ಕರ್ನಾಟಕ

karnataka

ETV Bharat / bharat

ಕೋವಿಡ್ - 19: ಭಾರತದ ಅಡಿಪಾಯವಾಗಿರುವ ಪೌಷ್ಠಿಕಾಂಶ ಯೋಜನೆಯನ್ನು ಹೇಗೆ ದುರ್ಬಲಗೊಳಿಸಿದೆ..? - ಪೌಷ್ಠಿಕಾಂಶ ಯೋಜನೆ

ಲಾಕ್‌ಡೌನ್ ಸಮಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಪೌಷ್ಠಿಕಾಂಶದ ಸೇವೆಗಳನ್ನು ಒದಗಿಸಲಾಯಿತು, ಮತ್ತು ಆದರೆ ಇದು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕಾಗಿದೆ.

nutrition programme weaker
ಕೋವಿಡ್ - 19

By

Published : Jul 2, 2020, 7:56 PM IST

ಹೈದರಾಬಾದ್:ಭಾರತ ಎರಡನೆ ಹಂತದ ಲಾಕ್‌ಡೌನ್ ಸಡಿಲಿಕೆಯನ್ನು ಪ್ರವೇಶಿಸಿದೆ, ಆದರೆ ಕೋವಿಡ್ ಸಾಂಕ್ರಾಮಿಕವು ಪೌಷ್ಠಿಕಾಂಶದ ಮೇಲೆ ಪರಿಣಾಮ ಬೀರುವುದನ್ನು ಮುಂದಿನ ವರ್ಷಗಳಲ್ಲಿ ಅನುಭವಿಸಲಿದೆ.

ಲಾಕ್‌ಡೌನ್ ಸಮಯದಲ್ಲಿ (ಮಾರ್ಚ್ 24 ರಿಂದ ಮೇ 31 ರವರೆಗೆ) ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ಮೂಲಕ ಪೌಷ್ಠಿಕಾಂಶದ ಸೇವೆಗಳನ್ನು ಒದಗಿಸಲಾಯಿತು, ಮತ್ತು ಆದರೆ ಇದು ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳಬೇಕಾಗಿದೆ. ಸಾಕಷ್ಟು ಪೌಷ್ಠಿಕಾಂಶದ ಕೊರತೆಯಿಂದಾಗಿ ಕೆಲವು ವಲಯಗಳಾದ ಗರ್ಭಿಣಿಯರು ಮತ್ತು 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ. ಈ ವಯಸ್ಸಿನ ಅಂತರವು ಅರಿವಿನ ದೌರ್ಬಲ್ಯ, ಕಳಪೆ ಆರೋಗ್ಯ ಮತ್ತು ರಕ್ತಹೀನತೆಯಂತಹ ಜೀವನ ಪರ್ಯಂತ ಸವಾಲುಗಳಿಗೆ ಕಾರಣವಾಗಬಹುದು.

ಮಕ್ಕಳ ಬಾಲ್ಯದ ಬೆಳವಣಿಗೆಗೆ ಮೂಲ ಶಿಕ್ಷಣ, ಆರೋಗ್ಯ ಮತ್ತು ಪೌಷ್ಠಿಕಾಂಶ ಸೇವೆಗಳನ್ನು ಒದಗಿಸುವ ಗುರಿಯನ್ನು ಭಾರತ ಸರ್ಕಾರದ ಸಮಗ್ರ ಮಕ್ಕಳ ಅಭಿವೃದ್ಧಿ ಸೇವೆಗಳು (ಐಸಿಡಿಎಸ್) ಹೊಂದಿದೆ. ಈ ಯೋಜನೆಯನ್ನು ಅಂಗನವಾಡಿ ಕೇಂದ್ರಗಳ ಸಂಪರ್ಕ ವ್ಯವಸ್ಥೆಯ ಮೂಲಕ ತಲುಪಿಸಲಾಗುತ್ತದೆ, ಅದು ಪ್ರತಿ ಹಳ್ಳಿಯಲ್ಲಿ ಲಭ್ಯವಿದೆ ಮತ್ತು ಅಂಗನವಾಡಿ ಕಾರ್ಯಕರ್ತೆಯರು (AWWs) ಮತ್ತು ಸಹಾಯಕರು (AWHs). ನಡೆಸುತ್ತಾರೆ. 2019 ರ ಜೂನ್ ವೇಳೆಗೆ ಭಾರತದಲ್ಲಿ 13.78 ಲಕ್ಷ ಅಂಗನವಾಡಿ ಕೇಂದ್ರಗಳು, 13.21 ಲಕ್ಷ AWWs ಮತ್ತು 11.82 ಲಕ್ಷ AWHs ಸಂಖ್ಯೆಇತ್ತು.

ಅದರ ಕಾರ್ಯನಿರ್ವಹಣೆಯ 45 ವರ್ಷಗಳಲ್ಲಿ, ಈ ಯೋಜನೆಯು ಭಾರತದ ಪೌಷ್ಠಿಕಾಂಶದ ಪ್ರಯತ್ನಗಳ ಬೆನ್ನೆಲುಬಾಗಿ ಮಾರ್ಪಟ್ಟಿದೆ. ನೀತಿ-ನಿರೂಪಣೆ ಸಂಶೋಧನೆ ಉತ್ತರದಾಯಿತ್ತ ಉಪಕ್ರಮದಲ್ಲಿ ಭಾಗಿಯಾಗಿರುವ ನಾವು ಸುಮಾರು ಒಂದು ದಶಕದಿಂದ ಯೋಜನೆಯ ಪ್ರಗತಿಯನ್ನು ಪತ್ತೆ ಹಚ್ಚಿದ್ದೇವೆ ಮತ್ತು ಸಾಂಕ್ರಾಮಿಕ ರೋಗಕ್ಕೂ ಮುಂಚೆಯೇ ಹಲವಾರು ಕಾಳಜಿಯ ಕ್ರಮಗಳ ಅಗತ್ಯ ಇದೆ ಎಂದು ನಾವು ಪರಿಭಾಸಿದ್ದೆವು. ಕೋವಿಡ್ ಬಿಕ್ಕಟ್ಟು ಇವುಗಳನ್ನು ಇನ್ನಷ್ಟು ಘಾಸಿಗೊಳಿಸಿದೆ.

ಮೊದಲ ಸವಾಲು ಯೋಜನೆಯ ಅಸಮರ್ಪಕ ಹಂಚಿಕೆಗೆ ಸಂಬಂಧಿಸಿದ್ದಾಗಿದೆ. ಐಸಿಡಿಎಸ್ ಒಂದು ಸಾರ್ವತ್ರಿಕ ಯೋಜನೆಯಾಗಿದ್ದು, ಇದರರ್ಥ ಎಲ್ಲಾ ಗರ್ಭಿಣಿಯರು, ಹಾಲುಣಿಸುವ ತಾಯಂದಿರು ಮತ್ತು ಮಕ್ಕಳು (6 ತಿಂಗಳು - 6 ವರ್ಷಗಳು) ಅವರಿಗೆ ಅಗತ್ಯವಿದ್ದರೆ ಯೋಜನೆಯ ಉಪಯೋಗ ಪಡೆಯಲು ಅರ್ಹರಾಗಿರುತ್ತಾರೆ. ಜೂನ್ 2019 ರ ವೇಳೆಗೆ, 8.36 ಕೋಟಿ ಜನರು ಐಸಿಡಿಎಸ್‌ನಿಂದ ಸಿದ್ದಪಡಿಸಿದ ಬಿಸಿ ಊಟ (ಎಚ್‌ಸಿಎಂ) ಅಥವಾ ಪಡಿತರ ಸಾಮಾಗ್ರಿ (ಸಿದ್ದಪಡಿಸಿಲ್ಲದ ದಾಲ್ ನಂತಹ ಪಡಿತರ) ರೂಪದಲ್ಲಿ ಪೂರಕ ಪೌಷ್ಠಿಕಾಂಶವನ್ನು ಪಡೆದರು.

ಈ ಅಂಕಿ-ಅಂಶ ಹೆಚ್ಚಿನ ಪ್ರಮಾಣದ ಜನಸಂಖ್ಯೆಯನ್ನು ಬಿಂಬಿಸುತ್ತದೆಯಾದರೂ , ಪೂರಕ ಪೌಷ್ಠಿಕಾಂಶವನ್ನು ಪಡೆಯಬೇಕಾದ ಮಕ್ಕಳ ಸಂಖ್ಯೆಯನ್ನು (6 ತಿಂಗಳುಗಳು - 6 ವರ್ಷಗಳು) ಪಡಿತರ ಪಡೆದವರ ಸಂಖ್ಯೆಗೆ ಹೋಲಿಸಿದರೆ, ದೊಡ್ಡ ಅಂತರ ಕಾಣುತ್ತದೆ. 2019 ರಲ್ಲಿ, 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ, ಅರ್ಧಕ್ಕಿಂತ ಕಡಿಮೆ ಅರ್ಹ ಮಕ್ಕಳು ಐಸಿಡಿಎಸ್ ಮೂಲಕ ಪೂರಕ ಪೋಷಣೆಯನ್ನು ಪಡೆದಿದ್ದರು.

ಪಡಿತರವನ್ನು ಸ್ವೀಕರಿಸಿದಲ್ಲಿ, ಪೂರಕ ಪೌಷ್ಠಿಕಾಂಶವನ್ನು ಜನರು ಸೇವಿಸುತ್ತಾರೆ ಎಂದು ಸಂಬಂಧಿತ ಅರಿವಿನ ಮೂಲಕ ಖಾತರಿಪಡಿಸಿಕಳ್ಳಲಾಗಿದೆ. ಉದಾಹರಣೆಗೆ, ಮನೆಗೆ ಕೊಂಡೊಯ್ಯುವ ಪಡಿತರವನ್ನು ಹೆಚ್ಚಾಗಿ ಪೂರ್ತಿ ಕುಟುಂಬದೊಂದಿಗೆ ಹಂಚಿಕೊಳ್ಳಲಾಗುತ್ತದೆ, ಮುಖ್ಯವಾಗಿ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು. ಹೀಗಾಗಿ ಯೋಜನೆಯ ಮೂಲೋದ್ದೇಶದ ಪ್ರಕಾರ ಗರ್ಬಿಣಿಯರು ಮತ್ತು ಹಾಲುಣಿಸುವ ತಾಯಂದಿರು ಪೂರಕ ಪೌಷ್ಠಿಕಾಂಶ ಸ್ವೀಕರಿಸುವುದಿಲ್ಲ ಎಂದು ಇದು ಸೂಚಿಸುತ್ತದೆ.

ಕೊರೊನಾ ವೈರಸ್ ಹರಡುವಿಕೆಯನ್ನು ನಿಯಂತ್ರಿಸಲು ಜಾರಿಗೆ ತಂದಿರುವ ಲಾಕ್ ಡೌನ್ ನಂತಹ ಕ್ರಮಗಳಿಂದಾಗಿ ಅಂಗನವಾಡಿ ಕೇಂದ್ರಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ. ಹೆಚ್ಚಿನ ಸಂಖ್ಯೆಯ ವಲಸೆ ಕಾರ್ಮಿಕರು ಮನೆಗೆ ತೆರಳುವುದರಿಂದ ಈ ಕುಟುಂಬಗಳಿಗೆ ಮುಂದಿನ ದಿನಗಳಲ್ಲಿ ಪೋಷಣೆ ಮತ್ತು ಆರಂಭಿಕ ಶಿಕ್ಷಣ ಸೇವೆಗಳ ಅಗತ್ಯ ಇದೆ. ಅಂಗನವಾಡಿ ಕೇಂದ್ರಗಳು ಸಹ ಹೊಸ ಪರಿಸ್ಥಿತಿಗೆ ಹೊಂದಿಕೊಳ್ಳಬೇಕಾಗುತ್ತದೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಇತರ ನಿಯಮಗಳನ್ನು ಪಾಲಿಸುವುದು ಪಾಲಿಸಬೇಕಾಗುತ್ತದೆ. ಆದರೆ ಇವೆಲ್ಲಗಳಿಗೂ ಸಮಯ ತಗಲುತ್ತದೆ. ಇದಲ್ಲದೆ, ಜೀವನೋಪಾಯದ ಮೇಲೆ ಪರಿಣಾಮ ಬೀರುವುದರಿಂದ ಮತ್ತು ಹಣದ ಹರಿವು ಕಡಿಮೆ ಯಾಗಿರುವುದರಿಂದ - ದೈನಂದಿನ ಆಹಾರ ಅವಶ್ಯಕತೆಗಳನ್ನು ಸಹ ಪೂರೈಸುವುದು ಒಂದು ಸವಾಲಾಗಿದೆ. ಗರ್ಭಿಣಿ ಮಹಿಳೆಯರಿಗೆ ಮತ್ತು ಹಾಲುಣಿಸುವ ತಾಯಂದಿರಿಗೆ ಪೌಷ್ಠಿಕಾಂಶದ ಮಟ್ಟವನ್ನು ಕಾಪಾಡಿಕೊಳ್ಳುವುದು ಇನ್ನೂ ಕಠಿಣವಾಗಿರುತ್ತದೆ.

ಇದಲ್ಲದೆ, ಅಂಗನವಾಡಿ ಕೇಂದ್ರಗಳು ಅಂಗನವಾಡಿ ಕಾರ್ಯಕರ್ತೆಯರು (AWWs) ಮತ್ತು ಇತರ ಸಿಬ್ಬಂದಿಯನ್ನು ಅವಲಂಬಿಸಿವೆ. ಸಮಾಲೋಚನೆ, ತಾಯಿಯ ಆರೈಕೆ, ಮಕ್ಕಳಿಗೆ ಬಾಲ್ಯದ ಶಿಕ್ಷಣ ಮುಂತಾದ ವಿವಿಧ ಚಟುವಟಿಕೆಗಳ ಜವಾಬ್ದಾರಿಯನ್ನು ಅವರು ಹೊತ್ತಿದ್ದಾರೆ. ದುರದೃಷ್ಟವಶಾತ್, ಅವರನ್ನು ಸರ್ಕಾರದ ಪ್ರಸ್ತುತ ಐಸಿಡಿಎಸ್ ಮಾರ್ಗಸೂಚಿಗಳ ಅಡಿಯಲ್ಲಿ ಸ್ವಯಂಸೇವಕರು ಮತ್ತು ಗುತ್ತಿಗೆ ಕಾರ್ಮಿಕರೆಂದು ವರ್ಗೀಕರಿಸಿರುವುದರಿಂದ, ಅವರಿಗೆ ನಿಗದಿತ ವೇತನವನ್ನು ನೀಡುತ್ತಿಲ್ಲ. ವೇತನದ ಬದಲಾಗಿ ಅವರು ಗೌರವಧನವನ್ನು ಪಡೆಯುತ್ತಾರೆ, ಇದು ಹೆಚ್ಚಿನ ರಾಜ್ಯಗಳಲ್ಲಿ ನೀಡುವ ನುರಿತ ಸರ್ಕಾರಿ ನೌಕರರ ಕನಿಷ್ಠ ವೇತನಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ.

ಅಕ್ಟೋಬರ್ 2018 ರಲ್ಲಿ, 8 ವರ್ಷಗಳ ಅಂತರದ ನಂತರ ಕೇಂದ್ರ ಸರಕಾರ ಆಂಗನವಾಡಿ ಕಾರ್ಯಕರ್ತೆಯರ ಗೌರವಧನವನ್ನು ರೂ. 3,000 ರಿದ, ರೂ. 4,500 ಕ್ಕೆ ಮತ್ತು ಅಂಗನವಾಡಿ ಸಹಾಯಕರಿಗೆ ರೂ. 1,500 ರಿಂದ ರೂ. 2,250 ಕ್ಕೆ ಹೆಚ್ಚಿಸಲಾಯಿತು. ಈ ಹೆಚ್ಚಳದ ಹೊರತಾಗಿಯೂ, ಅವರ ಗೌರವಧನವು ತೀರಾ ಕಡಿಮೆ. ಈ ಮೊತ್ತವನ್ನು ಸಹ ಸರಿಯಾದ ಸಮಯಕ್ಕೆ ಪಾವತಿಸದಿರುವ ಹಲವಾರು ಉದಾಹರಣೆಗಳಿವೆ - ಇದರ ಪರಿಣಾಮವಾಗಿ ಬಿಹಾರ ಮತ್ತು ಜಾರ್ಖಂಡ್‌ನಂತಹ ಹಲವಾರು ರಾಜ್ಯಗಳಲ್ಲಿ ಆಗಾಗೆ ಮುಷ್ಕರಗಳು ನಡೆಯುತ್ತವೆ.

ಕೊವಿಡ್ 19 ಸಂದರ್ಭದಲ್ಲಿ ಈ ಕರೋನಾ ವಾರಿಯರ್ಸ್ ಮನೆ-ಮನೆಗೆ ಹೋಗಿ ಜಾಗೃತಿ ಮೂಡಿಸಲು ಮತ್ತು ಸಮೀಕ್ಷೆಗಳನ್ನು ನಡೆಸುವ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದ್ದಾರೆ. ವಾಸ್ತವವಾಗಿ, ಕೇಂದ್ರ ಸರ್ಕಾರದ ಕೊವಿಡ್ ಕಂಟೈನ್ಮೆಂಟ್ ಯೋಜನೆಯ ಅನುಸಾರ AWW ಗಳಿಗೆ ಕೊವಿಡ್ ಕುರಿತು ಜನ ಜಾಗೃತಿ ಮೂಡಿಸುವಲ್ಲಿ ಮತ್ತು ರೋಗಲಕ್ಷಣಗಳ ಮೂಲ ತಪಾಸಣೆಯಲ್ಲಿ ಗಣನೀಯ ಪಾತ್ರವನ್ನು ವಹಿಸಲಾಗಿದೆ. ಆದರೂ, ಅವರ ಅನುಭವಗಳ ಕುರಿತು ತಿಳಿಯಲು ನಾವು ಅವರೊಂದಿಗೆ ಮಾತನಾಡಿದಾಗ (ವಿವರಗಳು ಇಲ್ಲಿ ಲಭ್ಯವಿದೆ), ಅವರು ತಮ್ಮ ನಿಯಮಿತ ಕೆಲಸಗಳ ಜತೆಗೆ ಕೊವಿಡ್ ನಿವರ್ಹಣೆಯ ಕಾರ್ಯಗಳನ್ನು ಮಾಡಬೇಕಾಗಿದೆ ಮತ್ತು ಈ ಕಾರ್ಯಗಳನ್ನು ನಿರ್ವಹಿಸಲು ಅವರಿಗೆ ಸಂಪನ್ಮೂಲಗಳ ಕೊರತೆಯಿದೆ.

ಅಂತಹ ಸಂದರ್ಭಗಳಲ್ಲಿ, ಐಸಿಡಿಎಸ್ ಅಡಿಯಲ್ಲಿ ಪೌಷ್ಠಿಕಾಂಶ ಮತ್ತು ಆರಂಭಿಕ ಶಿಕ್ಷಣದ ಬಗ್ಗೆ ಅಗತ್ಯವಾದ ಗಮನ ಮತ್ತು ಕಾಳಜಿಯನ್ನು ವಹಿಸಲು ಅವರಿಗೆ ಕಷ್ಟಕರವಾಗಿದೆ ಎನ್ನುವುದು ಗಮನಿಸಬೇಕಾದ ಅಂಶ. ಅಲ್ಲದೆ, ರಾಜ್ಯ ಸರಕಾರಕ್ಕೆ ಬರುವ ಆದಾಯ ಕಡಿಮೆ ಆಗಿರುವುದರಿಂದ, ಈ ಮುಂಚೂಣಿ ಕೊರೋನಾ ವಾರಿಯರ್ಸ್ ಗೆ ಬರುವ ಗೌರವಧನವು ಇತರ ತುರ್ತು ಅಗತ್ಯಗಳಾದ ಆಸ್ಪತ್ರೆಯ ಹಾಸಿಗೆಗಳು, ರಕ್ಷಣಾ ಸಾಧನಗಳು, ಪಡಿತರ ಮತ್ತು ಇತರ ಅಗತ್ಯಗಳಿಗೆ ವೆಚ್ಚವಾಗುವ ಅಪಾಯವಿದೆ.

ಹಾಗಾಗಿ ಈ ಕಾಳಜಿಯನ್ನು ಹೇಗೆ ಬಗೆಹರಿಸಬಹುದು..?

ಭಾರತದಲ್ಲಿ, 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾವುಗಳಲ್ಲಿ 68% ಅಪೌಷ್ಟಿಕತೆಯಿಂದಾಗಿ (ಹೆಚ್ಚಿನ ವಿವರಗಳಿಗಾಗಿ ಇಲ್ಲಿ ನೋಡಿ), ಲಾಕ್‌ಡೌನ್ ಮತ್ತು ಸಾಂಕ್ರಾಮಿಕ ರೋಗದಿಂದ ಉದ್ಭವಿಸಿರುವ ಸೇವಾ ವಿತರಣೆಯಲ್ಲಿನ ಅಡಚಣೆಯಿಂದಾಗಿ ಈ ಸಮಯದಲ್ಲಿ ಜನಿಸಿದ ಮಕ್ಕಳಿಗೆ ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ. ಅಂಗನವಾಡಿಗಳಲ್ಲಿ ನೋಂದಾಯಿತರಿಗೆ ಸಿದ್ಧಪಡಿಸಿದ ಬಿಸಿ ಊಟ ಮತ್ತು ಮನೆಗೆ ಪೂರೈಸುವ ಪಡಿತರಕ್ಕೆ ಒಣ ಪಡಿತರವನ್ನು ಒದಗಿಸುವುದು ಸೇರಿದಂತೆ ಪೌಷ್ಠಿಕಾಂಶ ಸೇವೆಗಳನ್ನು ಖಾತ್ರಿಪಡಿಸುವ ಕ್ರಮಗಳನ್ನು ಹಲವಾರು ರಾಜ್ಯಗಳು ಘೋಷಿಸಿರುವುದು ಹೃದಯಸ್ಪರ್ಶಿಯಾಗಿದೆ. ಆದಾಗ್ಯೂ, ಈ ವಿಚಾರದಲ್ಲಿ ಜಾಗರೂಕರಾಗಿರುವುದು ಅವಶ್ಯಕವಾಗಿದೆ.

ಮೊದಲಿಗೆ, ಈ ಹಿಂದೆ ನೋಂದಾಯಿತ ಗೊಂಡಿರುವ ಫಲಾನುಭವಿಗಳನ್ನು ಮೀರಿ ಪೌಷ್ಥಿಕಾಂಶ ಹಂಚಿಕೆಯ ವ್ಯಾಪ್ತಿಯನ್ನು ವಿಸ್ತರಿಸಬೇಕಾಗುತ್ತದೆ. ಹೀಗಾಗಿ, ಅಂಗನವಾಡಿ ಕಾರ್ಯಕರ್ತೆಯರು ನಡೆಸುವ ನಿಯಮಿತ ಸಮೀಕ್ಷೆಗಳ ಮೂಲಕ ಈ ಸೇವೆಗಳಿಗೆ ಪ್ರವೇಶ ಅಗತ್ಯವಿರುವ ಜನರ ಸಂಖ್ಯೆಯನ್ನು ಸರ್ಕಾರ ಮರು ಮೌಲ್ಯಮಾಪನ ಮಾಡುವುದು ಕಡ್ಡಾಯವಾಗಿದೆ. ಕೊವಿಡ್ ನಿರ್ವಹಣೆಗಾಗಿ ಪ್ರಸ್ತುತ ಮನೆ-ಮನೆ-ಜಾಗೃತಿ ಅಭಿಯಾನವು ಯಾರನ್ನೂ ಹೊರಗುಳಿಯದಂತೆ ತಡೆಯಲು ಈ ಪ್ರದೇಶದ ಜನರ ಸಂಖ್ಯೆಯನ್ನು ನಿರ್ಣಯಿಸಲು ಕ್ರಮ ಕೈಗೊಳ್ಳಬಹುದಾಗಿದೆ.

ಎರಡನೆಯದಾಗಿ, ಪೂರಕ ಪೌಷ್ಠಿಕಾಂಶವು ಗರ್ಭಿಣಿಯರು ಮತ್ತು ಮಕ್ಕಳನ್ನು ತಲುಪುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ಮತ್ತು ಸೋಂಕಿನ ಅಪಾಯವನ್ನು ತಪ್ಪಿಸುವುದನ್ನು ಖಾತ್ರಿಪಡಿಸಿಕೊಳ್ಳಬೇಕಾಗಿದೆ. ಒಡಿಶಾದಂತಹ ರಾಜ್ಯಗಳು ಮಾಡುತ್ತಿರುವಂತೆ ಪಡಿತರವನ್ನು ಮನೆ ಬಾಗಿಲಿಗೆ ತಲುಪಿಸುವ ಅಗತ್ಯವಿರುತ್ತದೆ. ಕೆಲವು ರಾಜ್ಯಗಳು - ಜಾರ್ಖಂಡ್‌ನಂತೆ - ಆಗಾಗ್ಗೆ ಜನರು ಪಡಿತರ ಕೇಂದ್ರಗಳಲ್ಲಿ ಜಮಾಯಿಸುವುದನ್ನು ತಪ್ಪಿಸಲು ಹಲವಾರು ತಿಂಗಳ ಪಡಿತರವನ್ನು ಏಕಕಾಲದಲ್ಲಿ ವಿತರಿಸಿವೆ. ಆದಾಗ್ಯೂ, ಮನೆಗಳಲ್ಲಿ ಶೇಖರಣಾ ಸ್ಥಳದ ಲಭ್ಯತೆಯೊಂದಿಗೆ ಇದನ್ನು ಸರಿಹೊಂದಿಸಬೇಕಾಗಿದೆ.

ಕೆಲವು ಪ್ರದೇಶಗಳಲ್ಲಿ ಆಹಾರವನ್ನು ಒದಗಿಸುವುದು ಕಷ್ಟಕರವಾದರೆ ನಗದು ವರ್ಗಾವಣೆಯನ್ನು ಒದಗಿಸುವುದು ಇನ್ನೊಂದು ಆಯ್ಕೆಯಾಗಿದೆ. ಅಂಗನವಾಡಿ ಫಲಾನುಭವಿಗಳಿಗೆ ಪೂರಕ ಪೌಷ್ಠಿಕಾಂಶದ ಬದಲಾಗಿ ಪ್ರತಿ ತಿಂಗಳು ನಗದು ನೀಡುವ ಮೂಲಕ ಬಿಹಾರ ಸರ್ಕಾರ ಇದನ್ನು ಮಾಡಿದೆ. ಆದಾಗ್ಯೂ, ನಗದು ವರ್ಗಾವಣೆಯನ್ನು ಬಳಸಿದರೆ, ಎಲ್ಲಾ ಫಲಾನುಭವಿಗಳಿಗೆ ಖಾತೆಗಳಿವೆ, ಹಣವು ಸಮಯಕ್ಕೆ ಸರಿಯಾಗಿ ತಲುಪುತ್ತದೆ ಮತ್ತು ಹಣವನ್ನು ಬಳಸಿಕೊಳ್ಳಲು ಅವರು ಸಮರ್ಥರಾಗಿದ್ದಾರೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ.

ಮೂರನೆಯದಾಗಿ, ಮನೆಗೆ ಪೂರೈಸುವ ಪಡಿತರ ಆಹಾರದ ಕೊರತೆಯಿಂದಾಗಿ ಮತ್ತು ಲಾಕ್‌ಡೌನ್ ಸಮಯದಲ್ಲಿ ಆಹಾರದ ಸೀಮಿತ ಲಭ್ಯತೆಯನ್ನು ನೀಡುತ್ತಿರುವುದರಿಂದ, ಮಹಿಳೆಯರಿಗೆ ಸಾಕಷ್ಟು ಆಹಾರಕ್ರಮದ ಬಗ್ಗೆ ಸಲಹೆ ನೀಡುವುದು ಮುಖ್ಯವಾಗಿದೆ. ಮನೆಗೆ ಪೂರೈಸುವ ಪಡಿತರದ ಮೂಲಕ ಅಥವಾ ಆರೋಗ್ಯ ಕಾರ್ಯಕರ್ತರು ಮನೆಗಳಿಗೆ ಭೇಟಿ ನೀಡಿದಾಗ ಜಾಗೃತಿ ಮೂಡಿಸಬಹುದಾಗಿದೆ. ಈ ಅವಕಾಶಗಳನ್ನು ರೇಡಿಯೋ ಮತ್ತು ಸಮೂಹ ಮಾಧ್ಯಮ ಅಭಿಯಾನಗಳಿಂದ ಸಾಧ್ಯವಾಗಿಸಬಹುದು.

ಅಂತಿಮವಾಗಿ, ಪ್ರಮುಖ ಸೇವೆಗಳನ್ನು ಒದಗಿಸುವುದನ್ನು ಖಚಿತಪಡಿಸಿಕೊಳ್ಳಲು ಪೌಷ್ಠಿಕಾಂಶಕ್ಕಾಗಿ ಮೀಸಲಾಗಿರುವ ರಿಂಗ್-ಫೆನ್ಸಿಂಗ್ ನಿಧಿಯನ್ನು ಬಳಸಿಕೊಳ್ಳುವುದು ಅತ್ಯಗತ್ಯ. ಇದರರ್ಥ AWW ಗೌರವಧನ ಸೇರಿದಂತೆ ಎಲ್ಲಾ ಪೌಷ್ಠಿಕಾಂಶ ಸಂಬಂಧಿತ ಹಣವನ್ನು ಪೂರ್ಣವಾಗಿ ಮತ್ತು ಸಮಯಕ್ಕೆ ಸರಿಯಾಗಿ ಬಿಡುಗಡೆ ಮಾಡಬೇಕು.

ಕಳೆದ ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರದ ಪೋಶನ್ ಅಭಿಯಾನ್ ಮತ್ತು ಅದರ ಕೆಳಗೆ ಬರುವು ವಿವಿಧ ಅಭಿಯಾನಗಳ ಮೂಲಕ ಅಪೌಷ್ಟಿಕತೆಯನ್ನು ನಿರ್ಮೂಲನೆ ಮಾಡುವಲ್ಲಿ ಮಹತ್ವದ ಪ್ರಗತಿಯನ್ನು ಸಾಧಿಸಲಾಗಿದೆ. ಕೊವಿಡ್ ನಿಯಂತ್ರಣಕ್ಕೆ ಕೈಗೊಂಡ ಕ್ರಮಗಳು ಮತ್ತು ಲಾಕ್‌ಡೌನ್‌ ನಿರ್ಣಯ ಏಕಾಏಕಿ ಈ ಚಟುವಟಿಕೆಗಳಿಗೆ ಕಡಿವಾಣ ಹಾಕಿದಂತಾಗಿದೆ. ಅಪೌಷ್ಟಿಕತೆಯ ವಿರುದ್ಧ ಭಾರತದ ನಿರಂತರ ಹೋರಾಟಕ್ಕೆ ಮತ್ತೊಮ್ಮೆ ವೇಗವನ್ನು ಹೆಚ್ಚಿಸುವುದು ಬಹಳ ಅಗತ್ಯವಾಗಿದೆ.

ABOUT THE AUTHOR

...view details