ಕರ್ನಾಟಕ

karnataka

ETV Bharat / bharat

ಮಹಾಮಳೆ ಆರ್ಭಟಕ್ಕೆ ತತ್ತರಿಸಿದ ಬಿಹಾರ; ಜನಜೀವನ ಅಸ್ತವ್ಯಸ್ತ - ಮುಖ್ಯಮಂತ್ರಿ ನಿತೀಶ್ ಕುಮಾರ್

ವರುಣನ ಆರ್ಭಟಕ್ಕೆ ಬಿಹಾರ ತತ್ತರಿಸಿದೆ. ಭಾರೀ ಮಳೆಯಿಂದ ರಾಜಧಾನಿ ಪಾಟ್ನಾ ಸೇರಿದಂತೆ ರಾಜ್ಯದ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ.

ಬಿಹಾರ

By

Published : Sep 28, 2019, 1:30 PM IST

ಪಾಟ್ನಾ (ಬಿಹಾರ): ವರುಣನ ಆರ್ಭಟಕ್ಕೆ ಬಿಹಾರ ತತ್ತರಿಸಿದೆ. ಭಾರೀ ಮಳೆಯಿಂದ ರಾಜಧಾನಿ ಪಾಟ್ನಾ ಸೇರಿದಂತೆ ರಾಜ್ಯದ ಹಲವೆಡೆ ಜನಜೀವನಕ್ಕೆ ತೀವ್ರ ತೊಂದರೆಯಾಗಿದೆ.

ಪಾಟ್ನಾದಲ್ಲಿ ಇಂದೂ ಕೂಡ ಮಳೆ ಮುಂದುವರೆದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಅಲ್ಲದೆ ರಸ್ತೆಗಳೆಲ್ಲ ಜಲಾವೃತವಾಗಿದ್ದು, ವಾಹನ ಸಂಚಾರ ದುಸ್ತರವಾಗಿದೆ. ಅಲ್ಲದೆ ವಸತಿ ಪ್ರದೇಶಗಳು, ಆಸ್ಪತ್ರೆಗಳಿಗೂ ನೀರು ನುಗ್ಗಿದ್ದು ಜನ ಸಾಮಾನ್ಯರು ಪರದಾಡುವಂತಾಗಿದೆ.

ಇನ್ನು ಹವಾಮಾನ ಇಲಾಖೆ ಮಾಹಿತಿಯಂತೆ ಮುಂದಿನ ಎರಡು ದಿನಗಳವರೆಗೂ ಪಾಟ್ನಾದಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ. ಈ ಮಧ್ಯೆ ಮುಖ್ಯಮಂತ್ರಿ ನಿತೀಶ್ ಕುಮಾರ್ ವಿಪತ್ತು ನಿರ್ವಹಣೆಗೆ ವಿಡಿಯೋ ಕಾನ್ಫರೆನ್ಸಿಂಗ್ ಸಭೆ ಕರೆದಿದ್ದಾರೆ.

ABOUT THE AUTHOR

...view details