ಢಾಕಾ/ಬಾಂಗ್ಲಾದೇಶ: ರೋಹಿಂಗ್ಯಾ ಬಿಕ್ಕಟ್ಟು, ನದಿಗಳ ನೀರು ಹಂಚಿಕೆ, ಇಂಧನ, ಸಂಪರ್ಕ, ದ್ವಿಪಕ್ಷೀಯ ವ್ಯಾಪಾರ ಮತ್ತು ಗಡಿಗೆ ಸಂಬಂಧಿಸಿದ ವಿಷಯಗಳ ಕುರಿತು ಬಾಂಗ್ಲಾದೇಶ-ಭಾರತ ಜಂಟಿ ಸಮಾಲೋಚನಾ ಆಯೋಗದ (ಜೆಸಿಸಿ)ದ ಸಭೆ ಮಂಗಳವಾರ ನಡೆಯಲಿದೆ ಎಂದು ಬಾಂಗ್ಲಾದೇಶ ಮಾಧ್ಯಮ ವರದಿ ಮಾಡಿದೆ.
ನೀರು ಹಂಚಿಕೆ ಹಾಗೂ ರೋಹಿಂಗ್ಯಾ ಬಿಕ್ಕಟ್ಟು: ಇಂದು ಭಾರತ-ಬಾಂಗ್ಲಾದೇಶ ಸಭೆ - ಜೆಸಿಸಿ ಸಭೆ
ರೋಹಿಂಗ್ಯಾ ಬಿಕ್ಕಟ್ಟು, ನದಿಗಳ ನೀರು ಹಂಚಿಕೆ, ಇಂಧನ, ಸಂಪರ್ಕ, ದ್ವಿಪಕ್ಷೀಯ ವ್ಯಾಪಾರ ಮತ್ತು ಗಡಿಗೆ ಸಂಬಂಧಿಸಿದ ವಿಷಯಗಳ ಕುರಿತು ಬಾಂಗ್ಲಾದೇಶ-ಭಾರತ ಜಂಟಿ ಸಮಾಲೋಚನಾ ಆಯೋಗದ (ಜೆಸಿಸಿ) ಸಭೆ ಇಂದು ನಡೆಯಲಿದೆ.
ರೋಹಿಂಗ್ಯಾ ಬಿಕ್ಕಟ್ಟು: ಭಾರತ, ಬಾಂಗ್ಲಾದೇಶ ಇಂದು ಜೆಸಿಸಿ ಸಭೆ
ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಮತ್ತು ಬಾಂಗ್ಲಾದೇಶ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಮೋನು, ಮುಹುರಿ, ಖೋವಾಯಿ, ಗೋಮತಿ, ಧರ್ಲಾ ಮತ್ತು ದುಧ್‌ಕುಮಾರ್ ಎಂಬ 6 ನದಿಗಳ ನೀರು ಹಂಚಿಕೆ ಒಪ್ಪಂದದ ಕರಡು ಕುರಿತು ವಿದೇಶಾಂಗ ಸಚಿವರಿಬ್ಬರು ಚರ್ಚಿಸಬಹುದು ಎನ್ನಲಾಗಿದೆ.