣ ಇಬ್ಬರು ಪ್ರಬಲ ಮಹಿಳಾ ರಾಜಕಾರಣಿಗಳ ರಾಜಕೀಯ ಕದನಕ್ಕೆ ಗಣಿನಾಡು ಸಾಕ್ಷಿಯಾಗಿತ್ತು
ಕಾಸಗಲ ಕುಂಕುಮ, ಮೂಗುತಿ, ಕಾಟನ್ ಸೀರೆ ಧರಿಸಿದ್ದ ಸುಷ್ಮಾರ ಫೋಟೋಗಳು ಬಳ್ಳಾರಿಯಾದ್ಯಂತ ರಾರಾಜಿಸುತ್ತಿತ್ತು. ಸುಷ್ಮಾ ಅವರನ್ನು ಒಬ್ಬ ಮಾದರಿ ಭಾರತೀಯ ಹೆಣ್ಣುಮಗಳು, ಭಾರತೀಯ ಸಂಸ್ಕೃತಿಯ ರಾಯಭಾರಿಯಾಗಿ ಬಿಂಬಿಸುವ ಸಲುವಾಗಿ ಅವರು ಹಬ್ಬ ಹರಿದಿನಗಳಲ್ಲಿ ಪಾಲ್ಗೊಂಡಿದ್ದ ಚಿತ್ರಗಳನ್ನು ಪೋಸ್ಟರ್ ರೂಪದಲ್ಲಿ ಅಲ್ಲಲ್ಲಿ ಅಂಟಿಸಲಾಗಿತ್ತು. ಆಧುನಿಕ ಭಾರತ ಹಿಂದೂ ಪ್ರತಿನಿಧಿ ಹೆಣ್ಣುಮಗಳ ರೂಪದಲ್ಲಿ ಸುಷ್ಮಾ ಕಾಣಿಸಿಕೊಂಡಿದ್ದರೆ.
ಅವರ ಎದುರು ಇಟಲಿ ಮೂಲದ ಸೋನಿಯಾ ಅವರು ಸ್ಪರ್ಧಿಸಿದ್ದರು. ಹಾಗಾಗಿಯೇ ಬಳ್ಳಾರಿ ಕಣವನ್ನು ಭಾರತೀಯ ಮಗಳು v/s ವಿದೇಶಿ ಸೊಸೆ ಎಂದು ವ್ಯಾಖ್ಯಾನಿಸಲಾಗುತ್ತಿತ್ತು. ಫಲಿತಾಂಶ ಹೊರಬಿದ್ದಾಗ ಸೋನಿಯಾ ವಿರುದ್ಧ ಸುಷ್ಮಾ ಸೋತಿದ್ದರು. ಅಷ್ಟಾದರೂ ಇಬ್ಬರ ನಡುವೆ ಸಂಬಂಧ ಹಳಸಿರಲಿಲ್ಲ. ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅವರು ಭಾರತಕ್ಕೆ ಬಂದಾಗ ಸೋನಿಯಾ-ಸುಷ್ಮಾ ಮುಖಾಮುಖಿಯಾಗಿದ್ದರು. ಅವರಿಬ್ಬರೂ ಪರಸ್ಪರ ಕುಟುಂಬಗಳ ವಿಚಾರ ಹಾಗೂ ಸೀರೆ ವಿಷಯ ಪ್ರಸ್ತಾಪಿಸಿದ್ದರು ಎಂದು ಹೇಳಲಾಗಿದೆ.