ಕರ್ನಾಟಕ

karnataka

ETV Bharat / bharat

’ಕಾಶ್ಮೀರದ ಸಮಸ್ಯೆಗಳಿಗೆ ರಾಯಭಾರಿ ಆಗ್ತೀನಿ’: ಕೈ ಸುಟ್ಟುಕೊಂಡರೂ ಮೊಂಡಾಟ ಬಿಡದ ಇಮ್ರಾನ್​ ಖಾನ್ - ​​​ಶ್ರೀನಗರ

ಕಾಶ್ಮೀರಿಗಳ ಸಮಸ್ಯೆಗಳನ್ನ ಪಾಕಿಸ್ತಾನ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತೆ. ಅವರ ರಾಯಭಾರಿಯಾಗಿ ಕೆಲಸ ಮಾಡುತ್ತೇನೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್​ಖಾನ್ ಹೇಳಿದ್ದಾರೆ.

Imran Khan
ಪಾಕಿಸ್ತಾನ ಪ್ರಧಾನಿ ಇಮ್ರಾನ್​ಖಾನ್

By

Published : Jun 27, 2020, 8:20 AM IST

​​​ಶ್ರೀನಗರ: ಜಮ್ಮು ಕಾಶ್ಮೀರವನ್ನ ಪ್ರತ್ಯೇಕಗೊಳಿಸಿರುವ ಭಾರತ ಸರ್ಕಾರದ ಕ್ರಮವನ್ನ ಅರಗಿಸಿಕೊಳ್ಳಲು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಷಯ ಪ್ರಸ್ತಾಪಿಸಿ ಮುಖಭಂಗಕ್ಕೊಳಗಾಗಿರುವ ಪಾಕಿಸ್ತಾನ ತನ್ನ ಹಳೆ ಚಾಳಿಯನ್ನ ಮಾತ್ರ ಬಿಟ್ಟಿಲ್ಲ.

ಈ ಬಗ್ಗೆ ಮಾತನಾಡಿರುವ ಪಾಕಿಸ್ತಾನ ಪ್ರಧಾನಿ ಇಮ್ರಾನ್​ಖಾನ್​, ಕಾಶ್ಮೀರಿಗಳ ಸಮಸ್ಯೆಗಳನ್ನ ಪಾಕಿಸ್ತಾನ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತೆ. ಅವರ ರಾಯಭಾರಿಯಾಗಿ ಕೆಲಸ ಮಾಡುತ್ತೇನೆ ಎಂದು ಘೋಷಣೆ ಮಾಡಿದ್ದಾರೆ. ಆಗಸ್ಟ್​​ 5 ಜಮ್ಮು ಕಾಶ್ಮೀರಕ್ಕೆ ಇದ್ದ ವಿಶೇಷ ಸ್ಥಾನಮಾನವನ್ನ ರದ್ದುಗೊಳಿಸಿ ಕೇಂದ್ರ ಸರ್ಕಾರ, ಕೇಂದ್ರಾಡಳಿತ ಪ್ರದೇಶಗಳನ್ನಾಗಿ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ 2020 ಆಗಸ್ಟ್​ 5 ಕ್ಕೆ ಈ ಐತಿಹಾಸಿಕ ತೀರ್ಮಾನ ಕೈಗೊಂಡು ಒಂದು ವರ್ಷವಾಗಲಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ತನ್ನ ನಿರ್ಣಯದಲ್ಲಿ ಈಗ ಸಫಲವಾಗಿರಬಹುದು, ಆದರೆ ಪಾಕಿಸ್ತಾನ ಭಾರತ ಅದರ ಯಶಸ್ಸನ್ನು ಬಹಳ ದಿನಗಳ ಕಾಲ ಇಟ್ಟುಕೊಳ್ಳಲು ಬಿಡುವುದಿಲ್ಲ ಎಂದು ಪಾಕಿಸ್ತಾನ ಪ್ರಧಾನಿ ಹೇಳಿದ್ದಾರೆ.

ನಿನ್ನೆ ನಡೆದ ಪಾಕಿಸ್ತಾನದ ರಾಜ್ಯಗಳ ಪ್ರಮುಖರ ಸಭೆಯಲ್ಲಿ ಜಮ್ಮು- ಕಾಶ್ಮೀರದ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಈ ಹೇಳಿಕೆ ನೀಡಿದ್ದಾರೆ.

ABOUT THE AUTHOR

...view details