ವಾಷಿಂಗ್ಟನ್: ಜಮ್ಮು - ಕಾಶ್ಮೀರಕ್ಕೆ ವಿಶೇಷ ಸ್ಥಾನ ಮಾನ ನೀಡಲಾಗಿದ್ದ ಆರ್ಟಿಕಲ್ 370 ಇದೀಗ ಕೇಂದ್ರ ಸರ್ಕಾರದಿಂದ ರದ್ದುಗೊಂಡಿದ್ದು, ಇದೇ ವಿಷಯವನ್ನಿಟ್ಟುಕೊಂಡು ಪಾಕ್ ಭಾರತದೊಂದಿಗಿನ ರಾಜತಾಂತ್ರಿಕ ಸಂಬಂಧಗಳಿಗೆ ನಿರ್ಬಂಧ ಹೇರಲು ಮುಂದಾಗಿದೆ.
ಈ ನಡುವೆ ಅಮೆರಿಕ ಕೂಡ ತನ್ನ ಹೇಳಿಕೆ ರಿಲೀಸ್ ಮಾಡಿದ್ದು, ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆಗೆದುಹಾಕುವ ಆರ್ಟಿಕಲ್ ರದ್ದು ಮಾಡುವ ಕುರಿತಂತೆ ಭಾರತ ನಮಗೆ ಯಾವುದೇ ರೀತಿಯ ಮಾಹಿತಿ ನೀಡಿಲ್ಲ ಎಂದು ತಿಳಿಸಿದೆ.
ಇದಕ್ಕೆ ಸಂಬಂಧಿಸಿದಂತೆ ಪ್ರಕಟಣೆ ಹೊರಡಿಸಿರುವ ಯುಎಸ್, ಭಾರತ ಸರ್ಕಾರ ಆರ್ಟಿಕಲ್ 370 ತೆಗೆದುಹಾಕುವ ಸಂಬಂಧ ನಮ್ಮಿಂದ ಯಾವುದೇ ರೀತಿಯ ಸಲಹೆ ಪಡೆದುಕೊಂಡಿಲ್ಲ ಎಂದು ತಿಳಿಸಿದೆ. ಆದರೆ ಅಲ್ಲಿಕೆ ಪತ್ರಿಕೆಗಳು ಇದರ ಬಗ್ಗೆ ಅಮೆರಿಕ ಭಾರತ ಮಾಹಿತಿ ನೀಡಿತ್ತು ಎಂದು ಪ್ರಕಟಿಸಿದ್ದವು. ವರದಿಗಳಲ್ಲಿ ಪ್ರಕಟವಾದ ಮಾಹಿತಿ ಪ್ರಕಾರ ಆಗಸ್ಟ್ 1ರಂದೇ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಈ ಬಗ್ಗೆ ಯುಎಸ್ಗೆ ಮಾಹಿತಿ ನೀಡಿದ್ದರು ಎಂದು ತಿಳಿಸಿದ್ದವು.
ಇನ್ನು ಇದೇ ವಿಷಯವನ್ನಿಟ್ಟುಕೊಂಡು ಪಾಕ್ ಇಂದಿನ ರಾಷ್ಟ್ರೀಯ ಸುರಕ್ಷಾ ಸಮಿತಿ ಸಭೆಯಲ್ಲಿ ಕೆಲ ಮಹತ್ವದ ನಿರ್ಧಾರ ಕೈಗೊಂಡಿದ್ದು, ಭಾರತದ ಜತೆಗಿನ ತನ್ನ ದ್ವಿಪಕ್ಷೀಯ ನಿರ್ಧಾರ ಕಡಿತಗೊಳಿಸಲು ಮುಂದಾಗಿದೆ.