ಹೈದರಾಬಾದ್: ಹೈದರಾಬಾದ್, ಸೈಬರಾಬಾದ್ ಮತ್ತು ರಾಚಕೊಂಡ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸಾರ್ವಜನಿಕ ಸುರಕ್ಷತೆಯ ಹಿತದೃಷ್ಟಿಯಿಂದ ಎಲ್ಲಾ ಫ್ಲೈಓವರ್ ಮತ್ತು ಕೆಲವು ರಸ್ತೆಗಳನ್ನು ಮುಚ್ಚುವುದಾಗಿ ಇಲ್ಲಿನ ಪೊಲೀಸರು ತಿಳಿಸಿದ್ದಾರೆ.
ಮಧ್ಯರಾತ್ರಿವರೆಗೆ ಮದ್ಯ ಮಾರಾಟ:
ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಅಬಕಾರಿ ಇಲಾಖೆಗೆ ಸರ್ಕಾರ ಅನುಮತಿ ನೀಡಿದೆ. ಹೊಸ ವರ್ಷದ ಕಾರ್ಯಕ್ರಮಗಳು ಮತ್ತು ಮನೆಯೊಳಗೇ ಮಾಡಿಕೊಳ್ಳುವ ಪಾರ್ಟಿಗಳು ಹಾಗೂ ಬಾರ್ಗಳಲ್ಲಿ ಬೆಳಿಗ್ಗೆ 1 ಗಂಟೆಯವರೆಗೆ ಮದ್ಯ ಪೂರೈಸಲು ಅನುಮತಿ ನೀಡಲಾಗಿದೆ. ಕುಡಿದು ರಸ್ತೆಗಳಲ್ಲಿ ವಾಹನ ಚಲಾಯಿಸುವುದರ ಬಗ್ಗೆ ಎಚ್ಚರವಹಿಸಲು ಸೂಚಿಸಲಾಗಿದೆ.
'ಕುಡಿದು ವಾಹನ ಚಲಾಯಿಸಿದ್ರೆ ಸ್ಪೆಷಲ್ ಡ್ರೈವ್‌ನಲ್ಲಿ ಮೀಟ್ ಆಗೋಣ'
ಈ ಸಂಬಂಧ ಟ್ವೀಟ್ ಮಾಡಿರುವ ಪೊಲೀಸ್ ಇಲಾಖೆ, ಇಂದು ರಾತ್ರಿ ನಿಮ್ಮ ಯೋಜನೆಗಳು ಯಾವುವು?, ಕುಡಿದು ವಾಹನ ಚಲಾಯಿಸುವಾಗ ಸ್ಪೆಷಲ್ ಡ್ರೈವ್‌ನಲ್ಲಿ ನಿಮ್ಮನ್ನು ಭೇಟಿಯಾಗುತ್ತೇವೆ ಎಂದಿದೆ.
ಇಲ್ಲೆಲ್ಲಾ ಸಂಚಾರಕ್ಕೆ ನಿರ್ಬಂಧ:
ಹುಸೇನ್ ಸಾಗರ ಸರೋವರದ ಸುತ್ತ, ಎನ್‌ಟಿಆರ್ ಮಾರ್ಗ, ನೆಕ್ಲೆಸ್ ರಸ್ತೆ ಮತ್ತು ಟ್ಯಾಂಕ್ ಬಂಡ್ ರಸ್ತೆಯಲ್ಲಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ಬೇಗಂಪೇಟ್ ಫ್ಲೈಓವರ್ ಹೊರತುಪಡಿಸಿ ನಗರದ ಎಲ್ಲಾ ಫ್ಲೈಓವರ್‌ಗಳನ್ನು ಡಿಸೆಂಬರ್ 31 ಮತ್ತು ಜನವರಿ 1 ರವರೆಗೆ ರಾತ್ರಿ ವೇಳೆ ಮುಚ್ಚಲಾಗುವುದು ಎಂದು ಇಲಾಖೆ ಸ್ಪಷ್ಟಪಡಿಸಿದೆ.