ಕರ್ನಾಟಕ

karnataka

ETV Bharat / bharat

ನಿನ್ನೆ ದೇಶದಲ್ಲಿ ಅತಿ ಕಡಿಮೆ ಕೋವಿಡ್​ ಕೇಸ್​ ದಾಖಲು... 3.81 ಲಕ್ಷಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ

ನಿನ್ನೆಯವರೆಗೆ 3.81 ಲಕ್ಷಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಕೊರೊನಾ ಲಸಿಕೆ​ ನೀಡಲಾಗಿದೆ. ಲಸಿಕೆ ಪಡೆದವರ ಯಾರ ಮೇಲೂ ವ್ಯತಿರಿಕ್ತ ಅಡ್ಡ ಪರಿಣಾಮ ಬೀರಿಲ್ಲ ಎಂದು ಆರೋಗ್ಯ ಇಲಾಖೆ ಟ್ವೀಟ್​ ಮಾಡಿದೆ.

Total number of corona cases and deaths in India
ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್

By

Published : Jan 19, 2021, 10:28 AM IST

ನವದೆಹಲಿ: ಕೆಲ ತಿಂಗಳ ಹಿಂದೆ ಲಕ್ಷ ಸನಿಹ ಕೊರೊನಾ ಕೇಸ್​ಗಳು ವರದಿಯಾಗುತ್ತಿದ್ದ ಭಾರತದಲ್ಲಿ ಸೋಮವಾರ ಅತಿ ಕಡಿಮೆ ಅಂದರೆ 10,064 ಸೋಂಕಿತರು ಪತ್ತೆಯಾಗಿದ್ದು, 137 ಮಂದಿ ವೈರಸ್​ಗೆ ಬಲಿಯಾಗಿದ್ದಾರೆ.

ದೇಶದಲ್ಲೀಗ ಸೋಂಕಿತರ ಸಂಖ್ಯೆ 1,05,81,837 ಹಾಗೂ ಮೃತರ ಸಂಖ್ಯೆ 1,52,556ಕ್ಕೆ ಏರಿಕೆಯಾಗಿದೆ. ಆದರೆ, ಕೋವಿಡ್​ ಪೀಡಿತ ಇತರ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಸಾವು - ನೋವಿನ ಸಂಖ್ಯೆ ಕಡಿಮೆಯೇ ಇದ್ದು, ನಿತ್ಯ ದೇಶದ ಸೋಂಕಿನ ವಿರುದ್ಧದ ಸಮರ ಯಶಸ್ಸಿನತ್ತ ಸಾಗುತ್ತಿದೆ.

ಜನವರಿ 16ರಿಂದ ದೇಶಾದ್ಯಂತ ಕೊರೊನಾ ಲಸಿಕೆ ವ್ಯಾಕ್ಸಿನೇಷನ್​ ಆರಂಭಗೊಂಡಿದ್ದು, ನಿನ್ನೆಯವರೆಗೆ 3.81 ಲಕ್ಷಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರಿಗೆ ಡೋಸ್​ ನೀಡಲಾಗಿದೆ. ಲಸಿಕೆ ಪಡೆದವರ ಯಾರ ಮೇಲೂ ವ್ಯತಿರಿಕ್ತ ಅಡ್ಡ ಪರಿಣಾಮ ಬೀರಿಲ್ಲವೆಂದು ಆರೋಗ್ಯ ಇಲಾಖೆ ಟ್ವೀಟ್​ ಮಾಡಿದೆ.

ಒಟ್ಟು 1.05 ಕೋಟಿ ಸೋಂಕಿತರ ಪೈಕಿ 1,02,28,753 ಜನರು ಮಹಾಮಾರಿಯಿಂದ ಚೇತರಿಸಿಕೊಂಡಿದ್ದು, 2,00,528 ಕೇಸ್​​ಗಳು ಮಾತ್ರ ಸಕ್ರಿಯವಾಗಿವೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ಕೋವಿಡ್​ ಟೆಸ್ಟಿಂಗ್​ ಅಪ್​ಡೇಟ್ಸ್

ಜನವರಿ​ 19ರ ವರೆಗೆ 18,78,02,827 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 7,09,791 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ABOUT THE AUTHOR

...view details