ಹೈದರಾಬಾದ್: ಹಾರ್ವರ್ಡ್ ಮೆಡಿಕಲ್ ಸ್ಕೂಲ್‌ನ ನರವಿಜ್ಞಾನಿಗಳ ನೇತೃತ್ವದ ಹೊಸ ಅಧ್ಯಯನ, ಕೆಲವು ಕೋವಿಡ್-19 ರೋಗಿಗಳು ಅನುಭವಿಸುವ ತಾತ್ಕಾಲಿಕ ವಾಸನೆಯ ನಷ್ಟವು ಅಪಾಯಕಾರಿಯಲ್ಲ ಎಂಬ ವಿಚಾರವನ್ನು ಕಂಡುಹಿಡಿದಿದೆ.
ವಾಸನೆಯ ತಾತ್ಕಾಲಿಕ ನಷ್ಟ ಅಥವಾ ಅನೋಸ್ಮಿಯಾ, ಮುಖ್ಯ ನರವೈಜ್ಞಾನಿಕ ಲಕ್ಷಣವಾಗಿದೆ ಮತ್ತು ಇದು ಕೊರೊನಾ ಆರಂಭಿಕ ಮತ್ತು ಸಾಮಾನ್ಯವಾಗಿ ವರದಿಯಾದ ಸೂಚಕಗಳಲ್ಲಿ ಒಂದಾಗಿದೆ. ಜ್ವರ ಮತ್ತು ಕೆಮ್ಮಿನಂತಹ ಇತರ ರೋಗಲಕ್ಷಣಗಳಿಗಿಂತ ಇದು ರೋಗವನ್ನು ಉತ್ತಮವಾಗಿ ಊಹಿಸುತ್ತದೆ ಎಂದು ಅಧ್ಯಯನಗಳು ಹೇಳುತ್ತಿವೆ.