ನವದೆಹಲಿ: ದ್ವೇಷವೆಂಬುದು ಹೇಡಿತನ ಎಂದಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ನನ್ನನ್ನು ದ್ವೇಷಿಸುವವರನ್ನೂ ಪ್ರೀತಿಸುತ್ತೇನೆ ಎಂದು ಹೇಳಿದ್ದಾರೆ.
ಟ್ವಿಟ್ಟರ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾಹುಲ್, ದ್ವೇಷವೆಂಬುದು ಹೇಡಿತನ. ಇಡೀ ವಿಶ್ವವೇ ನನ್ನನ್ನು ದ್ವೇಷಿಸಿದರೂ ನಾನು ಲೆಕ್ಕಿಸುವುದಿಲ್ಲ. ಏಕೆಂದರೆ ನಾನು ಹೇಡಿ ಅಲ್ಲ. ನಾನು ಎಲ್ಲರನ್ನೂ ಪ್ರೀತಿಸುತ್ತೇನೆ. ಯಾರು ನನ್ನನ್ನು ದ್ವೇಷಿಸುತ್ತಾರೋ ಅಂತಹವರನ್ನೂ ಪ್ರೀತಿಸುತ್ತೇನೆ ಎಂದಿದ್ದಾರೆ.