ಕರ್ನಾಟಕ

karnataka

ETV Bharat / bharat

'ನಾನು ಮಾದಕ ವ್ಯಸನಿಯಾಗಿದ್ದೆ'... ಕಂಗನಾ ರಣಾವತ್​​ ಹಳೆ ವಿಡಿಯೋ ಬಹಿರಂಗ! - ಬಾಲಿವುಡ್​ ನಟಿ ಕಂಗನಾ ರಣಾವತ್​

ಬಾಲಿವುಡ್​ ನಟಿ ಕಂಗನಾ ರಣಾವತ್​​ ಹಾಗೂ ಮಹಾರಾಷ್ಟ್ರ ಆಡಳಿತರೂಢ ಪಕ್ಷದ ನಡುವಿನ ವಾಕ್ಸಮರ ಮುಂದುವರೆದಿದೆ. ಈ ಮಧ್ಯೆ ಕಂಗನಾ ಅವರ ಹಳೇ ವಿಡಿಯೋವೊಂದು ವೈರಲ್​ ಆಗಿದೆ.

Kangana Ranaut
Kangana Ranaut

By

Published : Sep 11, 2020, 3:25 PM IST

ಮುಂಬೈ:ಬಾಲಿವುಡ್​ ನಟಿ ಕಂಗನಾ ರಣಾವತ್​ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ. ಈ ಮಧ್ಯೆ ಕಂಗನಾ ಅವರನ್ನ ಡ್ರಗ್ಸ್ ಗೆ ಸಂಬಂಧಿಸಿದಂತೆ​ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಗೃಹ ಸಚಿವ ಅನಿಲ್​ ದೇಶ್​​ಮುಖ್​ ಹೇಳಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ನಟಿ ಕಂಗನಾ, ನನಗೆ ಡ್ರಗ್ಸ್ ಪರೀಕ್ಷೆ ನಡೆಸಿ, ಫೋನ್ ಕರೆಗಳನ್ನು ಪರಿಶೀಲಿಸಿ, ಒಂದು ವೇಳೆ ನಾನು ಡ್ರಗ್ಸ್​ ತೆಗೆದುಕೊಂಡಿರುವುದು ಸಾಬೀತಾದರೆ ಶಾಶ್ವತವಾಗಿ ಮುಂಬೈ ಬಿಟ್ಟು ಹೋಗುವೆ ಎಂದು ಮಹಾರಾಷ್ಟ್ರ ಗೃಹ ಸಚಿವ ಅನಿಲ್​ ದೇಶ್​​ಮುಖ್​​ ಅವರಿಗೆ ಟಾಂಗ್​ ನೀಡಿದ್ದಾರೆ.

ಕಂಗನಾ ರಣಾವತ್​​ ವಿಡಿಯೋ ಬಹಿರಂಗ

ನಾನು ಮಾದಕ ವ್ಯಸನಿಯಾಗಿದ್ದೆ ಎಂದು ಹೇಳಿರುವ ಕಂಗನಾ ಅವರ ವಿಡಿಯೋವೊಂದು ಈಗ ಸದ್ದು ಮಾಡುತ್ತಿದೆ. ಮಾರ್ಚ್​​​ 2020ರಲ್ಲಿ ಕಂಗನಾ ಸೋಷಿಯಲ್​ ಮೀಡಿಯಾದಲ್ಲಿ ಈ ಹಳೆ ವಿಡಿಯೋ ಶೇರ್​​ ಆಗಿತ್ತು. ಏನಾದ್ರೂ ಸಾಧನೆ ಮಾಡಬೇಕೆಂದು 16ನೇ ವಯಸ್ಸಿನಲ್ಲೇ ತಾನು ಮನೆಯಿಂದ ಹೊರಬಂದಿರುವ ಬಗ್ಗೆ ಹೇಳಿಕೊಂಡಿದ್ದಾರೆ.

ಅಂತಿಮವಾಗಿ ಒಂದೆರಡು ವರ್ಷಗಳಲ್ಲಿ ಬಾಲಿವುಡ್​​ ಸ್ಟಾರ್​​ ಆದೆ. ಈ ವೇಳೆ ಕೆಲ ದುಷ್ಟ ಜನರ ಸಂಪರ್ಕದಿಂದಾಗಿ ಮಾದಕ ವ್ಯಸನಿಯಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದರ ಜತೆಗೆ ಸುಶಾಂತ್​ ಸಿಂಗ್​ ರಜಪೂತ್​​ ಅವರ ಸಾವಿನ ತನಿಖೆಯಲ್ಲಿ ಡ್ರಗ್ಸ್​​ ವಿಚಾರ ಹೊರಬಂದಿದ್ದು, ನಟರಾದ ರಣವೀರ್​ ಸಿಂಗ್​, ರಣಬೀರ್​ ಕಪೂರ್​, ವಿಕ್ಕಿ ಕೌಶಲ್​ ಮತ್ತು ನಿರ್ದೇಶಕ ಅಯಾನ್​ ಮುಖರ್ಜಿ ಅವರನ್ನ ತಪಾಸಣೆಗೊಳಪಡಿಸಿ ಎಂದು ಕಂಗನಾ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ABOUT THE AUTHOR

...view details