ಶ್ರೀನಗರ( ಜಮ್ಮು ಕಾಶ್ಮೀರ): ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯಲ್ಲಿ ಬಂದೂಕುಧಾರಿಗಳು ಜಮ್ಮು ಕಾಶ್ಮೀರ ಬ್ಯಾಂಕ್ನ ವ್ಯಾನ್ನಲ್ಲಿ ಸುಮಾರು 60 ಲಕ್ಷ ರೂಪಾಯಿ ದರೋಡೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.
ಬ್ಯಾಂಕ್ ವ್ಯಾನ್ನಿಂದ 60 ಲಕ್ಷ ರೂ. ದೋಚಿ ಬಂದೂಕುಧಾರಿಗಳು ಪರಾರಿ
ಬಂದೂಕುಧಾರಿಗಳು ಬ್ಯಾಂಕೊಂದರಿಂದ ಸುಮಾರು 60 ಲಕ್ಷ ರೂಪಾಯಿ ಲೂಟಿ ಮಾಡಿರುವ ಘಟನೆ ಜಮ್ಮು ಕಾಶ್ಮೀರದಲ್ಲಿ ನಡೆದಿದೆ.
gun-man-looted-bank-in-shopian
ಬೆಳಗ್ಗೆ 10 ಗಂಟೆಗೆ ಅಪರಿಚಿತ ಬಂದೂಕುಧಾರಿಗಳು ದಕ್ಷಿಣ ಕಾಶ್ಮೀರದ ಜಾಮೀಯಾ ಮಸೀದಿ ಪ್ರದೇಶದಲ್ಲಿರುವ ಬ್ಯಾಂಕ್ ಬಳಿಯಿದ್ದ ವ್ಯಾನ್ನಿಂದ ಸುಮಾರು 60 ಲಕ್ಷ ರೂಪಾಯಿ ದೋಚಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಈ ಬಗ್ಗೆ ದೂರನ್ನು ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.
Last Updated : Nov 5, 2020, 4:27 PM IST