ಕರ್ನಾಟಕ

karnataka

ETV Bharat / bharat

ವಿದೇಶದಲ್ಲಿರುವ ಭಾರತೀಯರ ಕರೆತರಲು ಮುಂದಾದ ಕೇಂದ್ರ, ಮೇ 7ರಿಂದ ಹೊರಡಲಿವೆ ವಿಮಾನಗಳು

ವಿದೇಶಗಳಲ್ಲಿ ಅತಂತ್ರವಾಗಿರುವ ಭಾರತೀಯರನ್ನು ಕರೆತರಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ಸುಮಾರು 64 ವಿಮಾನಗಳನ್ನು ನಿಯೋಜಿಸಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.

air india
ಏರ್ ಇಂಡಿಯಾ

By

Published : May 5, 2020, 1:22 PM IST

Updated : May 5, 2020, 4:05 PM IST

ನವದೆಹಲಿ:ವಿದೇಶಗಳಲ್ಲಿ ಅತಂತ್ರ ಸ್ಥಿತಿಯಲ್ಲಿರುವ ಸುಮಾರು 14,800 ಮಂದಿಯನ್ನು ಕರೆತರಲು ಮೇ 7ರಿಂದ 13ರವರೆಗೆ ವಿಮಾನಯಾನ ಸೇವೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಸರ್ಕಾರದ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.

ಏರ್​ ಇಂಡಿಯಾದ ಏರ್​ ಇಂಡಿಯಾ ಎಕ್ಸ್​ಪ್ರೆಸ್​ ಅಂಗಸಂಸ್ಥೆ ಈ ಕಾರ್ಯನಿರ್ವಹಿಸಲಿದ್ದು, ಸುಮಾರು 12 ರಾಷ್ಟ್ರಗಳಲ್ಲಿರುವ ಭಾರತೀಯರನ್ನು ಕರೆತರಲಿದೆ. ಯುಎಇ, ಇಂಗ್ಲೆಂಡ್​, ಅಮೆರಿಕ, ಕತಾರ್​, ಸೌದಿ ಅರೇಬಿಯಾ, ಸಿಂಗಾಪುರ, ಮಲೇಷಿಯಾ, ಫಿಲಿಪ್ಪಿನ್ಸ್‌ ಬಾಂಗ್ಲಾದೇಶ, ಬಹರೈನ್​, ಕುವೈತ್​​​ ಹಾಗೂ ಓಮನ್​ ರಾಷ್ಟ್ರಗಳ ಭಾರತೀಯರನ್ನು ಕರೆತರುವ ಕಾರ್ಯ ಮೇ 7ರಿಂದ ನಡೆಯಲಿದೆ.

ಭಾರತದಲ್ಲಿ ಲಾಕ್​ಡೌನ್ ಅವಧಿ ಮಾರ್ಚ್​ 25ರಿಂದ ಮೇ 17ರವರೆಗೆ ವಿಸ್ತರಣೆಯಾದ ಹಿನ್ನೆಲೆಯಲ್ಲಿ ಮೊದಲೇ ರದ್ದಾಗಿದ್ದ ವಿಮಾನಯಾನ ಸೇವೆಗಳೂ ಯಥಾಸ್ಥಿತಿ ಕಾಪಾಡಿಕೊಂಡಿದ್ದವು. ಈಗ ಏರ್​ ಇಂಡಿಯಾ ಸುಮಾರು 64 ವಿಮಾನಗಳನ್ನು ವಿವಿಧ ರಾಷ್ಟ್ರಗಳಿಗೆ ಕಳುಹಿಸುತ್ತದೆ ಎಂದು ಹೇಳಲಾಗುತ್ತಿದೆ.

ಯುಎಇಗೆ 10, ಅಮೆರಿಕ ಹಾಗೂ ಇಂಗ್ಲೆಂಡಿಗೆ 7, ಸೌದಿ ಅರೇಬಿಯಾಗೆ 5, ಸಿಂಗಾಪುರಕ್ಕೆ 5, ಕತಾರ್​ಗೆ ಎರಡು ವಿಮಾನಗಳು ದೇಶದ ವಿವಿಧ ಭಾಗಗಳಿಂದ ಹೊರಡಲಿವೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Last Updated : May 5, 2020, 4:05 PM IST

ABOUT THE AUTHOR

...view details