ಹೈದರಾಬಾದ್: ಹೊಸದಾಗಿ 80.427 ಪ್ರಕರಣಗಳು ದಾಖಲಾಗುವ ಮೂಲಕ ದೇಶದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಬುಧವಾರ 62 ಲಕ್ಷ ಆಗಿದೆ. ಜೊತೆಗೆ, ಗುಣಮುಖರಾದವರ ಸಂಖ್ಯೆ 51,87,825 ಕ್ಕೆ ಏರಿಯಾಗಿದ್ದು, ಒಟ್ಟು 83.33 ಶೇ ರೋಗಿಗಳು ಕೋವಿಡ್ ಮುಕ್ತರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ವರದಿ ತಿಳಿಸಿದೆ.
ದೇಶದಲ್ಲಿ 62 ಲಕ್ಷಕ್ಕೇರಿದ ಕೋವಿಡ್ ಪ್ರಕರಣ : ಶೇ 83.33 ಜನರು ಗುಣಮುಖ
ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 62 ಲಕ್ಷಕ್ಕೆ ಏರಿಕೆಯಾಗಿದ್ದು, ಮಂಗಳವಾರ 10, 86, 688 ಸ್ಯಾಂಪಲ್ಸ್ ಪರೀಕ್ಷಿಸಲಾಗಿದೆ. ಒಟ್ಟು ಗುಣಮುಖರಾದವರ ಸಂಖ್ಯೆ ಶೇ. 80 ದಾಟಿದೆ.
ಭಾರತದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ
ಬುಧವಾರ ಒಟ್ಟು ಕೋವಿಡ್ ಪ್ರಕರಣಗಳ ಸಂಖ್ಯೆ 62,25,763 ಕ್ಕೆ ಏರಿದರೆ, ಸಾವಿನ ಸಂಖ್ಯೆ 97,497 ಕ್ಕೆ ಏರಿದೆ. ಮಂಗಳವಾರ ಒಟ್ಟು 1,179 ಜನರು ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ಸಕ್ರಿಯ ಪ್ರಕರಣಗಳ ಪ್ರಮಾಣ 15.11 ಮತ್ತು ಸಾವಿನ ಪ್ರಮಾಣ 1.57 ಕ್ಕೆ ಏರಿಕೆಯಾಗಿದೆ.
ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಪ್ರಕಾರ, ಸೆಪ್ಟೆಂಬರ್ 29 ರವರೆಗೆ ಒಟ್ಟು 7,41, 96,729 ಕೊರೊನಾ ಪರೀಕ್ಷೆಗಳನ್ನು ನಡೆಸಲಾಗಿದೆ, ಮಂಗಳವಾರ 10, 86, 688 ಜನರ ಮಾದರಿಗಳನ್ನು ಪರೀಕ್ಷಿಸಲಾಗಿದೆ.