ಕರ್ನಾಟಕ

karnataka

ETV Bharat / bharat

ದೇಶದಲ್ಲಿ ಒಂದೇ ದಿನ ಸುಮಾರು 10 ಸಾವಿರ ಕೋವಿಡ್​ ಕೇಸ್​ಗಳು ಪತ್ತೆ - ಕೋವಿಡ್​

ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,46,628ಕ್ಕೆ ಹಾಗೂ ಮೃತರ ಸಂಖ್ಯೆ 6,929ಕ್ಕೆ ಏರಿಕೆಯಾಗಿದೆ.

India corona cases
ಭಾರತದಲ್ಲಿ ಕೊರೊನಾ ಪ್ರಕರಣ

By

Published : Jun 7, 2020, 10:05 AM IST

ನವದೆಹಲಿ: ಭಾರತದಲ್ಲಿ ಕೊರೊನಾ ನಾಗಾಲೋಟ ಮುಂದುವರೆದಿದ್ದು, ನಿನ್ನೆ ಒಂದೇ ಸುಮಾರು 10 ಸಾವಿರ ಕೇಸ್​ಗಳು ಪತ್ತೆಯಾಗಿವೆ. ಪ್ರಕರಣಗಳ ಪೈಕಿ ಇದೀಗ ಸ್ಪೇನ್​ ಹಿಂದಿಕ್ಕಿ ವಿಶ್ವದಲ್ಲೇ ಐದನೇ ಸ್ಥಾನಕ್ಕೆ ಭಾರತ ಲಗ್ಗೆ ಹಾಕಿದೆ.

ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 9971 ಸೋಂಕಿತರು ಪತ್ತೆಯಾಗಿದ್ದು, 287 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 2,46,628ಕ್ಕೆ ಹಾಗೂ ಮೃತರ ಸಂಖ್ಯೆ 6,929ಕ್ಕೆ ಏರಿಕೆಯಾಗಿದೆ.

ಸಮಾಧಾನದ ವಿಚಾರವೆಂದರೆ ಒಟ್ಟು ಸೋಂಕಿತರ ಪೈಕಿ ಅರ್ಧದಷ್ಟು ಅಂದರೆ 1,19,293 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಚ್​ ಆಗಿದ್ದಾರೆ. ಉಳಿದಂತೆ 1,20,406 ಕೇಸ್​​ಗಳು ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ABOUT THE AUTHOR

...view details