ನವದೆಹಲಿ: ಹಿಂದಿಯನ್ನು ನಾವು ಗೌರವಿಸುತ್ತೇವೆ ಆದರೆ ನಮ್ಮ ಮಾತೃ ಭಾಷೆಗೂ ಆದ್ಯತೆ ನೀಡಬೇಕು ಎಂದು ಸಂಸದೆ ಸುಮಲತಾ ಲೋಕಸಭೆಯಲ್ಲಿಂದು ಒತ್ತಾಯಿಸಿದ್ದಾರೆ.
ಶೂನ್ಯವೇಳೆಯಲ್ಲಿ ವಿಚಾರ ಪ್ರಸ್ತಾಪಿಸಿ ಮಾತನಾಡಿದ ಅವರು, ಭಾರತ ಒಕ್ಕೂಟ ವ್ಯವಸ್ಥೆ ಮತ್ತು ವೈವಿಧ್ಯತೆಯ ಹಾಗೂ ಇಡೀ ವಿಶ್ವದಲ್ಲೇ ಒಂದು ಗುಣಮಟ್ಟದ ದೇಶವಾಗಿದೆ. ಕರ್ನಾಟಕದಲ್ಲಿ ಬಹುತ್ವ ಸಂಪ್ರದಾಯವನ್ನು ಮೈಗೂಡಿಸಿಕೊಂಡಿದ್ದು, ಅದನ್ನು ಗೌರವಿಸುತ್ತಿದ್ದೇವೆ ಎಂದು ಹೇಳಿದರು.
ಹಿಂದಿ ಜೊತೆಗೆ ಕನ್ನಡ ಭಾಷೆಗೂ ಆದ್ಯತೆ ನೀಡಿ ; ಲೋಕಸಭೆಯಲ್ಲಿ ಸುಮಲತಾ ಒತ್ತಾಯ ನಮ್ಮ ರಾಜ್ಯ ಭಾಷೆ ಕನ್ನಡ ಸಾವಿರಾರು ವರ್ಷಗಳ ಹಳೆಯ ಭಾಷೆಯಾಗಿದೆ. ಜೊತೆಗೆ ಭಾರತ ಸರ್ಕಾರ ಇದನ್ನು ಶಾಸ್ತ್ರೀಯ ಭಾಷೆಯನ್ನಾಗಿ ಅಂಗೀಕರಿಸಿದೆ. ದೇಶದ ಗಡಿಯಾಚೆಗೆ ನಮ್ಮ ಸಂಪ್ರಾದಾಯ ಮತ್ತು ಪ್ರಾದೇಶಿಕ ಭಾಷೆ ವಿಸ್ತರಿಸಿಕೊಂಡಿದೆ. ಮೂರು ಭಾಷೆಗಳ ಪ್ರಸ್ತಾಪವನ್ನು ಗಮನಕ್ಕೆ ತರುತ್ತಿದ್ದೇನೆ. ದಕ್ಷಿಣ ಭಾರತದ ಲಕ್ಷಾಂತರ ಮಂದಿಯ ಪರವಾಗಿ ಮಾತನಾಡುತ್ತಿದ್ದೇನೆ. ಹಿಂದಿ ಸಂವಾಹನಕ್ಕೆ ಪ್ರಮುಖ ಭಾಷೆಯಾಗಿದ್ದರೂ ಇದರ ಜೊತೆಗೆ ಪ್ರಾದೇಶಿಕ ಭಾಷೆಗೂ ಆದ್ಯತೆ ನೀಡಬೇಕು ಎಂದು ಒತ್ತಾಯಿಸಿದರು.
ಹಿಂದಿಯನ್ನು ಗೌರವಿಸುತ್ತೇವೆ. ಆದರೆ ನಮ್ಮ ಮಾತೃಭಾಷೆಗೂ ಆದ್ಯತೆ ನೀಡಬೇಕು. ನಾವು ಕನ್ನಡಿಗರು, ಭಾರತೀಯ ಸರ್ ಎಂದು ಕನ್ನಡದಲೇ ಪ್ರಸ್ತಾಪಿಸಿದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದರೆ ಉತ್ತಮ ಭವಿಷ್ಯ ಇರಲಿದೆ ಎಂದು ಲೋಕಸಭೆಯಲ್ಲಿ ಗಮನ ಸೆಳೆದರು.