ನವದೆಹಲಿ: ಉಗ್ರರು ನಡೆಸಿದ ಭಯೋತ್ಪಾದನ ದಾಳಿಗೆ ಪ್ರತಿಕಾರವಾಗಿ ಭಾರತೀಯ ಸೇನೆ 2016 ರಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ಗೆ ನಾಳೆ ನಾಲ್ಕು ವರ್ಷ ಪೂರ್ಣಗೊಳ್ಳಲಿದ್ದು, ಸೋಮವಾರ ಕೇಂದ್ರ ಸರ್ಕಾರ ನಾಲ್ಕನೇ ವಾರ್ಷಿಕೋತ್ಸವವನ್ನು ಆಚರಿಸಲಿದೆ.
ಸರ್ಜಿಕಲ್ ಸ್ಟ್ರೈಕ್ಗೆ 4 ವರ್ಷ: ಮನ್ ಕಿ ಬಾತ್ನಲ್ಲಿ ಸೈನಿಕರ ಕಾರ್ಯ ಶ್ಲಾಘಿಸಿದ ಮೋದಿ
ಕೇಂದ್ರ ಸರ್ಕಾರ ನಾಳೆ 2016ರ ಸರ್ಜಿಕಲ್ ಸ್ಟ್ರೈಕ್ನ ನಾಲ್ಕನೇ ವಾರ್ಷಿಕೋತ್ಸವವನ್ನು ಆಚರಿಸಲಿದ್ದು, ಮನ್ ಕಿ ಬಾತ್ ಕಾರ್ಯುಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ನಮ್ಮ ಕೆಚ್ಚೆದೆಯ ಸೈನಿಕರನ್ನು ಶ್ಲಾಘಿಸಿದ್ದಾರೆ
ಸೆಪ್ಟೆಂಬರ್ 18 ರಂದು ಕಾಶ್ಮೀರದ ಉರಿಯಲ್ಲಿ ಸೇನಾ ನೆಲೆಯ ಮೇಲೆ ಪಾಕಿಸ್ತಾನ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ, 2016 ರ ಸೆಪ್ಟೆಂಬರ್ 27-28ರ ರಾತ್ರಿ ನಡೆದ ಭಾರತೀಯ ಸೇನೆ ಸರ್ಜಿಕಲ್ ಸ್ಟ್ರೈಕ್ ನಡೆಸಿತ್ತು.
ಇಂದು ಮನ್ ಕಿ ಬಾತ್ ಕಾರ್ಯಕ್ರಮದ 69ನೇ ಆವೃತ್ತಿಯಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಭಾರತೀಯ ಸೈನಿಕರ ಸಾಧನೆಯನ್ನು ಶ್ಲಾಘಿಸಿದ್ದಾರೆ. ನಾಲ್ಕು ವರ್ಷಗಳ ಹಿಂದೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ನಿಂದ ನಮ್ಮ ಸೈನಿಕರ ಧೈರ್ಯ ಮತ್ತು ಶೌರ್ಯಕ್ಕೆ ಜಗತ್ತು ಸಾಕ್ಷಿಯಾಯಿತು. ನಮ್ಮ ಕೆಚ್ಚೆದೆಯ ಸೈನಿಕರು ಭಾರತ ಮಾತೆಯ ವೈಭವ ಮತ್ತು ಗೌರವವನ್ನು ರಕ್ಷಿಸುವ ಧ್ಯೇಯ ಮತ್ತು ಗುರಿಯನ್ನು ಹೊಂದಿದ್ದರು ಎಂದು ಹೇಳಿದ್ದಾರೆ.