ಕರ್ನಾಟಕ

karnataka

ETV Bharat / bharat

ಥಿಮ್​ ಸೌಥಿ ಎಸೆದ ಸೂಪರ್​ ಓವರ್​​ನಲ್ಲೇ 6 ಸಲ ಸೋಲುಂಡ ನ್ಯೂಜಿಲೆಂಡ್​​! - ಟೀಂ ಇಂಡಿಯಾ

ಸೂಪರ್​ ಓವರ್​​ನಲ್ಲೇ ನ್ಯೂಜಿಲೆಂಡ್​ ತಂಡ ಎದುರಾಳಿ ವಿರುದ್ಧ ಅನೇಕ ಸಲ ಸೋಲು ಕಂಡಿದ್ದು, ಇದೀಗ ಟೀಂ ಇಂಡಿಯಾ ವಿರುದ್ಧ ಕೂಡ ಇದೇ ನಡೆದಿದೆ.

India vs New Zealand
India vs New Zealand

By

Published : Jan 31, 2020, 5:30 PM IST

ವೆಲ್ಲಿಂಗ್ಟನ್​​:ಟೀಂ ಇಂಡಿಯಾ ವಿರುದ್ಧ ನಡೆದ ನಾಲ್ಕನೇ ಟಿ-20 ಪಂದ್ಯದಲ್ಲೂ ನ್ಯೂಜಿಲೆಂಡ್​ ತಂಡ ಸೂಪರ್​ ಓವರ್​​ನಲ್ಲೇ ಸೋಲು ಕಂಡಿದ್ದು, ಈ ಮೂಲಕ ಸರಣಿಯಲ್ಲಿ ಟೀಂ ಇಂಡಿಯಾ 4-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ಟೀಂ ಇಂಡಿಯಾ

ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ್ದ ಟೀಂ ಇಂಡಿಯಾ 8ವಿಕೆಟ್​​ನಷ್ಟಕ್ಕೆ 165ರನ್​​ಗಳಿಕೆ ಮಾಡ್ತು. ಇದರ ಬೆನ್ನತ್ತಿದ್ದ ನ್ಯೂಜಿಲೆಂಡ್​ ತಂಡ ಕೂಡಲ 20 ಓವರ್​​ಗಳಲ್ಲಿ 7ವಿಕೆಟ್​​ನಷ್ಟಕ್ಕೆ 165ರನ್​​ಗಳಿಕೆ ಮಾಡಿದ್ದರಿಂದ ಸೂಪರ್​ ಓವರ್​ ನಡೆಸಬೇಕಾದ ಅನಿವಾರ್ಯತೆ ಎದುರಾಯ್ತು. ಕೊನೆ ಓವರ್​​ನಲ್ಲಿ ನ್ಯೂಜಿಲೆಂಡ್​ ತಂಡದ ಗೆಲುವಿಗೆ 7ರನ್​ಗಳ ಅವಶ್ಯಕತೆ ಇತ್ತು. ಈ ವೇಳೆ ಬೌಲಿಂಗ್​ ಮಾಡಿದ ಶಾರ್ದೂಲ್​ ಠಾಕೂರ್​​​ 4ವಿಕೆಟ್​ ಪಡೆದುಕೊಂಡು ಕೇವಲ 6ರನ್​ ಬಿಟ್ಟುಕೊಟ್ಟರು.

ಥಿಮ್​ ಸೌಥಿ

ಇದಾದ ಬಳಿಕ ಸೂಪರ್​ ಓವರ್​​ನಲ್ಲಿ ಬ್ಯಾಟ್​ ಬೀಸಿದ ನ್ಯೂಜಿಲೆಂಡ್​​ 13ರನ್​ಗಳಿಕೆ ಮಾಡಿ, ಕೊಹ್ಲಿ ಪಡೆಗೆ 14ರನ್​ ಗೆಲುವಿನ ಟಾರ್ಗೆಟ್​​ ನೀಡಿತು.ಇದರ ಬೆನ್ನತ್ತಿದ್ದ ಟೀಂ ಇಂಡಿಯಾ ಕೇವಲ 5 ಎಸೆತಗಳಲ್ಲಿ 16ರನ್​​​​ಗಳಿಕೆ ಮಾಡಿ ಗೆಲುವಿನ ನಗೆ ಬೀರಿತು. ಇನ್ನು ನ್ಯೂಜಿಲೆಂಡ್​ ಪರ ಸೂಪರ್​ ಓವರ್​ ಮಾಡಿದ ಥಿಮ್​ ಸೌಥಿ ಮತ್ತೊಮ್ಮೆ ದುಬಾರಿ ಎಣಿಸಿಕೊಂಡರು.

ಸೌಥಿ ಮಾಡಿದ ಸೂಪರ್​ ಓವರ್​​

  • 2008 ಆಕ್ಲೆಂಡ್​ನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಸೋಲು
  • 2010 ಕ್ರಿಸ್ಟ್​ಚರ್ಚೆನಲ್ಲಿ ಆಸ್ಟ್ರೇಲಿಯಾ ವಿರುದ್ಧ ಗೆಲುವು
  • 2012 ಪಲ್ಲಿಕೆಲ್ಲನಲ್ಲಿ ಶ್ರೀಲಂಕಾ ವಿರುದ್ಧ ಸೋಲು
  • 2012 ಪಲ್ಲಿಕೆಲ್ಲನಲ್ಲಿ ವೆಸ್ಟ್​ ಇಂಡೀಸ್​ ವಿರುದ್ಧ ಸೋಲು
  • 2019ರಲ್ಲಿ ಲಾರ್ಡ್​​ನಲ್ಲಿ ಇಂಗ್ಲೆಂಡ್​ ವಿರುದ್ಧ ಸೋಲು
  • 2019ರಲ್ಲಿ ಆಕ್ಲೆಂಡ್​​​​ ಇಂಗ್ಲೆಂಡ್​ ವಿರುದ್ಧ ಸೋಲು
  • 2020ರಲ್ಲಿ ಹ್ಯಾಮಿಲ್ಟನ್​​​​ ಇಂಡಿಯಾ ವಿರುದ್ಧ ಸೋಲು​​

ABOUT THE AUTHOR

...view details