ಹೈದರಾಬಾದ್:ಬೋರ್ಡ್ ಪರೀಕ್ಷೆಯ ಫಲಿತಾಂಶಕ್ಕಿಂತಲೂ ಜೀವನ ದೊಡ್ಡದು. ನಾನು 12ನೇ ತರಗತಿ ಪರೀಕ್ಷೆಯ ರಸಾಯನಶಾಸ್ತ್ರ ವಿಷಯದಲ್ಲಿ 100ಕ್ಕೆ ಕೇವಲ 24 ಅಂಕ ಗಳಿಸಿದ್ದೆ. ನಾನು ತೆಗೆದುಕೊಂಡಿರುವ ಅಂಕ ಜೀವನದಲ್ಲಿ ಏನು ಮಾಡ್ಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಿಲ್ಲ ಎಂದು ಐಎಎಸ್ ಅಧಿಕಾರಿ ನಿತಿನ್ ಸಾಂಗ್ವಾನ್ ಟ್ವೀಟ್ ಮಾಡಿದ್ದಾರೆ.
ಒಂದೇ ವಾರದಲ್ಲಿ ದ್ವಿತೀಯ ಪಿಯು ಸೇರಿದಂತೆ 10ನೇ ತರಗತಿಯ ಸಿಬಿಎಸ್ಇ ಹಾಗೂ ವಿವಿಧ ರಾಜ್ಯದ ಬೋರ್ಡ್ ಪರೀಕ್ಷಾ ಫಲಿತಾಂಶ ಪ್ರಕಟಗೊಂಡಿದೆ. ಪರೀಕ್ಷೆಯಲ್ಲಿ ಫೇಲ್ ಆಗಿ, ಮನನೊಂದ ಕೆಲ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗಿ ಬದುಕು ಮುಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತನ್ನ 12 ನೇ ತರಗತಿಯ ಪರೀಕ್ಷಾ ಅಂಕಗಳಿಕೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿ ಧೈರ್ಯ ತುಂಬಿದ್ದಾರೆ.