ಗುವಾಹಟಿ: ಇಂಡಿಯಾ-ಶ್ರೀಲಂಕಾ ತಂಡಗಳ ನಡುವಿನ ಮೊದಲ ಟಿ-20 ಪಂದ್ಯ ಮಳೆಯಿಂದ ರದ್ದಾಗಿದ್ದು, ಕ್ರೀಡಾಭಿಮಾನಿಗಳಲ್ಲಿ ನಿರಾಶೆಯನ್ನುಂಟು ಮಾಡಿದ್ದು ಸುಳ್ಳಲ್ಲ. ಇದರ ಮಧ್ಯೆ ಕ್ರಿಕೆಟರ್ಸ್ ಬಹುದೊಡ್ಡ ಎಡವಟ್ಟು ಮಾಡಿದ್ದಾರೆ ಎಂದು ಅಸ್ಸೋಂ ಕ್ರಿಕೆಟ್ ಮಂಡಳಿ ಆರೋಪ ಮಾಡಿದೆ.
9:30ರವರೆಗೂ ಇರಿ ಎಂದು ಹೇಳಿದ್ರೂ 9ಗಂಟೆಗೆ ಹೋಟೆಲ್ಗೆ ತೆರಳಿದ್ರು ಪ್ಲೇಯರ್ಸ್ : ಕ್ರಿಕೆಟ್ ಮಂಡಳಿ ಆರೋಪ - ಮಳೆಯಿಂದ ಪಂದ್ಯ ರದ್ಧು
ಶ್ರೀಲಂಕಾ-ಭಾರತದ ನಡುವೆ ನಡೆಯಬೇಕಾಗಿದ್ದ ಮೊದಲ ಟಿ-20 ಪಂದ್ಯ ಮಳೆಯಿಂದ ರದ್ಧುಗೊಂಡಿದ್ದು, ಇದರ ಮಧ್ಯೆ ಕ್ರಿಕೆಟರ್ಸ್ ಮೇಲೆ ಗಂಭೀರ ಆರೋಪ ಕೇಳಿ ಬಂದಿದೆ.
ಪಂದ್ಯ ಆರಂಭಗೊಳ್ಳಲು ಕೆಲವೇ ನಿಮಿಷಗಳು ಬಾಕಿ ಇರುವಾಗಲೇ ಮಳೆ ಸುರಿಯಲು ಆರಂಭಿಸಿರುವುದರಿಂದ ಉಭಯ ತಂಡದ ಪ್ಲೇಯರ್ಸ್ ಮೈದಾನಕ್ಕೆ ಬರಲೇ ಇಲ್ಲ. ಇದರ ಮಧ್ಯೆ ಅಂಪೈರ್ ಕೊನೆಯದಾಗಿ 9:30ಕ್ಕೆ ಮೈದಾನ ವೀಕ್ಷಣೆ ಮಾಡುವುದಾಗಿ ಘೋಷಣೆ ಮಾಡಿದ್ದರು. ಆದರೆ ಕೊನೆಯ ವೀಕ್ಷಣೆ ನಡೆಸುವುದಕ್ಕೂ ಮುಂಚಿತವಾಗಿ ಕೆಲ ಪ್ಲೇಯರ್ಸ್ ಮೈದಾನದಿಂದ ತಮ್ಮ ಹೊಟೇಲ್ಗೆ ತೆರಳಿದ್ದಾರೆ ಎಂದು ಅಲ್ಲಿನ ಕ್ರಿಕೆಟ್ ಅಸೋಷಿಯೆಷನ್ ಆರೋಪ ಮಾಡಿದೆ.
ಅಸ್ಸೋಂ ಕ್ರಿಕೆಟ್ ಅಸೋಷಿಯೆಷನ್ ಸೆಕ್ರೆಟರಿ ದೇವಜಿತ್ ಸೈಕೈ ಮಾತನಾಡಿ, 9 ಗಂಟೆಗೆ ಅನೇಕ ಪ್ಲೇಯರ್ಸ್ ಹೊಟೇಲ್ಗೆ ತೆರಳಿದ್ದರೂ ಅಂಪೈರ್, ಮ್ಯಾಚ್ ರೆಫ್ರಿ ಹೇಗೆ ಮೈದಾನದಲ್ಲಿ ವೀಕ್ಷಣೆ ಮಾಡಿದ್ರೂ ಎಂಬುದು ಗೊತ್ತಾಗಲಿಲ್ಲ ಎಂದಿದ್ದಾರೆ.