ನವದೆಹಲಿ: ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತ ಎರಡು ಸ್ಥಾನಗಳು ಕೆಳಗಿಳಿದಿದ್ದು, ಮಂಗಳವಾರ ಬಿಡುಗಡೆಯಾದ ಆನ್ಯೂವಲ್ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ವಿಶ್ಲೇಷಣೆಯಲ್ಲಿ 180 ದೇಶಗಳಲ್ಲಿ 142 ನೇ ಸ್ಥಾನದಲ್ಲಿದೆ.
ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತಕ್ಕೆ 142 ನೇ ಸ್ಥಾನ
ಮಂಗಳವಾರ ಬಿಡುಗಡೆಯಾದ ಆನ್ಯೂವಲ್ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ವಿಶ್ಲೇಷಣೆಯಲ್ಲಿ 180 ದೇಶಗಳಲ್ಲಿ ಭಾರತ 142 ನೇ ಸ್ಥಾನದಲ್ಲಿದೆ.
ಜಾಗತಿಕ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಭಾರತಕ್ಕೆ 142 ನೇ ಸ್ಥಾನ
" ಭಾರತದಲ್ಲಿ 2018ರಲ್ಲಿ 6 ಮಂದಿ ಪತ್ರಕರ್ತರು ಹತ್ಯೆಗೀಡಾಗಿದ್ದು, 2019ರಲ್ಲಿ ಯಾವುದೇ ಪತ್ರಕರ್ತರ ಹತ್ಯೆಯಾಗಿಲ್ಲ. ಈ ಹಿನ್ನೆಲೆ ಮಾಧ್ಯಮಗಳ ಭದ್ರತಾ ಪರಿಸ್ಥಿತಿ ಸುಧಾರಿಸಿದಂತೆ ತೋರುತ್ತಿದೆ ಎಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ 2020 ತಿಳಿಸಿದೆ. ಆದಾಗ್ಯೂ, ಪತ್ರಕರ್ತರ ವಿರುದ್ಧ ನಿರಂತರ ಶೋಷಣೆ ನಡೆಯುತ್ತಿವೆ.
ಪತ್ರಕರ್ತರ ಮೇಲೆ ಪೊಲೀಸ್ ಹಿಂಸಾಚಾರ, ರಾಜಕೀಯ ಕಾರ್ಯಕರ್ತರ ಹೊಂಚು, ಮತ್ತು ಭ್ರಷ್ಟ ಸ್ಥಳೀಯ ಅಧಿಕಾರಿಗಳಿಂದ ಪ್ರತೀಕಾರಗಳು ಸೇರಿದಂತೆ ಇತರೆ ಪತ್ರಿಕಾ ಸ್ವಾತಂತ್ರ್ಯ ಉಲ್ಲಂಘನೆಗಳು ನಡೆಯುತ್ತಿರುತ್ತವೆ" ಎಂದು ಸೂಚ್ಯಂಕ ಹೇಳಿದೆ.