ನವದೆಹಲಿ: ಕೊರೊನಾ ಹಾವಳಿಯಿಂದಾಗಿ ಕಳೆದ 7 ತಿಂಗಳಿನಿಂದ ಬಾಗಿಲು ಮುಚ್ಚಿದ್ದ ಚಿತ್ರಮಂದಿರಗಳಿಗೆ ರಿಲೀಫ್ ಸಿಕ್ಕಿದೆ. ಅಕ್ಟೋಬರ್ 15ರಿಂದ ಷರತ್ತುಗಳ ಮೇರೆಗೆ ಥಿಯೇಟರ್‌ಗಳನ್ನ ತೆರೆಯುವಂತೆ ಆದೇಶ ನೀಡಲಾಗಿದೆ.
ಕೇಂದ್ರ ವಾರ್ತಾ ಹಾಗೂ ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ಈ ಕುರಿತು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಚಿತ್ರಮಂದಿರ ತೆರೆಯಲು ವಿಧಿಸಿರುವ ಪ್ರಮುಖ ಷರತ್ತುಗಳು:
- ಚಿತ್ರಮಂದಿರಗಳು ಶೇ.50ಕ್ಕಿಂತ ಹೆಚ್ಚು ಪ್ರೇಕ್ಷಕರು ಕೂರುವಂತಿಲ್ಲ
- ಪ್ರೇಕ್ಷಕರ ನಡುವೆ ದೈಹಿಕ ಅಂತರ ಹಾಗೂ ಮಾಸ್ಕ್ ಕಡ್ಡಾಯ
- ಪ್ರೇಕ್ಷಕರು ಕೂರದ ಸೀಟುಗಳನ್ನು ಗುರುತಿಸುವುದು
- ಹ್ಯಾಂಡ್ ವಾಶ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ಬಳಕೆಗೆ ಉತ್ತೇಜನ
- ಪ್ರೇಕ್ಷಕರು ಕಡ್ಡಾಯವಾಗಿ ಆರೋಗ್ಯ ಸೇತು ಆ್ಯಪ್ ಹೊಂದಿರಬೇಕು
- ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಹಾಗೂ ಸೋಂಕಿತರಿದ್ದರೆ ಪ್ರವೇಶ ನಿರ್ಬಂಧ
- ಡಿಜಿಟಲ್ ಪೇಮೆಂಟ್ಗೆ ಪ್ರೋತ್ಸಾಹ
- ಪ್ರತಿನಿತ್ಯ ಚಿತ್ರಮಂದಿರ ಸ್ವಚ್ಛತಾ ಕಾರ್ಯ ಮಾಡುವುದು
- ಟಿಕೆಟ್ ಕೌಂಟರ್ಗಳ ಸಂಖ್ಯೆ ಹೆಚ್ಚಿಸುವುದು
- ಚಿತ್ರಮಂದಿರದೊಳಗೆ ಬಂದ ಪ್ರೇಕ್ಷಕರು ಓಡಾಡುವುದಕ್ಕೆ ತಡೆ
- ಟಿಕೆಟ್ ಕೌಂಟರ್ ಬಳಿ ದೈಹಿಕ ಅಂತರ ಕಾಪಾಡುವಂತೆ ನೋಡಿಕೊಳ್ಳುವುದು
- ಮಂದಿರದೊಳಗೆ ಉಗುಳುವುದು ನಿಷೇಧ
- ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರ ಮೊಬೈಲ್ ನಂಬರ್ ಪಡೆದುಕೊಳ್ಳುವುದು
- ದಿನಪೂರ್ತಿ ಟಿಕೆಟ್ ಕೌಂಟರ್ ತೆರೆದಿಡುವುದು ಹಾಗೂ ಮುಂಗಡ ಬುಕ್ಕಿಂಗ್ ಸೌಲಭ್ಯ ನೀಡುವುದು
- ತಿಂಡಿ-ತಿನಿಸು ಮಾರಾಟ ಕೌಂಟರ್ಗಳ ಹೆಚ್ಚಳ
- ಚಿತ್ರಮಂದಿರ ಸಿಬ್ಬಂದಿಗೆ ಪಿಪಿಇ, ಹ್ಯಾಂಡ್ ಗ್ಲೌಸ್, ಮಾಸ್ಕ್, ಸ್ಯಾನಿಟೈಸರ್ ಒದಗಿಸುವುದು
ಇದಿಷ್ಟೇ ಅಲ್ಲದೆ ಹಲವು ಷರತ್ತುಗಳನ್ನು ವಿಧಿಸುವ ಮೂಲಕ ಚಿತ್ರಮಂದಿರಗಳನ್ನ ತೆರೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.