ಶ್ರೀನಗರ:ಆರ್ಟಿಕಲ್ 370 ರದ್ಧುಗೊಂಡ ಬಳಿಕ ಭಾರತದ ಗಡಿಯೊಳಗೆ ನುಸುಳಲು ಯತ್ನಿಸುತ್ತಿರುವ ಭಯೋತ್ಪಾದಕರಿಗೆ ಭಾರತೀಯ ಸೇನೆ ಸರಿಯಾದ ಪ್ರತ್ಯುತ್ತರ ನೀಡುತ್ತಿದೆ. ಇದೀಗ ಜಮ್ಮು-ಕಾಶ್ಮೀರದ ಕುಪ್ವಾರ ಗಡಿ ಸೆಕ್ಟೇರ್ನಲ್ಲಿ ನುಗ್ಗಿದ್ದ ಉಗ್ರರನ್ನ ವಾಪಸ್ ಕಳುಹಿಸಲುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ.
ಭಾರತದ ಗಡಿಯೊಳಗೆ ನುಸುಳಲು ಉಗ್ರರ ಯತ್ನ... ಭಾರತೀಯ ಸೇನೆಯಿಂದ ಪ್ರತ್ಯುತ್ತರ! - ಪಾಕಿಸ್ತಾನ ಬಾರ್ಡರ್ ಆ್ಯಕ್ಸನ್ ಟೀಂ
ಭಾರತದ ಗಡಿಯೊಳಗೆ ನುಸುಳಲು ಯತ್ನ ನಡೆಸಿದ್ದ ಭಯೋತ್ಪಾದಕರಿಗೆ ಭಾರತೀಯ ಯೋಧರು ಗುಂಡಿನ ದಾಳಿ ಮೂಲಕ ಸರಿಯಾದ ತಿರುಗೇಟು ನೀಡಿದ್ದು, ಇದೀಗ ಅದರ ವಿಡಿಯೋ ರಿಲೀಸ್ ಮಾಡಿದೆ.
ಭಾರತದ ಗಡಿಯೊಳಗೆ ನುಸುಳಲು ಉಗ್ರರ ಯತ್ನ
ಕಳೆದ ಜುಲೈ 30ರಂದು ಪಾಕಿಸ್ತಾನದ ಕೆಲ ಉಗ್ರರು ಭಾರತದ ಗಡಿಯೊಳಗೆ ನುಳುಸುತ್ತಿದ್ದ ವೇಳೆ ಅವರ ಮೇಲೆ ಗುಂಡಿನ ದಾಳಿ ನಡೆಸಿರುವ ವಿಡಿಯೋ ತುಣುಕವೊಂದನ್ನ ಭಾರತೀಯ ಸೇನೆ ರಿಲೀಸ್ ಮಾಡಿದೆ. ಭಾರತೀಯ ಗುಂಡಿನ ದಾಳಿಗೆ ತತ್ತರಿಸಿರುವ ಉಗ್ರರು ವಾಪಸ್ ತೆರಳಿದ್ದು, ಅದರ ವಿಡಿಯೋ ಸೆರೆಯಾಗಿದೆ.
ಕಳೆದ ಆಗಸ್ಟ್ ತಿಂಗಳಲ್ಲೂ ಭಾರತದ ಗಡಿಯೊಳಗೆ ನುಗ್ಗಿದ್ದ ಪಾಕಿಸ್ತಾನ ಬಾರ್ಡರ್ ಆ್ಯಕ್ಸನ್ ಟೀಂ(BAT) ಐವರು ಸದಸ್ಯರನ್ನ ಭಾರತೀಯ ಸೇನೆ ಹೊಡೆದುರುಳಿಸಿ, ಅವರ ಶವ ತೆಗೆದುಕೊಂಡು ಹೋಗುವಂತೆ ಸೂಚನೆ ನೀಡಿ, ವಿಡಿಯೋ ರಿಲೀಸ್ ಮಾಡಿತ್ತು.