ನವದೆಹಲಿ:'ಏಜೆಂಟ್ ಸ್ಮಿತ್' ಎಂಬ ಹೆಸರಿನ ಡೆಡ್ಲಿ ಮಾಲ್ವೇರ್ ವೈರಸ್ ಜಗತ್ತಿನಾದ್ಯಂತ ಇರುವ 25 ಮಿಲಿಯನ್ ಮೊಬೈಲ್ಗಳನ್ನು ಬಾಧಿಸಿದ್ದು ಈ ಕುರಿತಂತೆ ಗೂಗಲ್ 16 ಆ್ಯಪ್ಗಳನ್ನು ಪ್ಲೇಸ್ಟೋರ್ನಿಂದ ತೆಗೆದು ಹಾಕಿದೆ.
ಸುಮಾರು ಹದಿನಾರು ಆ್ಯಪ್ಗಳಿಗೆ ಈಗಾಗಲೇ ಈ ವೈರಸ್ ದಾಳಿ ನಡೆಸಿರುವುದು ತಿಳಿದು ಬಂದಿದ್ದು ಈ ಹಿನ್ನೆಲೆಯಲ್ಲಿ ಪ್ಲೇಸ್ಟೋರ್ನಿಂದ ತೆಗೆಯಲಾಗಿದೆ. ಪ್ಲೇಸ್ಟೋರ್ನಿಂದ ತೆಗೆಯಲಾಗಿದ್ದರೂ ಈಗಾಗಲೇ ಡೌನ್ಲೋಡ್ ಮಾಡಿರುವವರ ಮೊಬೈಲ್ನಲ್ಲಿ ಈ ಆ್ಯಪ್ ಎಂದಿನಂತೇ ಕಾರ್ಯನಿರ್ವಹಿಸಲಿದೆ. ಒಂದು ವೇಳೆ ನಿಮ್ಮ ಮೊಬೈಲ್ನಲ್ಲಿ ಕೆಳಗೆ ನೀಡಿರುವ ಆ್ಯಪ್ಗಳು ಇದ್ದಲ್ಲಿ ಮೊದಲಿಗೆ ಡಿಲೀಟ್ ಮಾಡುವುದು ಉತ್ತಮ.
Smartphoneಗೆ 'ಏಜೆಂಟ್ ಸ್ಮಿತ್' ಬಂದರೆ ಎಚ್ಚರ: ಇಲ್ಲವೆ ಬ್ಯಾಂಕಿಂಗ್ ಮಾಹಿತಿ ಸೋರಿಕೆ
ಯಾವುದೇ ಆ್ಯಪ್ಗಳಲ್ಲಿ ಅಶ್ಲೀಲ ಜಾಹೀರಾತುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರೆ ಆ್ಯಂಟಿ ವೈರಸ್ ಇನ್ಸ್ಟಾಲ್ ಮಾಡುವ ಅಗತ್ಯವಿದೆ. ಭಾರತದಲ್ಲಿ ಅತ್ಯಂತ ಜನಪ್ರಿಯವಾಗಿರುವ ವಾಟ್ಸ್ಆ್ಯಪ್ ಹಾಗೂ ಫ್ಲಿಪ್ ಕಾರ್ಟ್ ಆ್ಯಪ್ಗಳಿಗೆ ವೈರಸ್ ದಾಳಿಯ ಸಾಧ್ಯತೆ ಇದೆ ಎನ್ನಲಾಗಿದೆ.
ವೈರಸ್ ದಾಳಿಯಾಗಿರುವ ಹದಿನಾರು ಆ್ಯಪ್ಗಳು ಇಂತಿವೆ:
- ಲುಡೋ ಮಾಸ್ಟರ್
- ಸ್ಕೈ ವಾರಿಯರ್ಸ್: ಜನರಲ್ ಅಟ್ಯಾಕ್
- ಕಲರ್ ಫೋನ್ ಫ್ಲ್ಯಾಶ್: ಕಾಲ್ ಸ್ಕ್ರೀನ್ ಥೀಮ್
- ಬಯೋ ಬ್ಲಾಸ್ಟ್: ಇನ್ಫಿನಿಟಿ ಬ್ಯಾಟಲ್ ಶೂಟ್ ವೈರಸ್
- ಶೂಟಿಂಗ್ ಜೆಟ್
- ಫೋಟೋ ಪ್ರೊಜೆಕ್ಟರ್
- ಗನ್ ಹೀರೋ
- ಕುಕಿಂಗ್ ವಿಚ್
- ಬ್ಲಾಕ್ಮ್ಯಾನ್ ಗೋ
- ಕ್ರೇಜಿ ಜ್ಯೂಸಿಯರ್
- ಕ್ಲ್ಯಾಶ್ ಆಫ್ ವೈರಸ್
- ಆ್ಯಂಗ್ರಿ ವೈರಸ್
- ರಾಬಿಟ್ ಟೆಂಪಲ್
- ಸ್ಟಾರ್ ರೇಂಜ್
- ಕಿಸ್ ಗೇಮ್: ಟಚ್ ಆಫ್ ಹರ್ ಹಾರ್ಟ್
- ಗರ್ಲ್ ಕ್ಲೋಚ್ ಎಕ್ಸ್ರೇ ಸ್ಕ್ಯಾನ್ ಸಿಮ್ಯುಲೇಟರ್